ಬಹುನೀರಿಕ್ಷಿತ ಕುರುಕ್ಷೇತ್ರ ಚಿತ್ರದ ಮತ್ತೊಂದು ಟೀಸರ್​ ಔಟ್​​! ಫ್ಯಾನ್ಸ್​ ಮನಗೆದ್ದ ಟೀಸರ್​ನಲ್ಲೇನಿದೆ ಗೊತ್ತಾ?!

1946

ಸ್ಯಾಂಡಲವುಡ್​​ನ ಬಹುನೀರಿಕ್ಷಿತ ಹಾಗೂ ಬಹುಕೋಟಿ ವೆಚ್ಚದ ಅದ್ದೂರಿ ಚಿತ್ರ ಕುರುಕ್ಷೇತ್ರ ರಿಲೀಸ್​ಗೂ ಮುನ್ನವೇ ಸಾಕಷ್ಟು ಸುದ್ದಿಮಾಡುತ್ತಿದೆ. ತಾರಾಗಣ, ಚಿತ್ರದ ಅದ್ದೂರಿತನದಿಂದಲೇ ಸುದ್ದಿಯಾಗಿರುವ ಈ ಚಿತ್ರದ ಮತ್ತೊಂದು ಟೀಸರ್​ ರಿಲೀಸ್​ ಆಗಿದ್ದು, ಕುರುಕ್ಷೇತ್ರದ ಮತ್ತಷ್ಟು ವಿಶೇಷತೆಗಳನ್ನು ಅನಾವರಣಗೊಳಿಸಿದೆ.

ad

ಬಿಡುಗಡೆಯಾದ ಒಂದೇ ದಿನದಲ್ಲಿ ಟೀಸರ್​ ನ್ನು 2.5 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಈ ಟೀಸರ್​ನಲ್ಲಿ ಕುರುಕ್ಷೇತ್ರದ ಮತ್ತಷ್ಟು ಪಾತ್ರಗಳನ್ನು ರೀವಿಲ್​ ಮಾಡಲಾಗಿದ್ದು, ಅತ್ಯಾಕರ್ಷಕ ಗ್ರಾಫಿಕ್ಸ್​ ಮತ್ತು ತಂತ್ರಜ್ಞಾನದ ಶ್ರೀಮಂತಿಗೆ ಎದ್ದು ತೋರುತ್ತಿದೆ.

ದುರ್ಯೋಧನನಾಗಿ ದರ್ಶನ್​, ಅರ್ಜುನನ ಸಾರಥಿ ಕೃಷ್ಣನಾಗಿ ರವಿಚಂದ್ರನ್​, ಕರ್ಣನಾಗಿ ಅರ್ಜುನ್ ಸರ್ಜಾ, ಭೀಷ್ಮನಾ್ಗಿ ಅಂಬರೀಶ್​ ಅವರ ಪಾತ್ರ ಟೀಸರ್​ನಲ್ಲಿ ರಿವೀಲ್​ ಆಗಿದೆ. ಇನ್ನು ದ್ರೌಪದಿಯಾಗಿ ಸ್ನೇಹಾ, ಕುಂತಿಯಾಗಿ ಭಾರತಿ ವಿಷ್ಣುವರ್ಧನ್, ಶಕುನಿಯಾಗಿ ರವಿಶಂಕರ್, ಧರ್ಮರಾಯ್​ನಾಗಿ ಶಶಿಕುಮಾರ್ ಕಾಣಿಸಿಕೊಂಡಿರುವುದು ಹೊಸ ಟೀಸರ್​ನಲ್ಲಿ ಬಹಿರಂಗವಾಗಿದೆ.

ಈ ಬಹುನೀರಿಕ್ಷಿತ ಚಿತ್ರ ಅಗಸ್ಟ್​ 9 ರ ವರಮಹಾಲಕ್ಷ್ಮೀ ಹಬ್ಬದಂದು ತೆರೆಗೆ ಬರಲಿದ್ದು, ಏಕಕಾಲದಲ್ಲಿ ಕನ್ನಡ, ತೆಲುಗು,ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಈ ಸಿನಿಮಾ 2D ಮತ್ತು 3D ಯಲ್ಲಿ ಮೂಡಿ ಬರ್ತಿದೆ.

ಇನ್ನೊಂದು ವಿಶೇಷತೆಯೆಂದರೇ ಈ ಚಿತ್ರ ಚೀನಿ ಭಾಷೆಯಲ್ಲೂ ಡಬ್​ ಆಗಲಿದೆಯಂತೆ. ಇನ್ನು ಈ ಚಿತ್ರ ನಟ ಅಂಬರೀಶ್​ ಅವರ ಕೊನೆಯ ಚಿತ್ರವಾಗಿರೋದರಿಂದ ಮತ್ತಷ್ಟು ಕುತೂಹಲ ಹಾಗೂ ನೀರಿಕ್ಷೆ ಮೂಡಿಸಿದೆ.

Sponsored :

Related Articles