ಮತ್ತೊಂದು ವಿಕೆಟ್​ ಕಳೆದುಕೊಳ್ಳಲಿದ್ಯಾ ಸಮ್ಮಿಶ್ರ ಸರ್ಕಾರ!? ಇಂದೇ ರಾಜೀನಾಮೆ ಕೊಡ್ತಾರಾ ಸಚಿವ ಶಂಕರ್​?!

522

ಮೊನ್ನೆ ಮೊನ್ನೆ ಸಚಿವ ಸಂಪುಟ ಸೇರಿದ ಸಚಿವ ನಾಗೇಶ್​ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದ ಬೆನ್ನಲ್ಲೇ ಇನ್ನೋರ್ವ ಸಚಿವ ಶಂಕರ್ ಕೂಡ ರಾಜೀನಾಮೆ ನೀಡಲಿದ್ದು, ಸರ್ಕಾರದ ಆತಂಕ ಹೆಚ್ಚುತ್ತಲೇ ಇದೆ.

ad

ದಿಢೀರ ಬೆಳವಣಿಗೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಸಚಿವ ಎಚ್.ನಾಗೇಶ್, ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದರು. ಅಷ್ಟೇ ಅಲ್ಲ ಸ್ವತಂತ್ರ ಎಮ್​ಎಲ್​ಎಯಾಗಿ ತಮ್ಮ ಬೆಂಬಲವನ್ನು ಬಿಜೆಪಿ ಸರ್ಕಾರಕ್ಕೆ ನೀಡುವುದಾಗಿ ಘೋಷಿಸಿದ್ದರು.

ಇದರ ಬೆನ್ನಲ್ಲೇ, ಇದೀಗ ಮತ್ತೊರ್ವ ಸಚಿವ ಶಂಕರ್ ಕೂಡ ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಚಿವ ಶಂಕರ್ ಪೋನ್ ಕೂಡ ಸ್ವಿಚ್​​ ಆಪ್​ ಆಗಿದ್ದು, ಗೌಪ್ಯ ಸ್ಥಳದಲ್ಲಿ ಶಂಕರ್​ ಆಪ್ತರೊಂದಿಗೆ ಸಭೆ ನಡೆಸಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಶಂಕರ್ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಇದರಿಂದ ದೋಸ್ತಿ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಕಾಂಗ್ರೆಸ್​ ವತಿಯಿಂದ ಒಂದೇ ಸಚಿವ ಸ್ಥಾನ ಖಾಲಿ ಇದ್ದ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ, ಅತಿ ಮುತುವರ್ಜಿ ವಹಿಸಿ ತಮ್ಮ ಆಪ್ತ ಶಂಕರ್​ಗೆ ಸಚಿವ ಸ್ಥಾನ ಕೊಡಿಸಿದ್ದರು. ಆದರೆ ಇದೀಗ ಶಂಕರ್​ ತುರ್ತು ಸ್ಥಿತಿಯಲ್ಲಿ ಸರ್ಕಾರವನ್ನು ತ್ಯಜಿಸುತ್ತಿರೋದರಿಂದ ಜೆಡಿಎಸ್​ ಸೇರಿದಂತೆ ದೋಸ್ತಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಸಚಿವ ಶಂಕರ್ ಕೂಡಾ ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ.

ಸಚಿವ ಶಂಕರ್ ಕೂಡಾ ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ.

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಜುಲೈ 7, 2019

Sponsored :

Related Articles