ಯಾವ ಕ್ಷಣದಲ್ಲಾದರೂ ಮೈತ್ರಿ ಸರ್ಕಾರ ಪತನವಾಗಬಹುದು! ಮಾಜಿ ಸಿಎಂ ಅಚ್ಚರಿಯ ಭವಿಷ್ಯ!!

1428

ಯಾವುದೇ ಕ್ಷಣದಲ್ಲಾದ್ರು, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರ ಬೀಳಬಹುದು ಅಂತಾ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಾಂಬ್​​ ಸ್ಪೋಟಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿಯ ಅಭೂತಪೂರ್ವ ಗೆಲವು ಮೈತ್ರಿ‌ ಸರ್ಕಾರದ ಮೇಲೆ ಪರಿಣಾಮ‌ ಬೀರಿದ್ದು, ಹೀಗಾಗಿ ಯಾವುದೇ ಕ್ಷಣದಲ್ಲಾದ್ರು ಸರ್ಕಾರ ಬೀಳಬಹುದು ಎಂದರು.


ಈವಾಗ ಚುನಾವಣೆ ಫಲಿತಾಂಶದ ಪರಿಣಾಮ ಆರಂಭವಾಗಿದೆ. ಹೀಗಾಗಿ ನಾವು ಕಾದು ನೋಡುತ್ತೆವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬಹಳ‌ ಜನ ಶಾಸಕರು ಬಿಜೆಪಿಗೆ ಬರುತ್ತಾರೆ. ಈಗಾಗಲೆ ರಮೇಶ್ ಜಾರಕಿಹೊಳಿ ಟೀಂ ಆ ನಿಟ್ಟಿನಲ್ಲಿ ಕೆಲಸ ಆರಂಭ ಮಾಡಿದೆ. ಜೆಡಿಎಸ್ ನಿಂದಲೂ ಶಾಸಕರು ಬರಬಹುದು.ಯಾಕೆಂದ್ರೆ ದೇವೆಗೌಡರ ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ‌ ಎಂದರು.

ad

ಕಲಬುರ್ಗಿಯಲ್ಲಿ ತಂದೆ ಮಗನ ಗೆಲುವಿನಿಂದ ಸಾಕಷ್ಟು ಜನರು ಪ್ರೇರೆಪಿತರಾಗಿದ್ದಾರೆ. ಹೀಗಾಗಿ ಬಿಜೆಪಿ ಕನಿಷ್ಠ 6 ಕ್ಕೂ ಹೆಚ್ಚು ಶಾಸಕರು ಬರೋದಂತು ಗ್ಯಾರಂಟಿ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Sponsored :

Related Articles