ಆಂಟಿ – ಅಂಕಲ್ ಮದುವೆ ಪಜೀತಿಯ ಕತೆಯಿದು !! ಆಕೆ ಮಾಡಿದ್ದೇನು ಗೊತ್ತಾ ?

11408
9900071610

ಸಂಬಂಧಗಳನ್ನು ವ್ಯವಹಾರಿಕವಾಗಿ ಕುದುರಿಸಲು ಮುಂದಾದಾಗ ಏನೆಲ್ಲಾ ಅವಾಂತರಗಳಾಗುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಮದುವೆ ಅನ್ನೋದು ವೈಯುಕ್ತಿಕ ಸಂಬಂಧಗಳ ವಿಚಾರ. ಆದರೆ ಇತ್ತಿಚ್ಚೆಗೆ ಮದುವೆಯಲ್ಲೂ ವಿಚಾರದಲ್ಲೂ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳು, ಬ್ಯುಸಿನೆಸ್ ಗಳು ಶುರುವಾಗಿ ಸಮಸ್ಯೆಗಳು ಉದ್ಭವಿಸಿದೆ.

ad

 

ಬದಲಾದ ಜೀವನಶೈಲಿ, ಹೆಚ್ಚುತ್ತಿರುವ ಮೋಸ, ಮದುವೆ ಸಂಬಂಧಗಳಲ್ಲಿ ಉಂಟಾಗುತ್ತಿರುವ ಅಪನಂಬಿಕೆ, ಸಾಮಾಜಿಕ ತಾಣಗಳ ಪ್ರಭಾವದಿಂದಾಗಿ ವೈವಾಹಿಕ ಸಂಗತಿಗಳಿಗೆ ಪತ್ತೆದಾರರನ್ನು ಹುಡುಕಿಕೊಂಡು ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ನಂತರ ಮದುವೆಯಾಗಿ ಹಣ ವಂಚಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

 

ಮೋಸಗೊಂಡಿರುವ ವ್ಯಕ್ತಿ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಗ್ರಾಮದವರು. ಹಲವು ಸಂಘಟನೆಗಳಿಂದ ಗುರುತಿಸಿಕೊಂಡು ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ‘ಶಿವಾನಂದ ಹಳ್ಳೇರ’ ಎಂಬುವರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಸಂಸಾರದಲ್ಲಿ ಏನೋ ಬಿರುಕು ಬಂತು ಎಂದು ಹೆಂಡತಿಗೆ ಡಿವೋರ್ಸ್​ ಕೊಟ್ಟು ಒಂಟಿ ಜೀವನ ನಡೆಸ್ತಿದ್ದ ಶಿವಾನಂದ ಹಳ್ಳೇರ ಒಂಟಿ ಜೀವನದಿಂದ ಬೇಸರಗೊಂಡು ಮರುಮದುವೆಯಾಗಲು ಸುಖಸಂಸಾರ ಸಾಗಿಸುವ ಆಸೆಯಿಂದ ಮ್ಯಾಟ್ರಿಮೋನಿಯಾದಲ್ಲಿ ಬಯೋಡೆಟಾ ಅಪ್​ಲೋಡ್​ ಮಾಡಿದ್ದರು.

ಇದೆಲ್ಲವನ್ನು ನೋಡಿದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಖತರ್ನಾಕ್ ಮಹಿಳೆಯೊಬ್ಬಳು ಗಾಳ ಹಾಕೋಕೆ ಶುರು ಮಾಡಿದ್ದಾಳೆ. ನಾನು​ ನಿಮ್ಮನ್ನು ಮದುವೆ ಆಗ್ತೀನಿ ಎಂದು ಹೇಳಿದ್ದಾಳೆ. ಇದನ್ನು ನಂಬಿದ ಶಿವಾನಂದ ಹಳ್ಳೇರ ಉಕ್ಕಡಗಾತ್ರಿಯಲ್ಲಿ ಆ ಮಹಿಳೆ ಜೊತೆ ನೂತನ ವೈವಾಹಿಕ ಜೀವನ ಆರಂಭಿಸಿದ್ದಾನೆ.

ಮದುವೆ ಆದ ಸ್ವಲ್ಪ ದಿನ ಎಲ್ಲವೂ ಚೆನ್ನಾಗಿಯೇ ಇದ್ದು ನಂತರ ನನಗೆ ದೊಡ್ಡ ದೊಡ್ಡ ರಾಜಕಾರಣಿಗಳು ಗೊತ್ತು ಎಂದು ಫೋಟೋ ತೋರಿಸಿ ಮೋಸ ಮಾಡಿದ್ದಾಳೆ. ದಿನ ಕಳೀತಿದ್ದಂತೆ ಹಣಕ್ಕೆ ಬ್ರೇಕ್​ ಹಾಕೋಕೆ ಶುರು ಮಾಡಿದ ಆಕೆ ಏಳು ಲಕ್ಷದ 70 ಸಾವಿರ ರೂಪಾಯಿ ಕಿತ್ಕೊಂಡು ಇದೀಗ ಪರಾರಿಯಾಗಿದ್ದಾಳೆ.

ಶಿವಾನಂದ ಪೊಲೀಸ್​ ಠಾಣೆ ಮೆಟ್ಟಿಲೇರ್ತಿದ್ದಂತೆ ಆಕೆ ರಾಜೀ ಮಾಡಿಕೊಂಡು ಮೂರು ಕಂತಲ್ಲಿ ಹಣ ಕೊಡ್ತೀನಿ ಅಂತಾ ಮತ್ತೆ ಕಥೆ ಕಟ್ಟಿದ್ದಾಳೆ ಇದನ್ನು ನಂಬ್ಕೊಂಡಿದ್ದ ಶಿವಾನಂದ ಮತ್ತೆ ಇದೀಗಾ ಹಳ್ಳಕ್ಕೆ ಬಿದ್ದಿದ್ದಾನೆ. ಈಗ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡು ಪರಾರಿಯಾಗಿದ್ದಾಳೆ

Sponsored :


9900071610