ಅಣ್ಣನ ಬಳಿಕ ತಮ್ಮನ ಸರದಿ! ಸರ್ಕಾರ ಉರುಳಿಸ್ತಾರಂತೆ ಬಾಲಚಂದ್ರ ಜಾರಕಿಹೊಳಿ!!

2423
9900071610

ಒಂದೆಡೆ ಪ್ರವಾಹ ರಾಜ್ಯದ ಜನರನ್ನು ಸಂಕಷ್ಟಕ್ಕೆ ದೂಡಿದ್ದರೇ ಇನ್ನೊಂದೆಡೆ ಇನ್ನೂ ರಚನೆಯಾಗದ ಸಂಪುಟ ಸರ್ಕಾರದ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಿರುವಾಗಲೇ ಇನ್ನೂ ರಚನೆಯಾಗದ ಸರ್ಕಾರವನ್ನೇ ಉರುಳಿಸುವ ಪ್ರಯತ್ನ ನಡೆದಿರೋದು ಬೆಳಕಿಗೆ ಬಂದಿದ್ದು, ಬಿಎಸ್​ವೈ ಬೆಚ್ಚಿ ಬಿದ್ದಿದ್ದಾರೆ.

ad


ಹೌದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಂತಹದೊಂದು ಸ್ಫೋಟಕ ಬಾಂಬ್​ ಸಿಡಿಸಿದ್ದು, ನಿರಾಶ್ರಿತರಿಗೆ ಸರ್ಕಾರ ನೆರವಾಗದಿದ್ದರೇ, ನಿರಾಶ್ರಿತರಿಗೆ ಮನೆ ಕಟ್ಟಿ ಕೊಡದಿದ್ದರೇ, ಸರ್ಕಾರವನ್ನೆ ಕೆಡವಿ ಬಿಡ್ತೆನೆ ಎಂದು ಶಾಸಕರು ಅಬ್ಬರಿಸಿದ್ದಾರೆ.


ತಮ್ಮದೇ ಸರ್ಕಾರದ ವಿರುದ್ಧ ಬಾಲಚಂದ್ರ ಜಾರಕಿಹೊಳಿ ಗುಡುಗಿರೋದು ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಅಣ್ಣ ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಬಂದು ಮಂತ್ರಿಯಾದ್ರೆ ತಮ್ಮ ಬಾಲಚಂದ್ರ ಜಾರಕಿಹೊಳಿ ಪಕ್ಷ ಹಾಗೂ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗ್ತಾರಾ ಅನ್ನೋ ಅನುಮಾನ ಎಲ್ಲರನ್ನು ಕಾಡ್ತಿದ್ದು, ಅದಕ್ಕೆ ಬಾಲಚಂದ್ರ ಜಾರಕಿಹೊಳಿಯವರ ಇವತ್ತಿನ ಹೇಳಿಕೆ ಪುಷ್ಠಿ ನೀಡ್ತಿದೆ.

Sponsored :


9900071610