ಬಿಬಿಎಂಪಿ ಬ್ಯಾನರ್ ಬ್ಯಾನ್ ಆದೇಶ! ಸಿನಿ ಕಾರ್ಮಿಕರಿಗೆ ಕಷ್ಟಕ್ಕೆ ಸ್ಪಂದಿಸಿ ಶಿವಣ್ಣ ಮನವಿ!!

258

ಸಿನಿಮಾ ಪಬ್ಲಿಸಿಟಿ ಮಾಡೋದಿಕ್ಕೆ ಪೋಸ್ಟರ್​ಗಳು ಮುಖ್ಯ ಪಾತ್ರವಹಿಸುತ್ತವೆ. ಆದ್ರೆ ಇತ್ತೀಚೆಗೆ ಬಿಬಿಎಂಪಿ ಪೋಸ್ಟರ್​ಗಳನ್ನ ಬ್ಯಾನ್ ಮಾಡಿದೆ. ಇದರಿಂದ ಇದೇ ಕೆಲಸ ನಂಬಿಕೊಂಡು ಜೀವನ ಸಾಗಿಸುವವರಿಗೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ತಕ್ಷಣವೇ ಸ್ಪಂದಿಸಬೇಕು ಅಂತಾ ಕರ್ನಾಟಕ ಚಲನಚಿತ್ರ ಜಾಹೀರಾತು ನೌಕರರ ಸಂಘದಿಂದ ವಾಣಿಜ್ಯ ಮಂಡಳಿಗೆ ಮತ್ತು ನಟ ಶಿವರಾಜ್​ಕುಮಾರ್​ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

 

ad

 

ಸಿನಿಮಾ ಪೋಸ್ಟರ್ಸ್​ ಬ್ಯಾನ್​ ಆಗಿರುವ ಹಿನ್ನಲೆ ಇದನ್ನೇ ನಂಬಿಕೊಂಡು ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ತೊಂದರೆಯಾಗಿದ್ದು, ಅವರಿಗೆ ಯಾವುದೇ ರೀತಿಯ ದುಡಿಮೆ ಇಲ್ಲ. ಹೀಗಾಗಿ ಈ ಸಮಸ್ಯೆಗೆ ಸರ್ಕಾರ ಪರಿಹಾರ ನೀಡಬೇಕು ಅಂತ ಜಾಹೀರಾತು ಸಂಘದ ಅಧ್ಯಕ್ಷ ರವೀಂದ್ರನಾಥ್ ಮನವಿ ಮಾಡಿದ್ದಾರೆ. ರವೀಂದ್ರನಾಥ್​ಗೆ ಫಿಲ್ಮ್​ ಚೇಂಬರ್ ಮತ್ತು ನಟ ಶಿವರಾಜ್​ಕುಮಾರ್ ಕೂಡ ಸಾಥ್​ ನೀಡಿದ್ದು, ಸದ್ಯದಲ್ಲೇ ಸಿಎಂ ಕುಮಾರಸ್ವಾಮಿಯವರ ಬಳಿ ಈ ವಿಷಯವಾಗಿ ಮಾತನಾಡೋದಾಗಿ ನಟ ಶಿವರಾಜ್​ಕುಮಾರ್ ಭರವಸೆ ನೀಡಿದ್ದಾರೆ.

Sponsored :

Related Articles