ಅಂದ ಹೆಚ್ಚಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ ವೈದ್ಯೆ! ಬ್ಯೂಟಿಪಾರ್ಲರ್​ಗೆ ಹೋಗುವ ಹೆಂಗಳೆಯರೇ ಎಚ್ಚರ…ಎಚ್ಚರ!!

9897
9900071610

ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್​ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್​ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ad

ಬೆಂಗಳೂರಿನ ಸಿಎಂಎಚ್​ ರಸ್ತೆಯಲ್ಲಿರುವ ಕ್ಲಬ್​ ಸಿಟ್ರಸ್​​ ಸಲೂನ್​ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್​ಗೆ ತೆರಳಿದ್ದರು. ಈ ವೇಳೆ ಪೇಶಿಯಲ್​ ಗೆ ತಣ್ಣಿರು ಬಳಸಬೇಕಿದ್ದ ಪಾರ್ಲರ್ ಸಿಬ್ಬಂದಿ ಏಕಾಏಕಿ ಬೀಸಿ ನೀರು ಸುರಿದಿದ್ದಾರೆ. ಇದರಿಂದ ವೈದ್ಯೆ ಯಶೋಧಾ ಸಂಪೂರ್ಣ ಸುಟ್ಟು ಹೋಗಿದೆ.


ವೆರೋನಿಕಾ ಎಂಬಾಕೆಯ ಒಡೆತನದಲ್ಲಿ ಈ ಸಲೂನ್ ನಡೆಯುತ್ತಿದ್ದು, ಘಟನೆ ಬಳಿಕ ಸಿಬ್ಬಂದಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ವೈದ್ಯೆಯ ಮುಖ ಸಂಪೂರ್ಣ ಸುಟ್ಟು ಹೋದ ಪರಿಣಾಮ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗದೇ, ವೈದ್ಯೆಯನ್ನ ದೆಹಲಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಒಟ್ಟಿನಲ್ಲಿ ಸೌಂದರ್ಯ ಹೆಚ್ಚಿಸುವ ಪ್ರಯತ್ನದಲ್ಲಿ ವೈದ್ಯೆಯ ಮುಖ ಶಾಶ್ವತವಾಗಿ ಹಾಳಾಗಿದ್ದಲ್ಲದೇ ಜೀವ ಕೂಡ ಪಣಕ್ಕಿಡುವಂತಾಗಿದ್ದು ಮಾತ್ರ ದುರಂತವೇ ಸರಿ.

Sponsored :


9900071610