ಪಾರ್ಕ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಟ್ಟಾಗಿದ್ದು ಯಾಕೆ ? ಸಿಎಂ “ಸ್ವಾಭಿಮಾನ” ಕೆರಳಿದ್ಯಾಕೆ ? ವಿಡಿಯೋ ವೈರಲ್ !!

4136
Bengaluru: CM Siddaramaiah Angry reaction in Stage.
Bengaluru: CM Siddaramaiah Angry reaction in Stage.

ಸಿಎಂ ಸಿದ್ದರಾಮಯ್ಯ ಸಿಟ್ಟಾಗಿರೋದನ್ನು ನೀವು ಎಲ್ಲಾದ್ರೂ ನೋಡಿದ್ದೀರಾ ? ಅವ್ರಿಗೆ ಸಿಟ್ಟು ಬಂದ್ರೆ ಹೇಗೆಲ್ಲಾ ಗರಂ ಆಗ್ತಾರೆ ಅನ್ನೋದನ್ನ ನೀವೇ ನೋಡಿದ್ದೀರಾ ?

ad

ನಿನ್ನೆ ಬೆಂಗಳೂರಿನ ಹೆಚ್​ಎಸ್ ಆರ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಪಾರ್ಕ್​​ ಉದ್ಘಾಟನೆ ಸಮಾರಂಭದಲ್ಲಿ ಸಿಎ ಕೋಪ-ತಾಪ ಪ್ರದರ್ಶನ ಮಾಡಿದ್ದಾರೆ. ಎಚ್ ಎಸ್ ಆರ್ ಬಡಾವಣೆಯ ನಿವಾಸಿಗಳು “ಸ್ವಾಭಿಮಾನಿ ವೃಕ್ಷವನ” ಎಂಬ ಪಾರ್ಕ್ ಅನ್ನು ಅಭಿವೃದ್ದಿಪಡಿಸಿದ್ದರು. ಈ ಪಾರ್ಕ್ ಉದ್ಘಾಟಣೆಗೆ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸಿದ್ದರು. ವೇದಿಕೆಗೆ ಬರುವಾಗಲೇ ತುರ್ತು ಕಾರ್ಯಕ್ರಮ ನಿಮಿತ್ತ ಹೋಗಬೇಕಿತ್ತು.

ಹೀಗಾಗಿ ಮಾತಾಡಲ್ಲ ಅಂದಿದ್ರು. ಕೊನೆಗೆ ಮುಖಂಡರು ಮನವಿ ಮಾಡ್ಕೊಂಡಾಗ ವೇದಿಕೆಗೆ ಬಂದ್ರು. ಆದರೆ ಇನ್ನೂ ಮೈಕ್​​ ಫಿಕ್ಸ್​ ಮಾಡದೇ ಇದ್ದುದನ್ನು ಕಂಡ ಸಿಎಂ ಕೋಪ ಮಾಡ್ಕೊಂಡು ವಾಪಸ್​ ಹೊರಟಿದ್ದಾರೆ. ಮೊದಲೇ ಬೆಳಗ್ಗಿನಿಂದ ಹತ್ತಾರುಕಾರ್ಯಕ್ರಮಗಳಿಂದ ಸುಸ್ತಾಗಿದ್ದ ಸಿಎಂ ಸಿದ್ದರಾಮಯ್ಯ, ಅವ್ರ ಕೋಪ ಹೇಗಿತ್ತು ಅಂದ್ರೆ ಪೊಲೀಸರು ಕೊಂಚ ಕಕ್ಕಾಬಿಕ್ಕಿಯಾಗಿದ್ದರು.

Sponsored :

Related Articles