ವೈಟ್ ಟಾಪಿಂಗ್ ಕಪ್ಪು ಕುಳಗಳನ್ನು ಜೈಲಿಗಟ್ಟಲಿದ್ದಾರೆ ಕ್ಯಾಪ್ಟನ್ ದೊಡ್ಡಿಹಾಳ್ !! ಭ್ರಷ್ಟರ ರೋಡ್ ಟು ಪರಪ್ಪನ ಅಗ್ರಹಾರದ ಜರ್ನಿಯ ಹಿಂದಿರುವುದು ನಿಮ್ಮ ಹೆಮ್ಮೆಯ ಬಿಟಿವಿ !!

439

ಸಿದ್ದರಾಮಯ್ಯ ಸರಕಾರ ಮತ್ತು ಎಚ್ ಡಿ ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿ ನಡೆದಿರುವ ವೈಟ್ ಟಾಪಿಂಗ್ ಎಂಬ ಬಹುಕೋಟಿ ಹಗರಣದ ತನಿಖೆಗೆ ಮೊನ್ನೆಯಷ್ಟೇ ಆದೇಶಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ತನಿಖಾ ತಂಡವನ್ನು ರಚಿಸಿದ್ದಾರೆ. ಕ್ಯಾಪ್ಟನ್ ದೊಡ್ಡಿಹಾಳ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದ್ದು ವೈಟ್ ಟಾಪಿಂಗ್​ನ ಕಪ್ಪು ಕುಳಗಳು, ಭ್ರಷ್ಟ ಇಂಜಿನಿಯರ್​ಗಳು ಜೈಲು ಸೇರೋದು ಪಕ್ಕಾ ಆಗಿದೆ.

ವೈಟ್ ಟಾಪಿಂಗ್ ಹಗರಣದ ಕುರಿತು ಬಿಟಿವಿ ನಿರಂತರವಾಗಿ ಸುದ್ದಿ ಮಾಡಿತ್ತು. ಜನರ ತೆರಿಗೆ ಹಣವನ್ನು ನುಂಗಿ ನೀರು ಕುಡಿದಿರುವ ಭ್ರಷ್ಟ ಗುತ್ತಿಗೆದಾರರು ಮತ್ತು ಇಂಜಿನಿಯರ್​ಗಳನ್ನು ಜೈಲಿಗೆ ಕಳುಹಿಸಬೇಕು ಎಂದು ಬಿಟಿವಿ ಅಭಿಯಾನ ನಡೆಸಿತ್ತು. ಕಡೆಗೂ ಬದಲಾದ ಸರಕಾರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯ ಪೈಕಿ ಮೊದಲನೇ ಮತ್ತು ಎರಡನೇ ಹಂತದ ಕಾಮಗಾರಿಗಳ ಭ್ರಷ್ಠಾಚಾರವನ್ನು ತನಿಖೆಗೆ ಆದೇಶಿಸಿತ್ತು. ಇದೀಗ ಸರಕಾರ ತನಿಖಾ ಸಮಿತಿಯನ್ನೂ ರಚನೆ ಮಾಡಿದ್ದು, ಪ್ರಾಮಾಣಿಕ ದಕ್ಷ ಅಧಿಕಾರಿಯಾಗಿರುವ ಕ್ಯಾಪ್ಟನ್ ದೊಡ್ಡಿಹಾಳ್ ರನ್ನು ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ad

KUIDFC ಮುಖ್ಯ ಇಂಜಿನಿಯರ್ ಕ್ಯಾಪ್ಟನ್ ದೊಡ್ಡಿಹಾಳ್ ನೇತೃತ್ವದ ಸಮಿತಿ ರಚನೆ ಆಗ್ತಿದ್ದಂತೆ ಹಲವು ಗುತ್ತಿಗೆದಾರರು ಮತ್ತು ಇಂಜಿನಿಯರ್ಸ್ ಗೆ ನಡುಕ ಪ್ರಾರಂಭವಾಗಿದೆ. ಕಾಂಗ್ರೆಸ್, ಮೈತ್ರಿ ಸರ್ಕಾರದಲ್ಲಿ ನಡೆದಿದ್ದ 15,000 ಕೋಟಿ ರೂ. ಕಾಮಗಾರಿ ನಡೆದಿದ್ದು, ಮೂರು ಹಂತಗಳ ಕಾಮಗಾರಿ ಪೈಕಿ 2 ಹಂತಗಳ ಕಾಮಗಾರಿ ತನಿಖೆ ಗೆ ಆದೇಶ ನೀಡಿದ್ದು 3ನೇ ಹಂತದ ವೈಟ್ ಟಾಪಿಂಗ್​ ಕಾಮಗಾರಿಗೆ ಈಗಾಗ್ಲೇ ತಡೆ ನೀಡಿದೆ. ಮಧುಕಾನ್ ಪ್ರೈ ಲಿ ಮತ್ತಿತರರ ಗುತ್ತಿಗೆದಾರರಿಂದ ಡೀಲ್​ಗಾಗಿ ಭಾರೀ ಲಂಚ ನೀಡಿದ್ದ ಬಗ್ಗೆ ಬಿಟಿವಿ ದಾಖಲೆ ಸಹಿತಿ ಸುದ್ದಿ ಮಾಡಿತ್ತು.

ಸಾಮಾನ್ಯವಾಗಿ ಒಂದು ರಸ್ತೆಯ ನಿರ್ಮಾಣಕ್ಕೆ ಪ್ರತಿ ಕಿ.ಮೀ 2.5 ಕೋಟಿ ಖರ್ಚು ಆಗುತ್ತದೆ. ಆದರೇ ಇದೇ ರಸ್ತೆಗೆ ವೈಟ್ ಟ್ಯಾಪಿಂಗ್​ನಲ್ಲಿ 11 ಕೋಟಿ ಖರ್ಚುಮಾಡಿ ನಿರ್ಮಿಸಿ ಸಾರ್ವಜನಿಕ ಹಣವನ್ನು ಕೊಳ್ಳೆ ಹೊಡೆಯುವ ಹಗರಣ ಇದಾಗಿದೆ.

ತನಿಖೆಯಿಂದ ಮಧುಕಾನ್ ಪ್ರೈ ಲಿ, ಕುದ್ರೋಳಿ ಬಿಲ್ಡರ್ಸ್​ ( ವೈಟ್ ಟ್ಯಾಪಿಂಗ್ ಕಾಮಗಾರಿಯ ಹೆಸರಿನಲ್ಲಿ ಲೂಟಿ ಮಾಡಿರುವ ಹಣದ ಮೊತ್ತ 19.62 ಕೋಟಿ )

ಅಮೃತ್ ಕನ್ಸ್ಟ್ರಕ್ಷನ್ಸ್​ ಪ್ರೈ.ಲಿ- (ವೈಟ್ ಟ್ಯಾಪಿಂಗ್ ಕಾಮಗಾರಿಯ ಹೆಸರಿನಲ್ಲಿ ಲೂಟಿ ಮಾಡಿರುವ ಹಣದ ಮೊತ್ತಾ 129.43 ಕೋಟಿ)

ಬೆನಕ ಡೆವಲಪರ್ಸ್​ & ಪ್ರಾಜೆಕ್ಟ್ಸ್​ ಪ್ರೈ.ಲಿ -( ವೈಟ್ ಟ್ಯಾಪಿಂಗ್ ಕಾಮಗಾರಿಯ ಹೆಸರಿನಲ್ಲಿ ಲೂಟಿ ಮಾಡಿರುವ ಹಣದ ಮೊತ್ತಾ 28.13 ಕೋಟಿ )

ಕಾಮಗಾರಿಐವಿಆರ್​ಸಿಎಲ್​ ಲಿಮಿಟೆಡ್ -(ವೈಟ್ ಟ್ಯಾಪಿಂಗ್ ಕಾಮಗಾರಿಯ ಹೆಸರಿನಲ್ಲಿ ಲೂಟಿ ಮಾಡಿರುವ ಹಣದ ಮೊತ್ತಾ 28.27 ಕೋಟಿ, )

ಹಾರ್ದಿಕ್ ಗೌಡ -(ವೈಟ್ ಟ್ಯಾಪಿಂಗ್ ಕಾಮಗಾರಿಯ ಹೆಸರಿನಲ್ಲಿ ಲೂಟಿ ಮಾಡಿರುವ ಹಣದ ಮೊತ್ತಾ 4.34 ಕೋಟಿ )

ಸಾಯಿ ತ್ರಿಷಾ ಇನ್ಫ್ರಾ ಇಂಜಿನಿಯರ್ಸ್​- (ವೈಟ್ ಟ್ಯಾಪಿಂಗ್ ಕಾಮಗಾರಿಯ ಹೆಸರಿನಲ್ಲಿ ಲೂಟಿ ಮಾಡಿರುವ ಹಣದ ಮೊತ್ತ 31 ಕೋಟಿ )

ಎನ್ ಎಪಿಸಿ ಲಿಮಿಟೆಡ್ – (ವೈಟ್ ಟ್ಯಾಪಿಂಗ್ ಕಾಮಗಾರಿಯ ಹೆಸರಿನಲ್ಲಿ ಲೂಟಿ ಮಾಡಿರುವ ಹಣದ ಮೊತ್ತ 115.33 ಕೋಟಿ )

ಆರ್ ಎನ್ ಎಸ್ ಲಿಮಿಟೆಡ್- (ವೈಟ್ ಟ್ಯಾಪಿಂಗ್ ಕಾಮಗಾರಿಯ ಹೆಸರಿನಲ್ಲಿ ಲೂಟಿ ಮಾಡಿರುವ ಹಣದ ಮೊತ್ತ 86.46 ಕೋಟಿ )

ಈಗಾಗಲೇ ಬಿಬಿಎಂಪಿಯಿಂದ ದಾಖಲೆ ಜಪ್ತಿಗೆ ತನಿಖಾ ಸಮಿತಿಯಿಂದ ಸೂಚನೆ ಹೊರಬಂದಿದ್ದು, ವೈಟ್ ಟ್ಯಾಪಿಂಗ್​ ಸಂಬಂಧಪಟ್ಟ ಎಲ್ಲಾ ಫೈಲ್​ಗಳನ್ನು ಹಸ್ತಾಂತರಿಸಲು ಸೂಚನೆ ನೀಡಿದೆ. ತನಿಖೆಯಿಂದ ಈ ಕಾಂಟ್ರಾಕ್ಟರ್​ಗಳೆಲ್ಲಾ ಜೈಲು ಸೇರೋದು ಗ್ಯಾರಂಟಿ.
ಅತ್ಯಂತ ದಕ್ಷ, ಪ್ರಾಮಾಣಿಕ ಅಧಿಕಾರಿ ಕೈಗೆ ತನಿಖೆಯ ಹೊಣೆ ವಹಿಸಲಾಗಿದ್ದು, ಹಿಂದೆ ಹಲವು ಹಗರಣಗಳಲ್ಲಿ ಭ್ರಷ್ಟರನ್ನು ಜೈಲಿಗಟ್ಟಿದ್ದ ಕ್ಯಾಪ್ಟನ್ ದೊಡ್ಡಿಹಾಳ್ ಗೆ ತನಿಖೆಯಲ್ಲಿ BMS ಕಾಲೇಜಿನ ಪ್ರೊ. ಜಗದೀಶ್, BIT ಕಾಲೇಜಿನ ಪಿ.ಅಶ್ವತ್, PWD ಇಲಾಖೆ ನಿವೃತ್ತ ಇಂಜಿನಿಯರ್ ಬಸವರಾಜು ಜೊತೆಯಾಗಲಿದ್ದಾರೆ.

Sponsored :

Related Articles