ಉಡುಪಿ ಮಠದಲ್ಲಿ ಭಾಗೀರಥಿ ಪೂಜೆ !! ವಿಶೇಷ ಪೂಜೆಯಾಗ್ತಿದ್ದಂತೆ ಪವಾಡ !!

4201
9900071610

ಭಾರತೀಯ ಪರಂಪರೆಯ ಹಿಂದೂ ನೆಲೆಗಟ್ಟಿನಲ್ಲಿ ನದಿಗಳಿಗೆ ದೇವಾನುದೇವತೆಗಳ ಸ್ಥಾನಮಾನ ನೀಡಿ ಪೂಜಿಸೋದು ಪದ್ದತಿ. ಅದ್ರಂತೆ ತನ್ನ ಪೂರ್ವಜರ ಪಾಪದೋಷ ಕಳೆಯುವುದಕ್ಕಾಗಿ ಭಗೀರಥ ಮುನಿ ಗಂಗೆಯನ್ನ ಒಲಿಸಿಕೊಂಡು, ಆಕೆ ಧರೆಗಿಳಿದು ಬರುವಂತೆ ಮಾಡಿದ ಅನ್ನೊದು ಪುರಾಣ. ಹೀಗಾಗಿಯೇ ಗಂಗೆಗೆ ಭಾಗೀರಥಿ ಅಂತಲೂ ಕರೆಯಲಾಗುತ್ತೆ. ಅದಕ್ಕಾಗಿಯೇ ಇಂದು ಭಾಗೀರಥಿ ದೇವಿ ಜಯಂತಿಯನ್ನ ದೇಶಾದ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತದೆ.

ad

ಉಡುಪಿ ಕೃಷ್ಣ ಮಠಕ್ಕೂ ಭಾಗೀರಥಿ ದೇವಿಗೂ ನಂಟಿದೆ ಅನ್ನೊ ನಂಬಿಕೆ ಇದೆ. ಆಚಾರ್ಯ ಮದ್ವರ ಭಕ್ತಿಗೆ ಒಲಿದ ಭಾಗೀರಥಿ ಉಡುಪಿ ಕೃಷ್ಣ ಮಠಕ್ಕೂ 12 ವರುಷಕ್ಕೊಮ್ಮೆ ಬರುತ್ತಾಳೆ ಅನ್ನೋದು ಪ್ರತೀತಿ. ಹೀಗಾಗಿಯೇ ವರ್ಷಂಪ್ರತಿ ಪರ್ಯಾಯ ಶ್ರೀಗಳು ಭಾಗೀರಥಿ ದೇವಿಗೆ ಮಧ್ವ ಸರೋವರದ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸ್ತಾರೆ. ಅದ್ರಂತೆ ಇಂದೈ ವಿಶೇಷ ಪೂಜೆ ಸಲ್ಲಿಸಲಾಯ್ತು.

ಭಾಗೀರಥಿ ಜನ್ಮದಿನದಂದು ಮಧ್ವ ಸರೋವರ ತುಂಬಿ ತುಳುಕೋದು ಸಾಮಾನ್ಯ. ಆದರೆ ಈ ಬಾರಿ ಉಡುಪಿಗೆ ಬರ ತಟ್ಟಿದೆ. ಆದ್ರೆ ಕಾಕತಾಳೀಯ ಎಂಬಂತೆ ಪಲಿಮಾರು ವಿದ್ಯಾಧೀಶ ಶ್ರೀಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಮಯಕ್ಕೆ ಉಡುಪಿಯ ಆಸುಪಾಸಿನಲ್ಲಿ ಮಳೆ ಸುರಿದಿದೆ. ಕರಾವಳಿಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿ ಜನ ತತ್ತರಿಸಿದ್ರು. ಆದ್ರೆ ಭಾಗೀರಥಿ ದೇವಿಯ ಜನ್ಮದಿನವಾದ ಇಂದೇ ಉಡುಪಿಯಲ್ಲಿ ಸಾಕಷ್ಟು ‌ಮಳೆಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಇನ್ನಷ್ಟು ಮಳೆ ಹೆಚ್ಚುವ ಮುನ್ಸೂಚನೆಯನ್ನ ‌ಪ್ರಕೃತಿ ನೀಡಿದೆ.

ಒಟ್ಟಿನಲ್ಲಿ ಭಾಗೀರಥಿ ಜನ್ಮದಿನದಂದೆ ಭೂಮಿ ತಂಪಾಗಿ, ಬರದ ಬೇಗೆ ದೂರವಾಗಿದ್ದು, ಭಕ್ತರಲ್ಲಿ ಹರ್ಷ ಮೂಡಿಸಿದೆ.

Sponsored :


9900071610