ಮೋಹಕ ತಾರೆ ಮದುವೆಯಲ್ಲಿ ಸ್ಫೋಟಕ ಟ್ವಿಸ್ಟ್!! ರಮ್ಯ ತಾಯಿ ಬಿಚ್ಚಿಟ್ಟರು ರಫೇಲ್​-ರಮ್ಯ ಅಸಲಿ ಕತೆ!!

8480

ಚಂದನವನದ ಮೋಹಕ ತಾರೆ ತನ್ನ ಬಹುದಿನದ ಗೆಳೆಯ ರಾಫೆಲ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ ಎಂಬ ವಿಚಾರ ಕೆಲದಿನಗಳಿಂದ ಸಾಕಷ್ಟು ಚರ್ಚೆಗೀಡಾಗಿತ್ತು. ಆದರೆ ಇದೀಗ ಈ ಪದ್ಮಾವತಿ ಕಲ್ಯಾಣಕ್ಕೆ ಸ್ಪೋಟಕ ಟ್ವಿಸ್ಟ್​ ಸಿಕ್ಕಿದ್ದು, ರಮ್ಯ ಮದುವೆಗೆ ಎದುರಾಗಿರುವ ಅಸಲಿ ಸಮಸ್ಯೆಯನ್ನು ರಮ್ಯ ಹೆತ್ತಮ್ಮ ಬಿಚ್ಚಿಟ್ಟಿದ್ದಾರೆ. ಇಷ್ಟಕ್ಕೂ ಊರಿಗೊಬ್ಬಳೇ ಪದ್ಮಾವತಿಯ ಕಲ್ಯಾಣಕ್ಕೆ ಕಲ್ಲಾಗುತ್ತಿರುವ ಸಂಗತಿ ಏನು ಗೊತ್ತಾ? ಈ ಸ್ಟೋರಿ ಓದಿ.

ad

ಮೋಹಕ ತಾರೆ ರಮ್ಯ ಕನ್ನಡ ಸ್ಯಾಂಡಲ್​ವುಡ್​ ನಂಬರ್ 1 ನಟಿ. ಸ್ಯಾಂಡಲ್​ವುಡ್​ನಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಬಣ್ಣದ ಲೋಕ ಬಿಟ್ಟು ಖಾದಿ ಧರಿಸಿ  ರಾಜಕೀಯಕ್ಕಿಳಿದ ರಮ್ಯ ಮಂಡ್ಯ ಸಂಸದೆಯಾಗಿ ಪಾರ್ಲಿಮೆಂಟ್​ನ ಅಂಗಳವನ್ನು ಹತ್ತಿಳಿದು ಬಂದರು. ಆದರೆ ಮರುಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ಕಾರ್ಯಕ್ಕೆ ಸೀಮಿತವಾದ ರಮ್ಯ ಕೆಲಕಾಲ ಹಲವು ವಿವಾದಗಳನ್ನು ಹುಟ್ಟುಹಾಕುವ ಮೂಲಕ ಕಾಂಗ್ರೆಸ್​​​ನ ಕೇಂದ್ರಬಿಂದುವಾಗಿದ್ದರು.

 

ಆದರೆ ಕಾಂಗ್ರೆಸ್​ ಸೋಷಿಯಲ್​ ಮೀಡಿಯಾ ಜವಾಬ್ದಾರಿಯಿಂದ  ಹೊರಬಂದ ರಮ್ಯ ಕಾಣೆಯಾಗಿದ್ದರು. ಇತ್ತೀಚಿಗೆ ರಮ್ಯ ಮದುವೆಯಾಗ್ತಿದ್ದಾರೆ ಎಂಬ ವಿಚಾರ ಮುನ್ನಲೆಗೆ ಬಂದಿದ್ದು, ತಮ್ಮ ಬಹುಕಾಲದ ಗೆಳೆಯ ಪೋರ್ಚುಗಲ್ ದೇಶದವರಾಗಿರುವ ರಾಫೆಲ್​ ಮತ್ತು ರಮ್ಯಾ ಹೊಸಬದುಕಿಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈ ವಿಚಾರಕ್ಕೆ ಅಧಿಕೃತ ಮುದ್ರೆ ಸಿಕ್ಕಿರಲಿಲ್ಲ. ಆದರೆ ಈ ವಿಚಾರವನ್ನು ಇದೀಗ ನಟಿ ರಮ್ಯ ತಾಯಿ ರಂಜಿತಾ ಖಚಿತಪಡಿಸಿದ್ದಾರೆ. ರಮ್ಯ ಹಾಗೂ ರಫೆಲ್​ ನಡುವೆ ಮದುವೆ ಪ್ರಸ್ತಾಪ ಇರೋದು ನಿಜ. ಆದರೆ ಅಲ್ಲದೆ ರಮ್ಯಾ ರವರಿಗೆ ರಾಫೆಲ್ ರವರ ದೇಶಕ್ಕೆ ಹೋಗಲು ಇಷ್ಟವಿರಲಿಲ್ಲ ರಾಫೆಲ್‌ಗೆ ಇಲ್ಲಿಗೆ ಬರಲು ಇಷ್ಟವಿರಲಿಲ್ಲ ಈ ರೀತಿಯ ಭಿನ್ನಾಭಿಪ್ರಾಯಗಳ ಕಾರಣ ಮದುವೆಯಾ ಮಾತು ಮುಂದಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ.

 

 

ಮಗಳು ನೂತನ ಜೀವನಕ್ಕೆ ಪಾದಾರ್ಪಣೆ ಮಾಡುವ ಆ ಗಳಿಗೆಗೋಸ್ಕರ ರಮ್ಯಾಳ ತಾಯಿ ರಂಜಿತಾ ಕೂಡಾ ಕಾತುರದಿಂದ ಆ ಕಾಯುತ್ತಿದ್ದಾರಂತೆ. ಅಲ್ಲದೇ ಮದುವೆ ಬಗ್ಗೆ ಪದೇ ಪದೇ ಮದುವೆ ಪ್ರಸ್ತಾಪ ಮಾಡುತ್ತಾರೆ ಎಂಬ ಕಾರಣಕ್ಕೆ ಅಮ್ಮನ ಜತೆಗೆ ಮುನಿಸಿಕೊಂಡಿದ್ದಾರಂತೆ. ಅವಳು ಮದುವೆಯಾಗ್ತೀನಿ ಎಂದರೆ ನನಗೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ. ಆದರೆ ಕೇಳಿದಾಗಲೆಲ್ಲಾ ಈಗ ಬೇಡ, ಈಗ ಬೇಡ ಎನ್ನುತ್ತಾಳೆ ಎಂದು ಹೇಳಿದ್ದಾರೆ.

Sponsored :

Related Articles