ಬಿಗ್’ಬಾಸ್ ನಟಿ ರಾತ್ರೋರಾತ್ರಿ ಮನೆಯಿಂದ ಹೊರಗೆ

4587

ಬೆಂಗಳೂರು: ಕನ್ನಡದ ರಿಯಾಲಿಟಿ ಶೋ ಬಿಗ್’ಬಾಸ್ ನಲ್ಲಿ ಖ್ಯಾತಿ ಪಡೆದಿದ್ದ ನಟಿ ಜಯಶ್ರೀ ಗೌಡ ಅವರನ್ನು ಅವರ ತಾಯಿ ಜೊತೆ ರಾತ್ರೋರಾತ್ರಿ ಮನೆಯಿಂದ ಹೊರದುಬ್ಬಲಾಗಿದೆ.

ad

ತಮ್ಮನ್ನು ಹಾಗೂ ತಮ್ಮ ತಾಯಿಯವರನ್ನು ಸ್ವಂತ ಸೋದರ ಮಾವ ಆಸ್ತಿ ಆಸೆಗಾಗಿ ಸೆ.10ರ ರಾತ್ರಿ ಹೊರಹಾಕಿದ್ದಾರೆ ಎಂದು ನಟಿ ಜಯಶ್ರೀ ಗೌಡ ಅವರು ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಠಾಣೆಗೆ ದೂರು ದಾಖಲಿಸಿದ್ದಾರೆ.

ಈವೆಂಟ್ ಆರ್ಗನೈಸರ್ ಆಗಿರುವ ಜಯಶ್ರೀ ಅವರು,ತಮ್ಮ ಸೋದರ ಮಾವ ಗಿರೀಶ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾನೆ ಪೊಲೀಸರಿಂದ ತಮಗೆ ನ್ಯಾಯ ದೊರೆಯುವ ಬಗ್ಗೆ ಭರವಸೆಯಿದೆ ಎಂದು ತಿಳಿಸಿದ್ದಾರೆ.

ಸದ್ಯ ಅಶೋಕನಗರದಲ್ಲಿರುವ ಅಜ್ಜಿಯ ಮನೆಯಲ್ಲಿ ಜಯಶ್ರೀ ಆಶ್ರಯ ಪಡೆದಿದ್ದಾರೆ. ಬಿಗ್ ಬಾಸ್ ಬಳಿಕ ಜಯಶ್ರೀ ನಟನೆ ಕಡೆಗೆ ಗಮನಹರಿಸಿದ್ದರು. ಖಾಸಗಿ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದರೂ ಮಾಡೆಲಿಂಗ್ ಕ್ಷೇತದ ಕಡೆಗೆ ಆಕರ್ಷಿತರಾಗಿದ್ದರು. 2013ರ ಬಿಗ್ ಬಾಸ್ ಆವೃತ್ತಿಯಲ್ಲಿ ಇವರು ಭಾಗವಹಿಸಿದ್ದರು.

Sponsored :

Related Articles