ಕಿಚ್ಚನ ಸಾರಥ್ಯದಲ್ಲಿ ಬಿಗ್ ಬಾಸ್….! ಈ ಸೀಸನ್​​ನಲ್ಲಿ ಬರೋರು ಯಾರ್ಯಾರು ಗೊತ್ತಾ..?!

3252

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಕನ್ನಡದ ಬಿಗ್‌ಬಾಸ್ ಶೋ 6 ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಸದಾ ಒಂದಲ್ಲಾ ಒಂದು ಕಂಟ್ರೋವರ್ಸಿಗಳಿಂದ ಸೌಂಡ್ ಮಾಡ್ತಿದ್ದ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ 7ನೇ ಸೀಸನ್​ಗೆ ರೆಡಿಯಾಗ್ತಿದೆ. ಈ ಬಾರಿಯೂ ಬಿಗ್​ ಶೋ ಅನ್ನು ಎಂದಿನಂತೆ ಸುದೀಪ್ ಹೋಸ್ಟ್ ಮಾಡ್ತಿದ್ದಾರೆ. ಆದ್ರೆ ಈ ಬಾರಿ ಬಿಗ್ ಬಾಸ್​ನಲ್ಲಿ‌ ಕೊಂಚ ಬದಲಾವಣೆಯಾಗಿದೆಯಂತೆ.

ad

 

ಕಾರ್ಯಕ್ರಮ ಪ್ರಸಾರವಾಗೋದು ‘ಕಲರ್ಸ್ ಸೂಪರ್’​ನಲ್ಲಿ ಅಲ್ಲ ‘ಕಲರ್ಸ್​ ಕನ್ನಡ’ದಲ್ಲಿ. ಕಳೆದ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಕೂಡ ‘ಬಿಗ್‌ಬಾಸ್’ ಮನೆ ಪ್ರವೇಶಿಸಿದ್ದರು. ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳ ಎಪಿಸೋಡ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಈ ಬಾರಿ ಬಿಗ್ ಬಾಸ್​ನಲ್ಲಿ 15 ಜನರೂ ಸೆಲೆಬ್ರಿಟಿಗಳು ಇರಲಿದ್ದಾರೆ. ಅಲ್ದೇ, ಕಾಮನ್​​ ಪೀಪಲ್ ಎಂಟ್ರಿ ಇರಲ್ವಂತೆ. ನಾಳೆ ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಲಿದ್ದು, ಅಕ್ಟೋಬರ್ 20 ರಿಂದ ಬಿಗ್ ಬಾಸ್ ಶೋ ಶುರುವಾಗಲಿದೆ.

ಸಿನಿಮಾ, ಕಿರುತೆರೆ, ರಾಜಕೀಯ ಕ್ಷೇತ್ರದಿಂದ ಬಂದ ವ್ಯಕ್ತಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳಲು ಪ್ರೇಕ್ಷಕರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಹಾಗಾಗಿ ಕೇವಲ ಸೆಲೆಬ್ರಿಟಿಗಳೇ ಪರಸ್ಪರ ಪೈಪೋಟಿ ನಡೆಸಿದರೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ವಾಹಿನಿ ಬಂದಿದೆ.

 

ಬಿಗ್‌ಬಾಸ್ ಮನೆ ಎಂಟ್ರಿಯಾದಕೂಡಲೇ ಅಲ್ಲಿನ ಸ್ಪರ್ಧಿಗಳ ಜನಪ್ರಿಯತೆ ಏಕಾಏಕಿ ಹೆಚ್ಚುತ್ತದೆ. ಜೊತೆಗೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಅವರು ಹೆಚ್ಚಿನದಾಗಿ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಸೀಸನ್‌ನಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯ ಸುಳಿವಿಲ್ಲ.

 

 

Sponsored :

Related Articles