ಬಾಲಿವುಡ್ ಗೆ ಹಾರಿದ ಅಕ್ಕ ಖ್ಯಾತಿಯ ಅನುಪಮಾ! ಕಿರುತೆರೆಯಿಂದ ಹಿರಿತೆರೆಗೆ ಬಂಪರ್ ಆಫರ್!!

24186
9900071610

ನಟಿ ಹಾಗೂ ಬಿಗ್ ಬಾಸ್ ಸೀಸನ್ 5 ಖ್ಯಾತಿಯ ಅನುಪಮ ಗೌಡ ಇದೀಗಾ ಬಾಲಿವುಡ್ ಗೆ ಹಾರಲಿದ್ದಾರೆ. ನಟಿ ಅನುಪಮಾರಿಗೆ ಹಿಂದಿ ಚಿತ್ರದಲ್ಲಿ ನಟಿಸುವ ಬಂಪರ್ ಆಫರ್ ಒಂದು ಬಂದಿದೆ.

ad

ಕನ್ನಡದ ಚಿತ್ರಗಳಲ್ಲಿ ಹಾಗೂ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಟಿ ಅನುಪಮಾ ಸದ್ಯ ಹಿಂದಿ ಭಾಷೆಯ ಕಿರುಚಿತ್ರವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ.

ಇನ್ನೂ ಶಾರ್ಟ್​ ಚಿತ್ರವನ್ನು ಸ್ಯಾಂಡಲ್ ವುಡ್ ಊರ್ವಿ ಚಿತ್ರದ ಖ್ಯಾತ ನಿರ್ದೇಶಕ ಪ್ರದೀಪ್ ವರ್ಮಾ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ದಿ ಫಾಲನ್ ಎಂದು ಹೆಸರಿಡಲಾಗಿದೆ. ಈ ಶಾರ್ಟ್​ ಮೂವಿ ಕಥೆಯು ಸುಮಾರು 4 ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆ ಎನ್ನಲಾಗುತ್ತಿದೆ. ಸದ್ಯ ಅದ್ಧೂರಿಯಾಗಿ ಸಿದ್ಧವಾಗುತ್ತಿರುವ ಈ ಕಿರುಚಿತ್ರಕ್ಕೆ ಬೇಕಾದ ಫೋಟೋ ಶೂಟ್ ಮಾಡಿಸುವ ಯೋಚನೆಯಲ್ಲಿ ಅನುಪಮ ಇದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ದಿ ಫಾಲನ್ ಶಾರ್ಟ್​ ಮೂವಿಯನ್ನು ಲದಾಕ್, ಮನಾಲಿ ಸುತ್ತಮುತ್ತ ಚಿತ್ರ ತಂಡ ಫೋಟೋ ಶೂಟ್ ಮಾಡಲು ತಯಾರಿ ನಡೆಸುತ್ತಿದ್ದು, ಸುಮಾರು 30 ದಿನಗಳ ಕಾಲ ಚಿತ್ರದ ಶೂಟಿಂಗ್ ಗೆ ಚಿತ್ರತಂಡ ತಯಾರಿ ನಡೆಸುತ್ತಿದೆ.

Sponsored :


9900071610