ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗೆ ಗುಂಡೇಟು!!

335

ಆರೋಪಿಯೊಬ್ಬನನ್ನು ಬಂಧಿಸುವ ವೇಳೆ ರೌಡಿಶೀಟರ್​​ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ರೌಡಿಶೀಟರ್​ ಮೇಲೆ ಪೊಲೀಸರು ಫೈರಿಂಗ್​ ನಡೆಸಿದ ಘಟನೆ ವಿಜಯಪುರದ ನವಭಾಗ್​ನಲ್ಲಿ ನಡೆದಿದೆ.

ವಿವಿಧ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಯುನುಸ್​ ಅಕ್ಲಾಸ್​​​ ಪಟೇಲ್​ ಎಂಬಾತನನ್ನು ಬಂಧಿಸಲು ನವಭಾಗ್ ನ ಗಾಂಧಿಚೌಕ್ ​ ಪೊಲೀಸರು ತೆರಳಿದ್ದರು. ಈ ವೇಳೆ ಯುನುಸ್​ ಅಕ್ಲಾಸ್​​ ಪೊಲೀಸರ ಮೇಲೆ ಹಲ್ಲೆಗೆ ಮುಂಧಾಗಿದ್ದಾನೆ. ಇದರಿಂದ ಪೊಲೀಸ್ ಪೇದೆ ಮಾದನಶೆಟ್ಟಿ ಎಂಬುವವರಿಗೆ ಗಾಯವಾಗಿದ್ದು, ತಕ್ಷಣ ಎಚ್ಚೆತ್ತ ಪಿಎಸ್​​​ಐ ವಿಜಯಪುರ‌ದಲ್ಲಿ‌ ರೌಡಿ ಶೀಟರ್ ಮೇಲೆ ಪಿಎಸ್​ಐ ಆರೀಫ್ ಮುಶಾಪುರೆಯಿಂದ ಫೈರಿಂಗ್​​ ಮಾಡಿದ್ದಾರೆ.

ad

ಪಿಎಸ್​ಐ ಆರೀಫ್​ ಎರಡು ಭಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಮೂರನೇ ಭಾರಿ ರೌಡಿ ಶೀಟರ್​​ ಯೂನಿಸ್ ಮೇಲೆ ಫೈರ್ ಮಾಡಿದ್ದಾರೆ. ಇದರಿಂದ ಆರೋಪಿಯ ​ ಎಡಕಾಲಿಗೆ ಗುಂಡು ದಾಖಳಾಗಿದ್ದು, ಗಾಯಗೊಂಡ ಆರೋಪಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Sponsored :

Related Articles