ನಮ್ಮ ಶಾಸಕರನ್ನು ಅನರ್ಹಗೊಳಿಸೋದೇ ಬಿಜೆಪಿಯ ಗುರಿ! ದಿನೇಶ್ ಗುಂಡೂರಾವ್ ಗಂಭೀರ ಆರೋಪ!!

377
9900071610

ಅತೃಪ್ತಿಯಿಂದ ಮುಂಬೈ ಸೇರಿರೋ ಶಾಸಕರೆಲ್ಲ ಅನರ್ಹರಾಗಬೇಕು ಎಂಬುದು ಬಿಜೆಪಿಗರ ಆಸೆ. ಅದಕ್ಕಾಗಿಯೇ ಬಿಜೆಪಿ ಅವರನ್ನು ಮಿಸ್​ಗೈಡ್​ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ಆರೋಪಿಸಿದ್ದಾರೆ.

ad


ವಿಧಾನಸೌಧದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್​, ಗುರುವಾರದ ವಿಶ್ವಾಸಮತದಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಅತೃಪ್ತ ಶಾಸಕರು ನಮ್ಮವರೇ. ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಬಿಜೆಪಿ ನಮ್ಮ ಶಾಸಕರೆಲ್ಲ ಅನರ್ಹರಾಗಲಿ ಎಂದು ಈ ರೀತಿ ವರ್ತಿಸುತ್ತಿದೆ. ಅತೃಪ್ತ ಶಾಸಕರೆಲ್ಲ ಒಂದೊಮ್ಮೆ ಅನರ್ಹರಾದರೇ ಸುಮ್ಮನೇ ಅವರ ರಾಜಕೀಯ ಭವಿಷ್ಯ ಕಳೆದುಕೊಳ್ಳುತ್ತಾರೆ. ಇದಕ್ಕಾಗಿಯೇ ಬಿಜೆಪಿ ಈ ರೀತಿ ಪ್ಲ್ಯಾನ್ ಮಾಡುತ್ತಿದೆ.


ಇದೆಲ್ಲ ನಮ್ಮ ಅತೃಪ್ತ ಶಾಸಕರಿಗೆ ಅರಿವಾಗುತ್ತಿಲ್ಲ. ಹೀಗಾಗಿ ವಾಸ್ತವವನ್ನು ಅವರಿಗೆ ಅರಿವು ಮಾಡಿಸುವ ಪ್ರಯತ್ನ ಮಾಡುತ್ತೇವೆ. ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಇದಕ್ಕೂ ಅವರಿಗೂ ಏನು ಸಂಬಂಧವಿಲ್ಲ ಅನ್ನೋದಾದರೇ ಎಂಟಿಬಿ ನಾಗರಾಜ್ ಜೊತೆ ಆರ್.ಅಶೋಕ್​ ಯಾಕೆ ಮುಂಬೈಗೆ ತೆರಳಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

Sponsored :


9900071610