ಬಿಜೆಪಿ ಇಂದು ಕರಾಳ ದಿನಾಚರಣೆ ಆಚರಣೆ.. ರಾಜ್ಯದಲ್ಲಿ ಎನೇನಾಯ್ತು? ಯಾರ್ಯಾರು ಎನೇನಂದ್ರು? ಸಂಪೂರ್ಣ ವರದಿ

889

ಚಾಮರಾಜನಗರ

ಗಡಿ ಜಿಲ್ಲೆ ಚಾಮರಾಜನಗರದ ಬಿಜೆಪಿ ಕಾರ್ಯಕರ್ತರು, ಕಾಂಗ್ರೇಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನ ಕರಾಳ ದಿನವನ್ನಾಗಿ ಘೋಷಣೆ ಮಾಡಿ ಪ್ರತಿಭಟನೆ ನಡೆಸಿದರು..

ad

 

ಚಾಮರಾಜನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನಾ ಧರಣಿ ನಡೆಸಿದ ಬಿಜೆಪಿ ಕಾರ್ಯಕರ್ತರು, ಕಪ್ಪು ಪಟ್ಟಿ ಧರಿಸಿ, ಅಪವಿತ್ರ ಮೈತ್ರಿ ಸರ್ಕಾರದ ವಿರುದ್ದ ಘೋಷಣೆ ಕೂಗಿದ್ರು.

ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿವೆ. ಅಪವಿತ್ರ ಮೈತ್ರಿಯಿಂದ ಕರ್ನಾಟಕದ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ. ಮತದಾರರ ತೀರ್ಮಾನಕ್ಕೆ ವಿರುದ್ದವಾಗಿ ಮೈತ್ರಿ ಸರ್ಕಾರ ರಚಿಸುವುದರ ಮೂಲಕ ಇಡೀ ರಾಜ್ಯದ ಸಂಪತ್ತನ್ನ ಕೊಳ್ಳೆಹೊಡೆಯುವುದಕ್ಕಾಗಿ, ಹಗಲು ದರೋಡೆ ಮಾಡಲು ಮೈತ್ರಿ ಸರ್ಕಾರ ರಚಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಮಲ್ಲಿಕಾರ್ಜುನಪ್ಪ ವ್ಯಂಗವಾಡಿದರು.

ವಿಜಯಪುರ

ಇನ್ನು, ಕಾಂಗ್ರೇಸ್ ಹಾಗೂ ಜೆಡಿಎಸ್ ಮಧ್ಯೆ ಮೈತ್ರಿ ಸರಕಾರ ರಚಿಸಿ ನೂತನ ಸರಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ‌ ಹಾಗೂ ಉಪ ಮುಖ್ಯಮಂತ್ರಿಯಾಗಿ ಜಿ.ಪರಮೇಶ್ವರ ಅವರು ಪ್ರಮಾಣ ವಚನ ಸ್ವಿಕರಿಸಲಿರುವ  ಬೆನ್ನಲ್ಲೆ  ಬೆಳಗಾವಿಯ ಚನ್ನಮ್ಮಾ ಸರ್ಕಲ್ ನಲ್ಲಿ ಬಿಜೆಪಿ ಮುಖಂಡರು  ಕರಾಳ ದಿನ ಆಚರಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.

ಇನ್ನು ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಈ ಕೇವಲ ೬ ತಿಂಗಳು ಮಾತ್ರ, ಇವರಿಬ್ಬರು ಲವ್ ಮ್ಯಾರೇಜ್ ಆಗ್ತಾ ಇದಾರೆ ಇದಕ್ಕೆ ತಂದೆ ತಾಯಿ ಒಪ್ಪಿಗೆ ಇಲ್ಲ, ೬ ತಿಂಗಳ ಬಳಿಕ ಈ ಸರಕಾರವೂ ಡಿವೋರ್ಸ ಆಗುತ್ತೆ ಎಂದು ಸಂಜಯ ಪಾಟೀಲ ಮೈತ್ರಿ ಸರಕಾರದ ವಿರುದ್ದ ಕಿಡಿಕಾರಿದ್ದಾರೆ…

ಚಿಕ್ಕಮಗಳೂರು

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸುತ್ತಿರುವ ಹಿನ್ನೆಲೆ, ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರು ಕರಾಳ ದಿನ ಆಚರಿಸಿದ್ರು.

ನಗರದ ಬಿಜೆಪಿ ಕಚೇರಿಯಿಂದ ಅಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಅಜಾದ್ ಪಾರ್ಕ್ ವೃತ್ತದಲ್ಲಿ ಮೈತ್ರಿ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಕಾರ್ಯಕರ್ತರು ತಲೆಗೆ
ಕಪ್ಪು ಬಟ್ಟಿ ಧರಿಸಿ, ಮಾನವ ಸರಪಳಿ ನಿರ್ಮಿಸಿ ಮೈತ್ರಿ ಸರ್ಕಾರ ವಿರುದ್ಧ ದಿಕ್ಕಾರ ಹಾಕಿದ್ರು….

ಚಿತ್ರದುರ್ಗ

ಕಾಂಗ್ರೆಸ್ ಹಾಗೂ ಜೆ ಡಿ ಎಸ್ ನ ಮೈತ್ರಿ ಸರ್ಕಾರದ ವಿರುದ್ದ ಇಂದು ಬಿಜೆಪಿ ಯಿಂದ ರಾಜ್ಯಾದ್ಯಂತ ಎಲ್ಲಾ ವಿದಾನ ಸಬಾ ಕ್ಷೇತ್ರಗಳಲ್ಲಿ ಕಪ್ಪು ಪಟ್ಟಿ ದರಿಸಿ ಕಪ್ಪು ದಿನ ಆಚರಿಸಲಾಗುತ್ತಿದೆ. ಚಿತ್ರದುರ್ಗದಲ್ಲೂ ಕೂಡ ಕಪ್ಪು ದಿನ ಆಚರಿಸಲಾಯಿತು.

 

ನಗರದ ಡಿ ಸಿ ವೃತ್ತದಲ್ಲಿಂದು ಬಿ ಜೆ ಪಿ ಕಾರ್ಯಕರ್ತರಿಂದ ಪ್ರತಿಬಟನೆ ನಡೆಸಲಾಯಿತು. ಕಾರ್ಯಕರ್ತರಿಗೆ ಶಾಸಕರಾದ ತಿಪ್ಪಾರೆಡ್ಡಿಯ ವರು ಸಾತ್ ನೀಡಿದರು. ಶಾಸಕರು ಹಾಗೂ ಎಲ್ಲಾ ಬಿ ಜೆ ಪಿ ಯ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಜೆ ಡಿ ಎಸ ವಿರುದ್ದ ಗೋಷಣೆ ಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ದಾವಣಗೆರೆ

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಮುಖಂಡರು ಕರಾಳ ದಿನ ಆಚರಿಸುತ್ತಿದ್ದಾರೆ
ಅದೇ ರೀತಿ ದಾವಣಗೆರೆ ಜಿಲ್ಲೆಯ್ಲೂ ಸಂಸದ ಜಿಎಂ ಸಿದ್ದೇಶ್ವರ್ ಸೇರಿದಂತೆ ಬಿಜೆಪಿ ಶಾಸಕರು ಕಾರ್ಯಕರ್ತರು ಕರಾಳ ದಿನಾಚರಣೆ ಮಾಡಿದ್ರು ಬಿಜೆಪಿ ಕಛೇರಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗಾಂಧಿ ವೃತ್ತದ ಬಳಿ ಕರಾಳದಿನ ಆಚರಿಸಿದ್ರು,
ಚುನಾವಣೆಗೂ ಮುನ್ನಾ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳ ಸುರಿಮಳೆಗೈದ ಜೆಡಿಎಸ್ ಕಾಂಗ್ರೆಸ್ ಇಂದು ಅಪವಿತ್ರ ಮೈತ್ರಿ
ಮಾಡಿಕೊಳ್ಳುತ್ತಿದೆ ಹೀಗಾಗಿ ರಾಜ್ಯಾದ್ಯಂತ ಬಿಜೆಪಿ ಕರಾಳದಿನಾಚರಣೆ ನಡೆಸುತ್ತಿದೆ ಅಂತಾರೆ ಬಿಜೆಪಿ ಮುಖಂಡರು.

ಧಾರವಾಡ

ರಾಜ್ಯದಲ್ಲಿ ಜೆಡಿಎಸ್ – ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದನ್ನು ಖಂಡಿಸಿ, ಇಂದು ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಕೈಗೆ ಕಪ್ಪು ಬಟ್ಟೆ ಧರಿಸಿಕೊಂಡು ಕರಾಳ ದಿನಾಚರಣೆ ಆಚರಣೆ ಮಾಡಿದ್ರು.

ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಸರ್ಕಾರದ ಬಗ್ಗೆ ಧಿಕ್ಕಾರ ಕೂಗಿದ್ರು..

ಗದಗ

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ವಿರೋಧಿಸಿ ಗದಗನಲ್ಲಿ ಬಿಜೆಪಿ ಕಾರ್ಯಕರ್ತರು ಕರಾಳ ದಿನಾಚರಣೆ ಆಚರಿಸಿದ್ರು. ನಗರದ ಗಾಂಧಿ ಸರ್ಕಲ್ ನಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಕರಾಳ ದಿನ ಆಚರಿಸಿದ್ರು. ಕಪ್ಪು ಪಟ್ಟಿ ಧರಿಸಿ, ಮೈತ್ರಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿದ್ರು. ರಸ್ತೆ ತಡೆಯಿಂದ ಅರ್ಧ ಗಂಟೆಗೂ ಹೆಚ್ಚು ಜಾಲ ಸಂಚಾರ ಅಸ್ತವ್ಯಸ್ಥವಾಗಿತ್ತು.

ಕಲಬುರಗಿ

ಜೆಡಿಎಸ್ ಕಾಂಗ್ರೆಸ್ ಅಪವಿತ್ರ ಮೈತ್ರಿ ಖಂಡಿಸಿ ಇಂದು ಕಲಬುರಗಿಯಲ್ಲಿ ನಗರ ಬಿಜೆಪಿ ಘಟಕ ಪ್ರತಿಭಟನೆ ನಡೆಸಿತು. ನಗರ ಬಿಜೆಪಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿಜಿ ಪಾಟೀಲ್ ನೇತೃತ್ವದಲ್ಲಿ ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದರು. ಈ ವೇಳೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುವಾಗ ಮಾರ್ಗಮಧ್ಯೆಯೇ ಪೊಲೀಸರು ಬಂಧಿಸಿದರು..

ಹುಬ್ಬಳ್ಳಿ

ಎಚ್ ಡಿ ಕುಮಾರಸ್ವಾಮಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರವದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಕರಾಳ ದಿನಾಚರಣೆ ಆಚರಿಸಿದರು. ಹುಬ್ಬಳ್ಳಿಯ ದೇಶಪಾಂಡೆ ನಗರದ ಬಿಜೆಪಿ ಕಚೇರಿ ಎದುರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕರಾಳ ದಿನಾಚರಣೆ ಆಚರಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ದಿಕ್ಕಾರ ಕೂಗಿದ ಕಾರ್ಯಕರ್ತರು.‌ ಇದೊಂದು ಕಿಚಡಿ ಸರ್ಕಾರ. ಪ್ರಜಾಪ್ರಭುತ್ವದ ವಿರೋಧಿಯಾಗಿದ್ದು ಎಂದು ಆರೋಪಿಸಿದರು.

ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡೆಸಿದ್ರು.

ಹಾವೇರಿ

ನಿಯೋಜಿತ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪದಗ್ರಹಣ ಮಾಡುತ್ತಿರುವ ಬೆನ್ನಲ್ಲೇ ರಾಜ್ಯದಾದ್ಯಂತ ಪ್ರತಿಭಟನೆಗಳ ಬಿಸಿ ತಟ್ಟಿದೆ‌.. ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಮಿಶ್ರ ಸರ್ಕಾರಕ್ಕೆ ಬಿಜೆಪಿಯಿಂದ ತಿವ್ರ ವಿರೋಧ ವ್ಯಕ್ತವಾಗಿದೆ.. ಅದೇ ರೀತಿ ಹಾವೇರಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯಿತು ಬಿಜೆಪಿ ಕಛೇರಿಯಿಂದ ಹೊಸಮನಿ ಸಿದ್ದಪ್ಪ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆಹಮ್ಮುಕೊಂಡಿದ್ದರು.. ಹಾವೇರಿ ಮೀಸಲು ಕ್ಷೇತ್ರದ ನೂತನ ಶಾಸಕ ನೆಹರು ಓಲೇಕಾರ ನೇತೃತ್ವದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ ಮಾಡಲಾಯಿತು..ಕಾಂಗ್ರೆಸ್‌-ಜೆ.ಡಿ.ಎಸ್ ವಿರುದ್ಧ ಘೋಷಣೆ ಕೂಗಿದ್ರು..


ಜನಾದೇಶವಿಲ್ಲದಿದ್ದರೂ ಕಾಂಗ್ರೆಸ್ ಜೆಡಿಎಸ್ ಅಪಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.. ನಂತರ ಮಾತನಾಡಿದ ಓಲೇಕಾರ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಸರ್ಕಾರ ಬಹಳ ದಿನ ಅಧಿಕಾರ ನಡೆಸುವುದಿಲ್ಲ ಅವರವರ ಮಧ್ಯ ಈಗಾಗಲೇ ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ .. ಈ ಹಿಂದೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಹೆಚ್.ಡಿ.ಕೆ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದಿಲ್ಲಾ ನಾಡಿನ ಜನ ನಮಗೆ ಸಂಪೂರ್ಣ ಬೆಂಬಲ ನೀಡಿದ್ರೆ ಸಾಲಾ ಮನ್ನಾ ಮಾಡ್ತಿದ್ದೆ ಎಂದು ಉಲ್ಟಾ ಹೋಡಿದ್ದಾರೆ ಈ ಕಾರಣದಿಂದ ಈ ಜನ ಬೆಂಬಲವಿಲ್ಲದ ಸರ್ಕಾರ ಬಹಳ ದಿನ ಉಳಿಯುದಿಲ್ಲ ಎಂದು ಭವಿಷ್ಯ ನುಡಿದ್ರು..

ಕಾರವಾರ

ಕಾಂಗ್ರೇಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನ ವಿರೋದಿಸಿ ಇಂದು ಬಿಜೆಪಿ ಕರಾಳದಿವನ್ನ ಆಚರಿಸುತ್ತಿದೆ ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲೂ ಬಿಜೆಪಿಗರು ಕರಾಳ ದಿನವನ್ನ ಆಚರಿಸಿದ್ರು. ನಗರದ ಸುಭಾಷ್ ವ್ರತ್ತದ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿಗರು ಶಾಸಕಿ ರೂಪಾಲಿ ನಾಯ್ಕ್ ಮುಂದಾಳತ್ವದಲ್ಲಿ ಮೈತ್ರಿ ಸರಕಾರವನ್ನ ವಿರೋದಿಸಿ ಕರಾಳದಿನವನ್ನ ಆಚರಿಸಿದ್ರು.

 

ಕಾಂಗ್ರೇಸ್ ಜೆಡಿಎಸ್ ಮೈತ್ರಿಯಾಗಿ ಸರ್ಕಾರ ರಚನೆ ಮಾಡುತ್ತಿರುವುದು ಅಪವಿತ್ರವಾದದ್ದು ಎಂದು ಶಾಸಕಿ ರೂಪಾಲಿ ಆರೋಪಿಸಿದ್ರು, ಮುಂದಿನ ದಿನದಲ್ಲಿ ಈ ಸರ್ಕಾರ ಉಳಿಯಲ್ಲ ಇದು ಕೇವಲ ಆರು ತಿಂಗಳ ಸರ್ಕಾರ ಮುಂದಿನ ದಿನದಲ್ಲಿ ಬಹುಮತದಿಂದ ನಮ್ಮದೆ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರೋತ್ತೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ರು.

ಶಿವಮೊಗ್ಗ

ರಾಜ್ಯದ 20 ಜಿಲ್ಲೆಗಳಲ್ಲಿ ಜೆಡಿಎಸ್ ಖಾತೆ ತೆರೆದಿಲ್ಲ.. ಇಂತಹ ಕುಮಾರಸ್ವಾಮಿಯನ್ನು ಯಾವ ಕಾರಣಕ್ಕೆ ನೀವು ಸಿಎಂ ಮಾಡಲು ರಾಜ್ಯಕ್ಕೆ ಬರುತ್ತಿದ್ದೀರಿ ಎಂದು ಪದಗ್ರಹಣಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ನಾಯಕರಿಗೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರಶ್ನೆ ಮಾಡಿದ್ದಾರೆ.

ನಗರದ ಗೋಪಿ ಸರ್ಕಲ್​ನಲ್ಲಿ ಬಿಜೆಪಿಯ ವತಿಯಿಂದ ಕರಾಳ ದಿನ ಆಚರಣೆ ಮಾಡಲಾಯ್ತು. ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಇಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಮುಳುಗುವ ಹಡಗು.

. ರಾಷ್ಟ್ರೀಯ ಮಟ್ಟದಲ್ಲಿ ಯಾರೇ ಒಂದಾದರೂ ನರೇಂದ್ರ ಮೋದಿಯನ್ನು ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿಯಾಗೋದನ್ನ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಯಾದಗಿರಿ

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ವಿರೋಧಿಸಿ ಯಾದಗಿರಿ ನಗರದಲ್ಲಿಂದು ಜಿಲ್ಲಾ ಬಿಜೆಪಿ  ಘಟಕದ ವತಿಯಿಂದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಲಾಯಿತು, ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕರರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಗರ ಶಾಸ್ತ್ರೀ ಚೌಕದಿಂದ ಸುಭಾಷ ಚೌಕ ವರೆಗೆ ಪ್ರತಿಭಟನೆ ಮೆರವಣಿಗೆ  ನಡೆಸಿದ್ರು.

 

.  ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿ  ಎಂದು   ಹೆಚ್ ಡಿ ಕುಮಾರ ಸ್ವಾಮಿ ಹಾಗೂ ಕಾಂಗ್ರೆಸ್ ವಿರುದ್ದ ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು.

Sponsored :

Related Articles