ಅಯ್ಯೋ ದೊಡ್ಡಗೌಡ್ರು ಸೋತರಂತೆ! ಇಷ್ಟಕ್ಕೂ ಗೌಡ್ರಿಗೆ ಬಿದ್ದ ಮತ ಎಷ್ಟು?! ಸೋಲಿಗೆ ಕಾರಣವೇನು ಗೊತ್ತಾ?!

10533
9900071610

ಲೋಕಸಭಾ ಹಣಾಹಣಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರಿಗೆ  ಶಾಕ್ ಎದುರಾಗಿದ್ದು, ಬಿಜೆಪಿಯ ಜಿ.ಎಸ್.ಬಸವರಾಜು  ವಿರುದ್ಧ  ಮಾಜಿ ಪ್ರಧಾನಿಗಳು 15 ಸಾವಿರ ಮತಗಳ ಅಂತರದಿಂದ ಸೋಲನ್ನಪ್ಪಿದ್ದಾರೆ. ಮೈತ್ರಿ ಸರ್ಕಾರದ ವೈಫಲ್ಯಕ್ಕೆದೇವೆಗೌಡರು ಸೋಲಿನ ರುಚಿ ನೋಡಿದಂತಾಗಿದೆ.

ad

ದೇವೇಗೌಡರ ತವರು ಕ್ಷೇತ್ರವಾಗಿದ್ದ ಹಾಸನ ಜಿಲ್ಲೆಯನ್ನು ಈ ಬಾರಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ದೇವೆಗೌಡರು ತುಮಕೂರಿನಿಂದ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ದೇವೆಗೌಡರಿಗೆ  ಬಿಜೆಪಿ ಅಭ್ಯರ್ಥಿ ಬಸವರಾಜು ಪ್ರತಿಸ್ಪರ್ಧಿಯಾಗಿದ್ದರು.

ತುಮಕೂರು ಕ್ಷೇತ್ರದ ಆರಂಭದ ಕೆಲವು ಸುತ್ತುಗಳಲ್ಲಿ ದೇವೇಗೌಡರು ಮುನ್ನಡೆ ಪಡೆದಿದ್ದರು. ನಂತರ ಪ್ರತಿ ಹಂತದಲ್ಲಿಯೂ ಜಿ.ಎಸ್. ಬಸವರಾಜು ಅವರು ಮುನ್ನಡೆ ಪಡೆದುಕೊಂಡಿದ್ದು. ಸುಮಾರು 15 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ದೇವೇಗೌಡರ ವಿರುದ್ಧ ಜಿ.ಎಸ್. ಬಸವರಾಜು ಜಯಭೇರಿ ಬಾರಿಸಿದ್ದಾರೆ.

 

ತುಮಕೂರು ಲೋಕಸಭೆ ಕ್ಷೇತ್ರದಿಂದ  ಮತ್ತೊಮ್ಮೆ ಸಂಸತ್​​ ಪ್ರವೇಶಿಸುವ ಕನಸು ಹೊಂದಿದ್ದ ದೇವೇಗೌಡರಿಗೆ ಇದು ದೊಡ್ಡ ಸೋಲಾಗಿದ್ದು, ಕಾಂಗ್ರೆಸ್ ವಿರೋಧಿ ಅಲೆ ದೇವೇಗೌಡರ ಸೋಲಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಹಿಂದೆ ತುಮಕೂರು ಕ್ಷೇತ್ರದಿಂದ ಮುದ್ದಹನುಮೇಗೌಡ ಮತ್ತು ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಮೈತ್ರಿ ಪಕ್ಷದ ವಿರುದ್ಧ ಸಿಡಿದೆದ್ದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರು. ಬಳಿಕ ಇಬ್ಬರೂ ಮುಖಂಡರ ಮೈತ್ರಿಧರ್ಮ ಪಾಲನೆ ಮಾಡಬೇಕೆಂದು ತಿಳಿಸಿ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದರು.

ಇನ್ನೂ ಸುಮಾರು ಹತ್ತು ವರ್ಷಗಳ ಕಾಲ ಸತತ ಬಿಜೆಪಿ ಕೈಯಲ್ಲಿದ್ದ ತುಮಕೂರು ಕ್ಷೇತ್ರವನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುದ್ದಹನುಮೇಗೌಡ ‘ಕೈ’ವಶ ಮಾಡಿಕೊಂಡಿದ್ದರು. ಆದರೆ, ಕಾಂಗ್ರೆಸ್‌ನ ಒಳಜಗಳ, ನಾಯಕರ ಅಸಮಾಧಾನ ಜಿ.ಎಸ್. ಬಸವರಾಜು ಗೆಲ್ಲಲು ನೆರವಾಗಿದೆ. ಮುದ್ದಹನುಮೇಗೌಡ ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ ಜಿ.ಎಸ್. ಬಸವರಾಜು ಅವರ ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ, ಎಂದು ಮತದಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

Sponsored :


9900071610