ತ್ರಿಪುರ ಸುಂದರಿ ಬಿಜೆಪಿ ತೆಕ್ಕೆಗೆ !! ಕುಣಿದು ಕುಪ್ಪಳಿಸಿದ ಕರ್ನಾಟಕ ಬಿಜೆಪಿ !!

1618
BJP Defeated Communists in Tripura
BJP Defeated Communists in Tripura

ಈಶಾನ್ಯದ ಮೂರು ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ತನ್ನ ಜಯದ ನಾಗಾಲೋಟ ಮುಂದುವರಿಸಿದ್ದಾರೆ.

ಇದೇ ಮೊದಲ ಬಾರಿಗೆ ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟರ್ ಆಡಳಿತ ಅಂತ್ಯಗೊಂಡಿದೆ. ತ್ರಿಪುರಾದ ಕೆಂಪುಕೋಟೆಗೆ ಲಗ್ಗೆ ಇಟ್ಟಿರುವ ಕೇಸರಿ ಪಡೆ ಪ್ರಾಮಾಣಿಕ ಮುಖ್ಯಮಂತ್ರಿ ಎಂದೇ ಖ್ಯಾತರಾಗಿದ್ದ ಮಾಣಿಕ್ ಸರ್ಕಾರ್​ ಆಡಳಿತಕ್ಕೆ ಬ್ರೇಕ್ ಹಾಕಿದೆ. ಕಮ್ಯುನಿಸ್ಟರ ನಾಡಲ್ಲಿ 40 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕೇವಲ 19 ಸ್ಥಾನಗಳಲ್ಲಷ್ಟೇ ಕಮ್ಯುನಿಸ್ಟರು ಕೆಂಬಾವುಟ ಹಾರಿಸಿದ್ದಾರೆ. ಆದ್ರೆ ಕಾಂಗ್ರೆಸ್ ಮಾತ್ರ ತ್ರಿಪುರಾದಲ್ಲಿ ಒಂದೇ ಒಂದು ಸ್ಥಾನ ಜಯಿಸಿಲ್ಲ.

ad

 

ಇನ್ನು ಮೇಘಾಲಯದಲ್ಲಿ ಕಾಂಗ್ರೆಸ್​ ಎನ್​ಪಿಪಿ ಮಧ್ಯೆ ಟಫ್ ಫೈಟ್ ಏರ್ಪಟ್ಟಿದೆ. ಕಾಂಗ್ರೆಸ್ ಹಾಗೂ ಎನ್​ಪಿಪಿ ತಲಾ 19 ಸ್ಥಾನಗಳನ್ನು ಗೆದ್ದುಕೊಂಡಿವೆ. ಇತರ ಪಕ್ಷೇತರರು ಮತ್ತು ಸಣ್ಣಪುಟ್ಟ ಪಕ್ಷಗಳು 17 ಸ್ಥಾನವನ್ನು ಗಳಿಸಿದೆ. ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಆದರೆ ಬಿಜೆಪಿ ಮತ್ತು ಇತರ 17 ಸ್ಥಾನಗಳ ಗೆದ್ದ ಅಭ್ಯರ್ಥಿಗಳು ಯಾರಿಗೆ ಬೆಂಬಲ ಮಾಡುತ್ತಾರೆ ಎನ್ನುವುದರ ಮೇಲೆ ಮೇಘಾಲಯದ ರಾಜಕೀಯ ನಿರ್ಧಾರವಾಗುತ್ತದೆ.

ಇನ್ನು ನಾಗಾಲ್ಯಾಂಡ್​ನಲ್ಲಿ-ಬಿಜೆಪಿ ಹಾಗು ಎನ್​ಪಿಎಫ್ ಪ್ರಬಲ ಪೈಪೋಟಿ ಕಂಡು ಬಂದಿದೆ. ಬಿಜೆಪಿ 26, ಎನ್​ಪಿಎಫ್​ 28 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನು ಕಾಂಗ್ರೆಸ್ 2 ಸ್ಥಾನಗಳಷ್ಟೇ ಗೆದ್ದಿದೆ. ಕಮ್ಯುನಿಷ್ಟರ ನಾಡಲ್ಲಿ ಗೆದ್ದು ಬೀಗಿದ ಕಮಲ ಪಾಳಯಲದಲ್ಲಿ ಸಂಭ್ರಮ ಮನೆ ಮಾಡಿದೆ. ತ್ರಿಪುರಾ ಗೆಲುವು ಸಾಧಿಸುತ್ತಿದ್ದಂತೆ ಕರ್ನಾಟಕದಲ್ಲೂ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್ ನೇತೃತ್ವದಲ್ಲಿ ಸಿಹಿ ಹಂಚಿ, ಬಣ್ಣ ಎರಚಿ ಸಂಭ್ರಮಾಚರಣೆ ಮಾಡಲಾಯ್ತು.

Sponsored :

Related Articles