ಮನೆ ಕಡೆ ಹೊರಟೆ ಅಂದ್ರು ಉಮೇಶ್ ಕತ್ತಿ !! ಜೆಡಿಎಸ್ ಮನೆಗೆ ಬನ್ರಿ ಅಂದ್ರು ಹೊರಟ್ಟಿ !! “ಕತ್ತಿ” ಮೇಲಿನ ನಡಿಗೆಯಾದ ಬಿಎಸ್​ವೈ ಸರಕಾರ !!

690

ಕಾಂಗ್ರೆಸ್ ಜೆಡಿಎಸ್ ಅತೃಪ್ತ ಶಾಸಕರಿಂದಲೇ ಮೈತ್ರಿ ಸರಕಾರ ಉರುಳಿಸಿ ಸರಕಾರ ರಚಿಸಿರುವ ಬಿಜೆಪಿಗೂ ಇದೀಗ ಸ್ವಪಕ್ಷೀಯ ಅತೃಪ್ತ ಶಾಸಕರ ಬಿಸಿ ತಟ್ಟಿದೆ. ಇಂದು ಬೆಳಗಾವಿ ಭಾಗದ ಅತೃಪ್ತ ಶಾಸಕರ ಸಭೆಯನ್ನು ಉಮೇಶ್ ಕತ್ತಿ ನಡೆಸಿದ್ರು. ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಸಭೆ ನಡೆಸಿದ ಉಮೇಶ್ ಕತ್ತಿ ತನ್ನ ಮುಂದಿನ ನಡೆಯನ್ನು ಪ್ರಕಟಿಸಿದ್ದಾರೆ. ಈ ಮಧ್ಯೆ ಬಿಜೆಪಿ ಅತೃಪ್ತರ ನಾಯಕ ಉಮೇಶ್ ಕತ್ತಿ ಮತ್ತು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಭೇಟಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಬಿಎಸ್​ವೈ ಸಂಪುಟ ಸೇರಲು ಅವಕಾಶ ಸಿಗದ ಹಿನ್ನಲೆಯಲ್ಲಿ ಬಿಜೆಪಿ ಹಿರಿಯ ಶಾಸಕ ಉಮೇಶ್ಕತ್ತಿ ಅಸಮಾದಾನ ಹೊರ ಹಾಕಿದ್ದು ನಿನ್ನೆಯಿಂದ ಹಲವು ರಾಜಕೀಯ ವಿದ್ಯಾಮಾನಗಳಿಗೆ ಕಾರಣವಾಗಿತ್ತು. ಇವತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೆಳಗಾವಿ ಭಾಗದ ತನ್ನ ಆಪ್ತ ಶಾಸಕರ ಜೊತೆ ಉಮೇಶ್ ಕತ್ತಿ ಸಭೆ ನಡೆಸಿದ್ದಾರೆ.

ad

ಇಂದು ಶಾಸಕರ ಭವನದಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್, ರಾಯಭಾಗ ಶಾಸಕ ದುರ್ಯೋಧನ ಐಹೊಳೆ, ರಾಮದುರ್ಗಾ ಶಾಸಕ ಮಹದೇವಪ್ಪ ಯಾರವಾಡ ಜೊತೆ ಸಭೆ ನಡೆಸಿದ್ರು. ಸಭೆಯ ಬಳಿಕ ಮಾತನಾಡಿದ ಉಮೇಶ್ ಕತ್ತಿ, ತನ್ನ ಮುಂದಿನ ರಾಜಕೀಯ ನಡೆ ಮನೆಯ ಕಡೆ ಎಂದರು.

ಮುಂದೆ ಮನೆಯ ಕಡೆ ನಡೆಯುತ್ತೇನೆ ಎಂಬ ಹೇಳಿಕೆಯೇ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಉಮೇಶ್ ಕತ್ತಿಯ ರಾಜಕೀಯ ಮೂಲಮನೆ ಜೆಡಿಎಸ್ ಎಂಬುದು ಕೂಡಾ ಇಲ್ಲಿ ಮುಖ್ಯವಾಗುತ್ತದೆ. ಈ ಸಭೆ ಮುಗಿಯುತ್ತಿದ್ದಂತೆ ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿಯವರು ಉಮೇಶ್ ಕತ್ತಿಯವರನ್ನು ಭೇಟಿ ಮಾಡಿ ಎಚ್ ಡಿ ಕುಮಾರಸ್ವಾಮಿಯವರ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಜೆಡಿಎಸ್ ನಲ್ಲಿದ್ದ ನೀವು ಮರಳಿ ಮನೆಗೆ ಬನ್ನಿ ಎಂದು ಹೊರಟ್ಟಿಯವರು ಕತ್ತಿಗೆ ಹೇಳಿದ್ದಾರೆ.

Sponsored :

Related Articles