ಜಿಂದಾಲ್​ ವಿರುದ್ಧ ಸಮರ ಸಾರಿದ ಬಿಜೆಪಿ! ಮೂರು ದಿನಗಳ ಕಾಲ ಸತ್ಯಾಗ್ರಹಕ್ಕೆ ಸಿದ್ಧವಾದ ಕಮಲಪಾಳಯ!!

241

ಜಿಂದಾಲ್​ ವಿರುದ್ಧ ಸಮರ ಸಾರಿರುವ ಬಿಜೆಪಿ ಮತ್ತಷ್ಟು ಉಗ್ರ ಹೋರಾಟಕ್ಕೆ ಸಜ್ಜಾಗಿದೆ. ಕಾನೂನು ಬಾಹಿರವಾಗಿ ಜಿಂದಾಲ್​ಗೆ 3666 ಎಕರೆ ಭೂಮಿ ಸೇಲ್ ಮಾಡಿರುವುದನ್ನು ವಿರೋಧಿಸಿರುವ ಬಿಜೆಪಿ ಸರ್ಕಾರ ನಿರ್ಧಾರ ಹಿಂಪಡೆಯುವವರೆಗೂ ಹೋರಾಟ ನಡೆಸಲು ತೀರ್ಮಾನಿಸಿತ್ತು.


ಇದೀಗ ಸರ್ಕಾರದ ಕ್ರಮ ಖಂಡಿಸಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದೆ. ಜೂನ್ 14 ರಿಂದ 3 ದಿನಗಳ ಕಾಲ ಬಿಜೆಪಿ ಸತ್ಯಾಗ್ರಹ ನಡೆಸಿ ಭೂಮಿ ಹಿಂಪೆಯುವಂತೆ ಸರ್ಕಾರವನ್ನು ಒತ್ತಾಯಿಸಲಿದೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ  ಮಾತನಾಡಿದ ಆರ್.ಅಶೋಕ್,  14 ರಿಂದ  ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ad


ಸತ್ಯಾಗ್ರಹ ಸಂಬಂಧ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಇಂದು ಆರ್.ಅಶೋಕ ಸಭೆ  ನಡೆಸಿದ್ದು, ಕಾರ್ಯಕರ್ತರೊಂದಿಗೆ ಚರ್ಚಿಸಿದ್ದಾರೆ. ಈ ಹೋರಾಟಕ್ಕೆ ಸರ್ಕಾರ ಮಣಿಯದಿದ್ದರೇ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಆರ್.ಅಶೋಕ್ ಎಚ್ಚರಿಸಿದ್ದಾರೆ.  ಈ ಹಿಂದೆ ಬಿಎಸ್​.ಯಡಿಯೂರಪ್ಪನವರು ಸಹ ಜಿಂದಾಲ್​ಗೆ ಭೂಮಿ ನೀಡಿದ್ದನ್ನು ವಿರೋಧಿಸಿ ಭೂಮಿಯನ್ನು ಹಿಂತಿರುಗಿಸುವವರೆಗೂ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು.

Sponsored :

Related Articles