ಕರಾವಳಿಯಲ್ಲೂ ಬಿಜೆಪಿಯ ಜನ ಸುರಕ್ಷಾ ಯಾತ್ರೆ. ಸಿದ್ದು ವಿರುದ್ದ ಹೆಗಡೆ ವಾಗ್ದಾಳಿ!

246
BJP Suraksha Yatra in Karwar.
BJP Suraksha Yatra in Karwar.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಕರಾವಳಿಯಲ್ಲಿ ಬಿಜೆಪಿ ಪಕ್ಷ ಇದೀಗ ಹಿಂದೂಗಳ ಮತಗಳ ಭೇಟೆಯ ಮೇಲೆ ಕಣ್ಣಿಟ್ಟಿದೆ.

ad

ರಾಜ್ಯದಲ್ಲಿ ನಡೆದ ಹಿಂದೂಗಳ ಹತ್ಯೆಯನ್ನ ವಿರೋಧಿಸಿ ಇಂದಿನಿಂದ ಕರಾವಳಿ ಭಾಗದಲ್ಲಿ ಬಿಜೆಪಿ ಪಕ್ಷ ಜನ ಸುರಕ್ಷಾ ಎನ್ನುವ ಹೆಸರಿನಲ್ಲಿ ಯಾತ್ರೆಯನ್ನ ಹಮ್ಮಿಕೊಂಡಿದೆ. ಉತ್ತರ ಕನ್ನಡದಿಂದ ಮಂಗಳೂರಿನ ವರೆಗೆ ಯಾತ್ರೆ ನಡೆಯಲಿದ್ದು ಯಾತ್ರೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಇಂದು ಅಂಕೋಲಾದಲ್ಲಿ ಚಾಲನೆ ನೀಡಿ ಕಾಂಗ್ರೇಸ್ ಸರಕಾರದ ವಿರುದ್ದ ಕಿಡಿಕಾರಿದರು.. ಬಿಜೆಪಿ ಇದೀಗ ಕರಾವಳಿ ಭಾಗದಲ್ಲಿ ಹಿಂದೂ ಮತಗಳ ಮೇಲೆ ಕಣ್ಣಿಟ್ಟಿದ್ದು ಇಂದಿನಿಂದ ಜನ ಸುರಕ್ಷಾ ಯಾತ್ರೆಯನ್ನ ಕರಾವಳಿಯಲ್ಲಿ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ನಡೆದ 23 ಹಿಂದೂ ಕಾರ್ಯಕರ್ತರ ಹತ್ಯೆಯನ್ನ ವಿರೋದಿಸಿ ಬಿಜೆಪಿ ಪಕ್ಷದ ವತಿಯಿಂದ ಜನ ಸುರಕ್ಷಾ ಯಾತ್ರೆಯನ್ನ ಹಮ್ಮಿಕೊಂಡಿದೆ.

ಪಿಎಫ್ಐ ಹಾಗೂ ಎಸ್.ಡಿ.ಪಿ.ಐ ಸಂಘಟನೆಯನ್ನ ನಿಷೇಧ ಮಾಡುವಂತೆ, ಹಿಂದೂ ಕಾರ್ಯಕರ್ತರ ಎಲ್ಲಾ ಹತ್ಯೆಯ ತನಿಖೆಯನ್ನ ಸಿಬಿಐಗೆ ವಹಿಸಬೇಕು ಜೊತೆಗೆ ಸಮಾಜ ಘಾತುಕ ಸಂಘಟನೆಗಳಿಗೆ ಹಾಗೂ ಕೋಮು ಹಿಂಸೆಗೆ ಕುಮ್ಮಕ್ಕು ಕೊಡುತ್ತಿರುವ ಸಚಿವರನ್ನ ವಜಾ ಮಾಡುವಂತೆ ಜನ ಸುರಕ್ಷಾ ಯಾತ್ರೆಯನ್ನ ಹಮ್ಮಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಿಂದ ಮಂಗಳೂರಿನ ವರೆಗೆ ಹಮ್ಮಿಕೊಂಡಿರುವ ಯಾತ್ರೆಗೆ ಇಂದು ಚಾಲನೆ ದೊರೆಯಿತು. ಪಟ್ಟಣದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನೇತೃತ್ವದಲ್ಲಿ ಬೃಹತ್ ಯಾತ್ರೆ ಸಂಚರಿಸಿ ಕಾಂಗ್ರೇಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದಾದ ನಂತರ ಪಟ್ಟಣದ ಜೈ ಹಿಂದ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾತ್ರೆಗೆ ಕೋಮು ಗಲಭೆಯಲ್ಲಿ ಮೃತಪಟ್ಟ ಹೊನ್ನಾವರದ ಪರೇಶ್ ಮೇಸ್ತಾ ತಂದೆತಾಯಿ ಚಾಲನೆಯನ್ನ ನೀಡಿದರು. ಇದಾದ ನಂತರ ಮಾತನಾಡಿದ ಅನಂತ್ ಕುಮಾರ್ ಹೆಗಡೆ ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದರು..

ಅಂಕೋಲಾ ಪಟ್ಟಣದಿಂದ ಚಾಲನೆಗೊಂಡ ಬಿಜೆಪಿಯ ಜನ ಸುರಕ್ಷಾ ಯಾತ್ರೆ ಜಿಲ್ಲೆಯ ಕುಮಟಾ, ಹೊನ್ನಾವರ ಭಟ್ಕಳದಲ್ಲಿ ಸಂಚರಿಸಲಿದೆ. ಇದಾದ ನಂತರ ಉಡುಪಿ ಮಾರ್ಗವಾಗಿ ಮಂಗಳೂರಿಗೆ ತೆರಳಿ ಮಾರ್ಚ್ ಆರರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬೃಹತ್ ಸಭೆಯನ್ನ ಹಮ್ಮಿಕೊಂಡಿದೆ. ನಗರ ವ್ಯಾಪ್ತಿಯಲ್ಲಿ ಯಾತ್ರೆ ಸಂಚರಿಸಲಿದ್ದು ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇನ್ನು ಇಂದು ಅಂಕೋಲಾ ಪಟ್ಟಣದಿಂದ ಜನ ಸುರಕ್ಷಾ ಯಾತ್ರೆ ಕೇಂದ್ರ ಸಚಿವ ಹಾಗೂ ಬಿಜೆಪಿ ಉಸ್ತುವರಿ ಪ್ರಕಾಶ್ ಜಾವಡೇಕರ್ ಚಾಲನೆ ಕೊಡಬೇಕಿತ್ತು. ಆದರೆ ತುರ್ತು ಕಾರ್ಯದ ನಿಮಿತ್ತ ಕಾರವಾರದಲ್ಲಿ ಯಾತ್ರೆ ಹಿನ್ನಲೆಯಲ್ಲಿ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು.

ನಗರದ ಮಾಲಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇದಾದ ನಂತರ ನಗರದ ಸುಭಾಷ್ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಪ್ರಕಾಶ್ ಜಾವಡೇಕರ್ ರಾಜ್ಯದಲ್ಲಿ ಗೂಂಡಾ ಸರ್ಕಾರ ಆಡಳಿತದಲ್ಲಿದ್ದು ಜನರನ್ನ ಕಾಯುವ ಪೊಲೀಸರಿಗೆ ಸಹ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.. ಇಂದು ಅಂಕೋಲಾದಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯಲ್ಲಿ ಸಂಸದೆ ಶೋಭಾ ಕರದ್ಲಾಂಜೆ  ಪಾಲ್ಗೊಳ್ಳಬೇಕಿತ್ತು. ಆದರೆ ಶೋಭಾ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕರಾವಳಿಯಲ್ಲಿ ನಡೆಯುತ್ತಿರುವ ಜನ ಸುರಕ್ಷಾ ಯಾತ್ರೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನ ಸಹ ಮಾಡಲಾಗಿದೆ. ಯಾತ್ರೆ ಸಂಚರಿಸುವ ಸ್ಥಳದಲ್ಲಿ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಇನ್ನು ಯಾತ್ರೆ ಸಾಗುವ ಸ್ಥಳದಲ್ಲಿ ಬಹಿರಂಗ ಸಮಾವೇಶವನ್ನ ಸಹ ಆಯೋಜಿಸಿದ್ದು ಹಿಂದೂ ಮತಗಳನ್ನ ಕಬಳಿಸಲು ಹಿಂದೂ ವಿರೋದಿ ಕಾಂಗ್ರೇಸ್ ಸರ್ಕಾರ ಎಂದು ಬಿಂಬಿಸಲು ಇದೀಗ ಬಿಜೆಪಿ ಮುಂದಾಗಿದೆ. ಒಟ್ಟಿನಲ್ಲಿ ರಾಜ್ಯ ವಿಧಾನ ಸಭಾ ಚುನವಾಣೆ ಹತ್ತಿರವಾಗುತ್ತಿದ್ದು ರಾಜಕೀಯ ಪಕ್ಷಗಳ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು ಇದೀಗ ಬಿಜೆಪಿ ಜನ ಸುರಕ್ಷಾ ಯಾತ್ರೆ ಮೂಲಕ ಹಿಂದೂ ಮತಗಳ ಮೇಲೆ ಕಣ್ಣಿಟ್ಟಿದ್ದು ಇದು ಎಷ್ಟರ ಮಟ್ಟಿಗೆ ಯಶಸ್ಸು ಸಿಗಲಿದೆ ಅನ್ನೋದನ್ನ ಕಾದು ಚುನಾವಣೆ ನಂತರವೆ ಗೊತ್ತಾಗಬೇಕಿದೆ.

|ಉದಯ್ ಬರ್ಗಿ ಬಿಟಿವಿ ಕಾರವಾರ|

Sponsored :

Related Articles