ಬಾಲಿವುಡ್ ನಲ್ಲೂ ಭೂತದ ಕಾಟ! ನಟ ವಿಕ್ಕಿ ಕೌಶಲ್ ಕಾಡುತ್ತಿರುವ ಭೂತ ಯಾವುದು ಗೊತ್ತಾ..!

813

ಬಾಲಿವುಡ್ ನ ಸೂಪರ್ ಹಿಟ್ ಮೂವಿ ‘ಉರಿ’ ಚಿತ್ರದ ನಾಯಕ ವಿಕ್ಕಿ ಕೌಶಲ್ ಈಗ ಭೂತದ ಕಾಟ ಶುರುವಾಗಿದೆ. ಏನಿದು ಹೊಸ ಸುದ್ದಿ ಎಂದು ಯೋಚಿಸುತ್ತಿದ್ದೀರಾ ಹಾಗಾದರೆ ಈ ಸ್ಟೋರಿ ಓದಿ.

ಹೌದು ‘ಉರಿ’ ಚಿತ್ರದ ಮೂಲಕ ಬಿಟೌನ್ ನಲ್ಲಿ ಸಖತ್ ಸೌಂಡ್ ಮಾಡಿದ್ದ ನಟ ವಿಕ್ಕಿ ಕೌಶಲ್ ಇದೀಗಾ ವಿಭಿನ್ನ ಹಾರರ್ ಕಥೆಯೊಂದನ್ನು ಆಯ್ಕೆ ಮಾಡಿಕೊಳ್ಳುವ ಬಾಲಿವುಡ್ ಸಿನಿಮಂದಿಯ ಹಾಗೂ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ನೂತನ ಚಿತ್ರದ ಹೆಸರು ‘ಭೂತ್- ಹಾಂಟೆಡ್ ಶಿಪ್’.

ad

ಬಾಲಿವುಡ್ ನ ‘ಎಬಿಸಿಡಿ’, ‘ಹಂಪ್ಟಿ ಶರ್ಮಾ ಕಿ ದುಲ್ಹಾನಿಯ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಭಾನು ಪ್ರತಾಪ್ ಸದ್ಯ ಇದೀಗಾ ಈ ಚಿತ್ರದ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಮೊದಲ ಬಾರಿಗೆ ವಿಕ್ಕಿಯನ್ನು ವಿಭಿನ್ನ ಪಾತ್ರದಲ್ಲಿ ತೆರೆ ಮೇಲೆ ತರುವ ಜವಾಬ್ದಾರಿ ಹೊಂದಿದ್ದು, ಚಿತ್ರವನ್ನು ನಿರ್ಮಾಪಕ ಕರಣ್ ಜೋಹರ್ ನಿರ್ಮಾಣ ಮಾಡಿದ್ದಾರೆ.

ಆದರೆ ಪ್ರೇತ್ಮಾದ ಹಾರರ್ ಕಥೆ ಹೊಂದಿರುವ ಈ ಚಿತ್ರದಲ್ಲಿ ವಿಕ್ಕಿಯನ್ನು ಕಾಡಲಿರುವ ‘ಭೂತ್’ ಯಾವುದು ಎಂಬುದನ್ನು ಮಾತ್ರ ಚಿತ್ರತಂಡ ಬಹಿರಂಗ ಪಡಿಸಿಲ್ಲಇನ್ನು ಮರ್ಡರ್ ಮಿಸ್ಟರಿ ಕಥೆಯಲ್ಲಿ ‘ಭೂತ್’ ಎಂಟ್ರಿ ಕೊಡಲಿದೆ ಎಂದೂ ಕೂಡ ಹೇಳಲಾಗುತ್ತಿದೆ. ರಹಸ್ಯ ಬೇಧಿಸುವ ಬಾಂಡ್ ಪಾತ್ರದಲ್ಲಿ ಉರಿ ನಟ ಅಭಿನಯಿಸಿದ್ದು, ಹಾರರ್+ಮರ್ಡರ್ ಮಿಸ್ಟರಿ ಕಥೆ ಹೊಂದಿರಲಿರುವ ‘ಭೂತ್’ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಇದರ ಮೊದಲ ಭಾಗ ಈ ವರ್ಷದ ನವೆಂಬರ್ 15 ರಂದು ರಿಲೀಸ್ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ.

ಇನ್ನೂ ಧರ್ಮ ಪ್ರೊಡಕ್ಷನ್ ಹೌಸ್ ಚಿತ್ರದ ಫಸ್ಟ್​ಲುಕ್ ಬಿಡುಗಡೆ ಮಾಡಿದ್ದು, ಭೂತ್’ದ​ ಕೈಯಲ್ಲಿ ಸಿಲುಕಿರುವ ವಿಕ್ಕಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಚಿತ್ರದ ಪಾತ್ರದ ಕೆಲವು ಸ್ಟಿಲ್ಸ್​ಗಳನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಉರಿ ಚಿತ್ರದ ಸಕ್ಸಸ್ ನಂತರ ನಟ ವಿಕ್ಕಿ ಕೌಶಲ್ ‘ಭೂತ್​’ ಚಿತ್ರದ ಮೂಲಕ ಮತ್ತೊಂದು ಸಕ್ಸಸ್ ಪಡೆಯುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಾಗುತ್ತಿದೆ.

Sponsored :

Related Articles