ತಮ್ಮ ಪ್ರೇಯಸಿ ಐಶ್ವರ್ಯಾ ರೈ ಬಗ್ಗೆ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ ನಟ ವಿವೇಕ್ ಒಬೆರಾಯ್! ಇಷ್ಟಕ್ಕೆಲ್ಲ ಕಾರಣವಾಗಿದ್ದೇನು ಗೊತ್ತಾ?!

4062

ನಿನ್ನೆ ಎಕ್ಸಿಟ್ ಪೋಲ್ ನಲ್ಲಿ ಮೋದಿ ಮೇಲುಗೈ ಪಡೆಯುತ್ತಾರೆ ಎಂಬ ನೀರಿಕ್ಷೆ ಮೂಡಿರುವ ಬೆನ್ನಲ್ಲೇ, ತೆರೆ ಮೇಲೆ ಮೋದಿಯಾಗಿ ಕಾಣಿಸಿಕೊಂಡಿದ್ದ ನಟ ವಿವೇಕ್ ಒಬೆರಾಯ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ad

ಹೌದು ನಿನ್ನೇ ದೇಶದಲ್ಲಿ ಎಕ್ಸಿಟ್ ಪೋಲ್ ಪ್ರಕಟಗೊಂಡಿದ್ದು ರಾಜಕೀಯ ಹಾಗೂ ಶೇರು ಕ್ಷೇತ್ರದಲ್ಲಿ ತೀವ್ರ ಸಂಚಲನ ಉಂಟಾಗಿತ್ತು. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲೂ ಈ ಎಕ್ಸಿಟ್ ಪೋಲ್ ನ ಕುರಿತು ಸಾಕಷ್ಟು ಜೋಕ್ ಹಾಗೂ ಟೀಕೆಗಳು ಹುಟ್ಟಿಕೊಂಡಿದ್ದವು.
ಈಗ ಇದೇ ಮೀಮ್ಸ್ ವೊಂದು ನಟ ವಿವೇಕ್ ಒಬೆರಾಯ್ ಗೆ ಸಂಕಷ್ಟಕ್ಕೆ ಸಿಲುಕಿಸಿದೆ.

ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಮೀಮ್ ವೊಂದರಲ್ಲಿ ನಟಿ ಹಾಗೂ ವಿಶ್ವಸುಂದರಿ ಐಶ್ವರ್ಯಾ ರೈ ಸಲ್ಮಾನ್ ಖಾನ್ ಜೊತೆಗಿದ್ದ ಪೋಟೋವನ್ನು ಒಫಿನಿಯನ್ ಪೋಲ್ ಎಂದು, ವಿವೇಕ್ ಒಬೆರಾಯ್ ಜೊತೆಗಿರುವ ಪೋಟೋವನ್ನು ಎಕ್ಸಿಟ್‌ ಪೋಲ್ ಎಂದು ಹಾಗೂ ಐಶ್ವರ್ಯಾ ರೈಬಚ್ಚನ್, ಅಭಿಷೇಕ್ ಬಚ್ಚನ್ , ಆರಾಧ್ಯ ಜೊತೆ ಇರುವ ಪೋಟೋವನ್ನು ಫಲಿತಾಂಶ ಎಂದು ಪ್ರಕಟಿಸಲಾಗಿತ್ತು.
ಸಾಕಷ್ಟು ವೈರಲ್ ಆಗಿದ್ದ ಈ ಪೋಸ್ಟ್ ನ್ನು ಖುದ್ದು ವಿವೇಕ್ ಒಬೆರಾಯ್ ಇದನ್ನು ಶೇರ್ ಮಾಡಿಕೊಂಡಿದ್ದು, ಈ‌ ಮೀಮ್ ಸೃಜನಾತ್ಮಕವಾಗಿದೆ. ಇದರಲ್ಲಿ ರಾಜಕೀಯ ಇಲ್ಲ‌ . ಕೇವಲ ಜೀವನ ಮಾತ್ರ ಇದೆ. ಇದರ ಶ್ರೇಯಸ್ಸು ಪವನ್ ಸಿಂಗ್ ಅವರಿಗೆ ಸಲ್ಲಬೇಕು ಎಂದು ಟ್ವಿಟ್ ಮಾಡಿದ್ದರು.

ಐಶ್ವರ್ಯಾ ರೈ ಬಗ್ಗೆ ಅವಹೇಳನಕಾರಿಯಾಗಿ ವಿವೇಕ್ ಮಾಡಿರುವ ಈ ಟ್ವಿಟ್ ಇದೀಗ, ಬಾಲಿವುಡ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಟಿ ಸೋನಮ್ ಕಪೂರ್ ಸೇರಿದಂತೆ ಹಲವರು ವಿವೇಕ್ ಕೀಳು ಅಭಿರುಚಿ ತೋರಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನೊಂದೆಡೆ ವಿವೇಕ್ ಈ ಟ್ವಿಟ್ ನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮಹಿಳಾ ಆಯೋಗ ನಟ ವಿವೇಕ್ ಒಬೆರಾಯ್ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಡಿ ಸ್ಪಷ್ಟನೆ ಕೇಳಿ ನೊಟೀಸ್ ಜಾರಿ ಮಾಡಿದೆ‌ .

ಇನ್ನು ಸಾಮಾಜಿಕ ಜಾಲತಾಣದಲ್ಲಿ ವಿವೇಕ್ ಟ್ವಿಟ್ ತೀವ್ರ ಆಕ್ಷೇಪಕ್ಕೆ ಕಾರಣವಾಗಿ ದ್ದು ಜನರು ವಿವೇಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮೀಮ್ಸ್ ಬೆಂಬಲಿಸುವ ಭರದಲ್ಲಿ ನಟ ವಿವೇಕ್ ಒಬೆರಾಯ್ ತಮ್ಮದೇ ಕ್ಷೇತ್ರದ ಸೆಲಿಬ್ರೆಟಿ ನಟ-ನಟಿಯ ಬದುಕಿನ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.

Sponsored :

Related Articles