ದಬಾಂಗ್​-3ನಲ್ಲಿ ಸೊಂಟ ಬಳುಕಿಸಲಿರೋ ಮೌನಿ ರಾಯ್​..!

590

ಬಾಲಿವುಡ್​ ಬ್ಯಾಡ್​ ಬಾಯ್ ಸಲ್ಮಾನ್ ಖಾನ್ ಅಭಿನಯಿಸ್ತಿರೋ ದಬಾಂಗ್-3 ಒಂದಲ್ಲ ಒಂದು ಸುದ್ದಿ ಭಾರೀ ಸೌಂಡ್ ಮಾಡ್ತಿದೆ. ಈಗಾಗ್ಲೇ ಟ್ರೇಲರ್​ ಹಾಗೂ ಸಾಂಗ್ಸ್​​ನಿಂದ ಬಿಟೌನ್​ನಲ್ಲಿ ಬೇಜಾನ್ ಟಾಕ್ ಕ್ರಿಯೇಟ್ ಮಾಡಿರೋ ದಬಾಂಗ್​-3 ಸಿನಿಮಾದಲ್ಲಿ ಸಲ್ಲು 5 ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ad

ಈಗ ದಬಾಂಗ್ ಅಡ್ಡದಿಂದ ಲೇಟೆಸ್ಟ್​ ನ್ಯೂಸ್​ವೊಂದು ಹೊರ ಬಂದಿದೆ. ಸಿನಿಮಾದ ಐಟಂ ಸಾಂಗ್​ವೊಂದರಲ್ಲಿ ಹಾಟ್ ಅಂಡ್ ಗ್ಲಾಮರ್ ಗೊಂಬೆ ಮೌನಿ ರಾಯ್ ಸಲ್ಲುಮೇನಿಯಾ ಜೊತೆ ಸೊಂಟ ಬಳುಕಿಸಲಿದ್ದಾರಂತೆ.  ಈಗಾಗ್ಲೆ ದಬಾಂಗ್ ಮುನ್ನಿ ಬದ್ನಾಂ ಹುಯಿ ಸಾಂಗ್ ನಲ್ಲಿ ಮಲೈಕಾ ಅರೋರಾ ಖಾನ್ ಮತ್ತು ದಬಾಂಗ್-2 ಫೆವಿಕಾಲ್ ಸೆ ಐಟಂ ಹಾಡುನಲ್ಲಿ ಕರಿನಾ ಕಪೂರ್ ಕಾಣಿಸಿಕೊಂಡಿದ್ರು. ಈ ಎರಡು ಸಾಂಗ್ಸ್​ ಕೂಡ ಬಿ ಟೌನ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದವು.

ಹೀಗಾಗಿ ಸತ್ವಃ ಸಲ್ಮಾನ್ ಖಾನ್ ಮೌನಿರಾಯ್​ ರನ್ನ ಆಯ್ಕೆ ಮಾಡಿದ್ದಾರಂತೆ.

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್​ ಅಭಿನಯದ ಕೆಜಿಎಫ್ ಸಿನಿಮಾದ ಐಟಂ ಸಾಂಗ್ ಮೌನಿ ಮಸ್ ಮಸ್ ಹೆಜ್ಜೆ ಹಾಕಿದ್ರು. ಆ ಹಾಡು ಕೂಡ ಯೂಟ್ಯೂಬ್​ನಲ್ಲಿ ಬೇಜಾನ್ ಸೌಂಡ್ ಮಾಡಿತ್ತು. ಇದೀಗ ಮತ್ತೊಂದು ಐಟಂ ನಂಬರ್​ಗೆ ಮೌನಿ ಆಯ್ಕೆಯಾಗಿದ್ದಾರೆ. ಇನ್ನೂ, ದಬಾಂಗ್​-3 ಸಿನಿಮಾದಲ್ಲಿ ಸಲ್ಲು ಜೊತೆ ಬಾದ್​ಷಾ ಕಿಚ್ಚ ಸುದೀಪ್ ಕೂಡ ಅಭಿನಯಿಸಿದ್ದಾರೆ. ಅಂದಹಾಗೇ ಚಿತ್ರಕ್ಕೆ ಡ್ಯಾನ್ಸ್ ಕಿಂಗ್ ಹಾಗೂ ನಿರ್ದೇಶಕ ಪ್ರಭುದೇವ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

Sponsored :

Related Articles