ಮತ್ತೆ ಸದ್ದು ಮಾಡ್ತಿದ್ದಾರೆ ಬಾಲಿವುಡ್​ ಬ್ಯೂಟಿಸ್..! ಬಿಟೌನ್ ಬೆಡಗಿಯರ ಕ್ಯಾನ್ಸ್ ವಾಕ್​ ಕಂಡು ಫ್ಯಾನ್ಸ್ ಫುಲ್ ಖುಷ್

3226

ಮೆಟ್​ ಗಾಲಾದಲ್ಲಿ ರಂಗುರಂಗಿನ ಡಿಫರೆಂಟ್​ ವೇಷತೊಟ್ಟು ಅಟ್ರ್ಯಾಕ್​ ಮಾಡಿದ ಬಾಲಿವುಡ್​ ಬ್ಯೂಟೀಸ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಕಾಸ್ ಆಫ್ ಕ್ಯಾನ್ಸ್​​ ಫಿಲ್ಮಂ ಫೆಸ್ಟಿವಲ್​. ಕ್ಯಾನ್ 2019ರ ರೆಡ್​ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಬಿಟೌನ್ ಬೆಡಗಿಯರ ಬೆನ್ನಾಣದ ಒಂದು ಝಲಕ್ ಇಲ್ಲಿದೆ .

ad

ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್​ನ ಸೆಕ್ಸಿ ಅಂಡ್​ ಹಾಟ್ ಡಾಲ್ ಪ್ರಿಯಾಂಕಾ ಚೋಪ್ರಾ ಕಪ್ಪು ಹಾಗೂ ಕೆಂಪು ಮಿಶ್ರಿತಾ ಗೌನ್ ತೊಟ್ಟು ರೆಡ್​ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಇಂಟರ್​ನ್ಯಾಷನಲ್ ಡ್ರೆಸ್​ ಡಿಸೈನರ್​ ರಾಬರ್ಟೋ ಕ್ಯಾವ್ ವಿನ್ಯಾಸಿತ ಗೌನ್ ಹಾಗೂ ಪಿಗ್ಗಿಯ ಸ್ಟೈಲ್​ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪಿಗ್ಗಿ ಹಾಟ್ ಅವತಾರ ನೋಡಿದ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಪತಿ ನಿಕ್​ ಜಾನ್ಸನ್ ಜೊತೆ ಕೈ ಹಿಡಿದು ಪ್ರಿಯಾಂಕಾ ರೆಡ್​ ಕಾರ್ಪೆಟ್​ ತುಳಿದಿರೋದು ಅಭಿಮಾನಿಗಳಿಗೆ ಫುಲ್ ಖುಷಿ ಕೊಟ್ಟಿದೆ.

ಬಾಲಿವುಡ್​ ಬ್ಯೂಟಿ ದೀಪಿಕಾ ಪಡುಕೋಣೆ ಕ್ಯಾನ್ ಫಿಲ್ಮ್​ ಫೆಸ್ಟ್​ನಲ್ಲಿ ಸಖತ್ ಮಿಂಚಿದ್ದಾರೆ. ಡಿಫರೆಂಟ್ ಡಿಫರೆಂಟ್ ಉಡುಗೆ ತೊಟ್ಟು ಅಪ್ಸರೆಯಂತೆ ನೋಡುರನ್ನ ಅಟ್ರ್ಯಾಕ್ಟ್ ಮಾಡಿದ್ದಾರೆ. ಬ್ಲಾಕ್ ಅಂಡ್​ ವೈಟ್ ಹಾಗೂ ಲೈಮ್ ಗ್ರೀನ್ ಗೌನ್ ಹಾಕಿ ರೆಡ್​ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡಿದ ಡಿಪ್ಪಿ ನಸು ನಗುತ್ತಾ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ.

ನ್ಯೂಯಾರ್ಕ್​​​ನಲ್ಲಿ ನಡೆದ ಫ್ಯಾಷನ್ ಇವೆಂಟ್​ ಮೆಟ್​ ಗಾಲಾದಲ್ಲಿ ಬಾಲಿವುಡ್ ಸುಂದರಿಯರು ಚಿತ್ರ ವಿಚಿತ್ರ ಉಡುಗೆ ತೊಟ್ಟು ಬೇಜಾನ್ ಟಾಕ್ ಕ್ರಿಯೇಟ್ ಮಾಡಿದ್ರು. ಇದೀಗ ಮತ್ತೆ ದಕ್ಷಿಣ ಫ್ರಾನ್ಸ್​ನಲ್ಲಿ ನಡೆಯುತ್ತಿರೋ 72ನೇ ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಕಲರ್​ಪುಲ್​ ವೇಷಭೂಷಣ​ ತೊಟ್ಟು ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ ಈ ಸ್ಟಾರ್ ನಟಿಯರು.

ಬಾಲಿವುಡ್​ ತಾರೆಯರ ಈ ಹಾಟ್​ ಅವತಾರಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಡಿಫರೆಂಟ್, ಡಿಫರೆಂಟ್ ಡ್ರೆಸ್​ನಲ್ಲಿ ತಮ್ಮ ನೆಚ್ಚಿನ ನಟಿಯರನ್ನ ನೋಡ್ತಿರೋ ಫ್ಯಾನ್ಸ್ ಖುಷಿಗೆ ಪಾರವೇ ಇಲ್ಲದಂತಾಗಿದೆ.

Sponsored :

Related Articles