ಆಸೆ…..ಹೇಳುವಾಸೆ…..ಕಿಚ್ಚ ಸುದೀಪ್ ಬಳಿ ಮನದಾಸೆ ತೋಡಿಕೊಂಡ ಸಲ್ಮಾನ್ ಖಾನ್​​….! ಇಷ್ಟಕ್ಕೂ ಬ್ಯಾಡ್​​​ಬಾಯ್​ ಆಸೆ ಏನು ಗೊತ್ತಾ?!

1393

ಕಿಚ್ಚನ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಗೂ ಸಖತ್ ಕ್ರೇಜ್ ಹಾಗೂ ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಿದೆ. ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಪೈಲ್ವಾನ್ ರಿಲೀಸ್​ಗೆ ಈಗಾಗಲೇ ಕೌಂಟ್​ಡೌನ್​ ಶುರುವಾಗಿದೆ. 5 ಭಾಷೆಗಳಲ್ಲಿ, ಸುಮಾರು 4ಸಾವಿರ ಥಿಯೇಟರ್ ಗಳಲ್ಲಿ ಲಗ್ಗೆ ಇಡಲು ಸಜ್ಜಾಗಿರುವ ಪೈಲ್ವಾನ್ ಚಿತ್ರವನ್ನು ಸಲ್ಲು ಬಾಯ್ ನೋಡಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ad

ಪೈಲ್ವಾನ್ ಚಿತ್ರವನ್ನು ತೋರಿಸುವಂತೆ ಖುದ್ದು ಸಲ್ಮಾನ್ ಖಾನ್, ಸುದೀಪ್ ಬಳಿ ಕೇಳಿಕೊಂಡಿದ್ದಾರಂತೆ. ಬ್ಯಾಡ್ ಬಾಯ್ ಸಲ್ಲು ಹಾಗೂ ಕಿಚ್ಚನ ನಡುವೆ ಚಿತ್ರರಂಗದಿಂದಾಚೆಗು ಒಂದು ಉತ್ತಮ ಬಾಂಧವ್ಯವಿದೆ. ಇದೀಗ ಸಲ್ಲು ಬಾಯ್ ಆಸೆಗೆ ಅಸ್ತು ಎಂದಿರುವ ನಲ್ಲ ಸಧ್ಯದಲ್ಲೇ ಪೈಲ್ವಾನ್ ಚಿತ್ರವನ್ನು ಸಲ್ಮಾನ್ ಖಾನ್ ಗೆ ತೋರಿಸಲು ನಿರ್ಧರಿಸಿದ್ದು, ಪೈಲ್ವಾನ್ ರಿಲೀಸ್ ಆದ ನಂತರ ಮುಂಬೈನಲ್ಲಿ ವಿಶೇಷ ಶೋ ಏರ್ಪಡಿಸಿ ಸಲ್ಮಾನ್ ಗೆ ಪೈಲ್ವಾನ್ ತೋರಿಸುವ ಪ್ಲಾನ್ ಚಿತ್ರಕ್ಕಿದೆ.

ಇತ್ತೀಚೆಗೆ ಸಲ್ಲು “ಟೈಂ ನಂದೂ ತಾರಿಖು ನಂದು” ಎಂದು ಕನ್ನಡದಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿ ನಾವು ಕನ್ನಡಿಗರು ನಿಮ್ಮನ್ನು ಹೃದಯಪೂರ್ವಕ ಸ್ವಾಗತ ಮಾಡುತ್ತಿದ್ದೇವೆ ಸಲ್ಮಾನ್ ಸರ್. ಇಲ್ಲಿಯ ಜನ ಯಾವಾಗಲು ನಿಮ್ಮನ್ನು ಇಷ್ಟಪಡುತ್ತಾರೆ. ಈಗ ಕನ್ನಡ ಮಾತನಾಡುತ್ತಿರುವುದರಿಂದ ನಿಮ್ಮ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ” ಎಂದು ಹೇಳಿದ್ದರು.
ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷೆಯ ‘ದಬಾಂಗ್-3’ ಚಿತ್ರದಲ್ಲಿ, ಮೊದಲ ಬಾರಿಗೆ ಕಿಚ್ಚ ಸುದೀಪ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಜೊತೆಗೆ ಕನ್ನಡದಲ್ಲೂ ದಬಾಂಗ್-3 ರಿಲೀಸ್ ಆಗುತ್ತಿರುವುದು ಕಿಚ್ಚನ ಅಭಿಮಾನಿಗಳಿಗೆ ಸಂತಸದ ವಿಚಾರ ವಾಗಿದೆ.

 

ಪೈಲ್ವಾನ್ ಸಿನಿಮಾವನ್ನು ನೋಡುವ ಆಸೆಯನ್ನು ಹೊರಹಾಕಿರುವುದು ಚಿತ್ರತಂಡಕ್ಕೆ ಸಂತಸವುಂಟುಮಾಡಿದೆ. ಚಿತ್ರ ನಾಳೆಯೆ ತೆರೆಗೆ ಬರುತ್ತಿದೆ. ಹಾಗಾಗಿ ಸಲ್ಮಾನ್ ಯಾವಾಗ ಪೈಲ್ವಾನ್ ವೀಕ್ಷಿಸುತ್ತಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

Sponsored :

Related Articles