ಬ್ರೇಕಿಂಗ್​​ ನ್ಯೂಸ್​​​ ಕೊಡ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ! ತಿಂಗಳಾಂತ್ಯಕ್ಕೆ ಸ್ವೀಟಿ ಕೊಡೋ ಸ್ವೀಟ್​ ನ್ಯೂಸ್​ ಏನು ಗೊತ್ತಾ?!

18118

ಚಂದನವನದ ಚೆಲುವೆ ರಾಧಿಕಾ ಕುಮಾರಸ್ವಾಮಿ ಹಲವು ವರ್ಷಗಳ ನಂತರ ಮತ್ತೊಮ್ಮೆ ಸ್ಕ್ರೀನ್ ನಲ್ಲಿ ಮಿಂಚಲಿದ್ದಾರೆ. ಹೌದು ನಟಿ ರಾಧಿಕಾ ಕುಮಾರಸ್ವಾಮಿ ತೆರೆ ಮೇಲೆ ದಮಯಂತಿಯಾಗಿ ಮಿಂಚಲು ಸಜ್ಜಾಗಿದ್ದು, ಇದೇ ತಿಂಗಳು ದಮಯಂತಿ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಟೀಸರ್​ ರಿಲೀಸ್​ ಕೂಡ ವಿಶೇಷತೆಯಿಂದ ಕೂಡಿದ್ದು, ಏನದು ಸ್ಪೆಶಲ್ ಸುದ್ದಿ ಇಲ್ಲಿದೆ ಡಿಟೇಲ್ಸ್.

ad

ಹೌದು ಈ ಹಿಂದೆ ಸ್ವೀಟಿ ಚಿತ್ರದಲ್ಲಿ ಬಣ್ಣ ಹಚ್ಚಿದ ರಾಧಿಕಾ ಈಗ ‘ದಮಯಂತಿ’ಯಾಗಿ ಸದ್ದು ಮಾಡುತ್ತಿದ್ದು, ಜುಲೈ ತಿಂಗಳಿನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಇನ್ನೂ ದಮಯಂತಿ ಚಿತ್ರ ಐದು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಗೆ ಆಗುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಚಿತ್ರ ತಂಡ ಮಾಡಿಕೊಳ್ಳುತ್ತಿದೆ.

ಜೊತೆಗೆ ಚಿತ್ರದ ಟೀಸರ್ ನನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಿಂದಿಯಲ್ಲೂ ತೆರೆ ಮೇಲೆ ಅಬ್ಬರಿಸಲು ಬರುತ್ತಿದೆ. ಅಲ್ಲದೆ ಹಿಂದಿ ಮತ್ತು ಮಲಯಾಳಂಗೆ ‘ದಮಯಂತಿ’ ಡಬ್ ಮಾಡಲಾಗುತ್ತಿದ್ದು, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಕನ್ನಡದಂತೆ ನೇರವಾಗಿ ಚಿತ್ರೀಕರಣ ಮಾಡಲಾಗಿದೆ. ಕೇವಲ ಚಿತ್ರದ ಪೋಸ್ಟರ್ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದ ರಾಧಿಕ ಲುಕ್, ಟೀಸರ್ ರಿಲೀಸ್ ಆದ ನಂತರ ಹೇಗೆ ಮೋಡಿ ಮಾಡಲಿದ್ದಾರೆ ನೋಡಬೇಕಿದೆ.

ಅಲ್ಲದೆ ಚಿತ್ರತಂಡ ಚಿತ್ರದ ಟೀಸರ್ ನನ್ನು ಐದು ಭಾಷೆಗಳಲ್ಲಿ ಐದು ಸ್ಟಾರ್ ನಟರ ಕೈನಲ್ಲಿ ಅದ್ಧೂರಿಯಾಗಿ ಚಿತ್ರದ ಟೀಸರ್ ರಿಲೀಸ್ ಮಾಡಿಸುವ ಪ್ಲಾನ್ ನಲ್ಲಿದೆ. ಈ ತಿಂಗಳಿನಲ್ಲಿ ಟೀಸರ್ ರಿಲೀಸ್ ಆಗುತ್ತಿದ್ದು, ಮುಂದಿನ ತಿಂಗಳು ಅಂದರೆ ಆಗಸ್ಟ್ ನಲ್ಲಿ ಚಿತ್ರದ ಹಾಡುಗಳು ತೆರೆಗೆ ಬರುವ ಸಾಧ್ಯತೆ ಇದೆ. ಇನ್ನೂ ಈ ಚಿತ್ರಕ್ಕೆ ನವರಸನ್ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರ ಐದು ಭಾಷೆಗಳಲ್ಲಿಯೂ ಸೆಪ್ಟಂಬರ್ ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

Sponsored :

Related Articles