ನಾಳೆ ಸೀತಾಪುರದಲ್ಲಿ ಗದ್ದೆಗಿಳಿತಾರೆ ಸಿಎಂ- ನಾಡಿನ ದೊರೆ ರೈತನಾಗೋ ಗಳಿಗೆಗೆ ಭರದ ಸಿದ್ಧತೆ ನಡೆಸಿದ ಜಿಲ್ಲಾಢಳಿತ!

557

ಬಂಗಾರದ ಮನುಷ್ಯ ಚಿತ್ರದ ಕೈಲಾಗದು ಎಂದು ಕೈ ಕಟ್ಟಿ ಕೂತರೇ… ಎಂಬ ಹಾಡಿನ ದೃಶ್ಯವನ್ನ ನೀವೆಲ್ಲರೂ ನೋಡಿರ್ತೀರ. ಅಂತಹದ್ದೇ ಒಂದು ಸನ್ನಿವೇಶಕ್ಕೆ ಮಂಡ್ಯದ ಸೀತಾಪುರ ನಾಳೆ ಸಾಕ್ಷಿಯಾಗಲಿದೆ. ಸ್ವತಃ ನಾಡಿನ ದೊರೆಯಾಗಿರುವ ಕುಮಾರಸ್ವಾಮಿ ಅಪ್ಪಟ ರೈತರಂತೆ ಗದ್ದೆಗಿಳಿದು ಭತ್ತದ ನಾಟಿ ಮಾಡಲಿದ್ದಾರೆ. ಹೌದು ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸಿಎಂ ಇಂತಹದೊಂದು ವಿನೂತನ ಪ್ರಯತ್ನಕ್ಕೆ ಮುಂಧಾಗಿದ್ದು, ಸ್ವತಃ ಸಿಎಂ ಎಲ್ಲ ಕೆಲಸ ಬಿಟ್ಟು ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಕ್ಕರೆನಾಡು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಜಮೀನಿನಲ್ಲಿ ಸಿಎಂ ನಾಟಿ ಮಾಡೋ ಕಾರ್ಯಕ್ರಮ ವಿಭಿನ್ನವಾಗಿ ನಡೆಯೋ ಸಾಧ್ಯತೆ ಇದೆ.

ad

ಹರಳಕುಪ್ಪೆ ಗ್ರಾಮದ ಕೆಂಚೇಗೌಡ ಎಂಬುವವರ ಕುಟುಂಬಕ್ಕೆ ಸೇರಿದ 5 ಎಕರೆ ಜಮೀನಿನಲ್ಲಿ ನಾಟಿ ಕಾರ್ಯಕ್ಕೆ ಈಗಾಗಲೇ ಗದ್ದೆಯನ್ನ ಹದಗೊಳಿಸಿರೋ ರೈತರು, ನಾಳೆಯೂ ಅಂತಿಮ ಕಾರ್ಯ ಮಾಡಲಿದ್ದಾರೆ. ನಾಳೆ ನಾಟಿಗಾಗಿ 100 ಹೆಣ್ಣಾಳುಗಳು, 50 ಗಂಡಾಳುಗಳು, 25 ಜೊತೆ ಉಳುಮೆ ಮಾಡೋ ಎತ್ತುಗಳ ಬಳಕೆ ಮಾಡಲಿದ್ದಾರೆ. ಸಿಎಂ ನಾಟಿ ಕಾರ್ಯ ವೀಕ್ಷಿಸಲು ನಾಲೆ ಏರಿ ಮೇಲೆ ಎರಡು ಬೃಹತ್ LED ಪರದೆ ವ್ಯವಸ್ಥೆಗೆ ಜಿಲ್ಲಾಡಳಿತ ಸಿದ್ದತೆ ಮಾಡಿದೆ. ಹದಗೊಳಿಸಿರೋ ಗದ್ದೆ ಮಧ್ಯ ಭಾಗದಲ್ಲೇ 3 ಜನ ನಿಲ್ಲುವಷ್ಟು ಪುಟ್ಟ ವೇದಿಕೆ ನಿರ್ಮಾಣ ಮಾಡಿದ್ದು, ನಾಟಿ ಕಾರ್ಯದ ನಂತರ ಗದ್ದೆ ಮಧ್ಯದ ಪುಟ್ಟ ವೇದಿಕೆಯಲ್ಲೇ ರೈತರನ್ನುದ್ದೇಶಿಸಿ ಸಿಎಂ ಕುಮಾರಸ್ವಾಮಿ ಭಾಷಣ ಮಾಡಲಿದ್ದಾರೆ. ಒಟ್ಟಿನಲ್ಲಿ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಸಿಎಂವೊಬ್ಬರು ನಾಟಿಗೂ ಮುಂಧಾಗಿದ್ದು, ಕುತೂಹಲ ಮೂಡಿಸಿದೆ.

 

Sponsored :

Related Articles