ಕ್ಯಾನ್ಸರ್ ರೋಗಿಗಳಿಗೆ ಸಿಹಿಸುದ್ದಿ! ಔಷಧಿ ದರದಲ್ಲಿ ಭಾರಿ ಇಳಿಕೆ!!

451

ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿಯೊಂದು ಕಾದಿದೆ. ಅತಿಹೆಚ್ಚು ಬೆಲೆ ಪಾವತಿಸಿ ಔಷಧಿ ಖರೀದಿಸುವ ನಿಮ್ಮ ಸಂಕಷ್ಟಕ್ಕೆ ರಾಷ್ಟ್ರೀಯ ಔಷಧಗಳ ಬೆಲೆ ಕ್ಯಾನ್ಸರ್‌ ನಿಯಂತ್ರಣ ಆಯೋಗ ಸ್ಪಂದಿಸಿದ್ದು ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಔಷಧಗಳ ಬೆಲೆಯನ್ನು  ಶೇ.  87%ದಷ್ಟು ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ad

ಹೌದು ಎರ್ಲೊಟಿನಾಬ್‌, ಪೆಮಿಟ್ರೆಕ್ಸಿಡ್‌, ಎಪಿರುಬಿಸಿಯನ್‌, ಲಿಯುಪ್ರೊಲೈಡ್‌, ಎವೆರೊಲಿಮಸ್‌ ಸೇರಿದಂತೆ 9 ನಾನ್‌ ಶೆಡ್ಯೂಲ್ಡ್‌ ಕ್ಯಾನ್ಸರ್‌ ನಿರೋಧಕ ಔಷಧಗಳ ದರವನ್ನು ಶೇ. 30 ರಿಂದ 60 ರಷ್ಟು ಕಡಿತಗೊಳಿಸಲಾಗಿದೆ ಎಂದು ಎನ್‌ಪಿಪಿಎ ಹೇಳಿದೆ. ಪ್ರೊಸ್ಪ್ರೇಟ್‌ ಮತ್ತು ಬ್ರೆಸ್ಟ್‌ ಕ್ಯಾನ್ಸರ್‌ ಚಿಕಿತ್ಸೆಗೆ ಸಂಬಂಧಿಸಿದ ಔಷಧಗಳು ಇವಾಗಿವೆ.  ಒಂಬತ್ತು ಔಷಧಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಕಿಮೊಥೆರಪಿ ಚುಚ್ಚುಮದ್ದುಗಳು ಒಳಗೊಂಡಿದೆ. ಪರಿಷ್ಕೃತ ಆದೇಶದ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಬಳಸಲಾಗುವ ಪೆಮ್ಸೆಸೆಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ 500 ಮಿ.ಗ್ರಾಂ ಇಂಜೆಕ್ಷನ್ ಬೆಲೆ 22,000 ರೂ.ಗಳಿಂದ 2,800 ರೂ.ಗೆ ಇಳಿದಿದೆ.

ಇನ್ನೂ100 ಮಿ.ಗ್ರಾಂ ಡೋಸ್ ಇದೇ ಇಂಜೆಕ್ಷನ್ ಬೆಲೆ 7,700 ರೂ.ಗಳಿಂದ 800 ರೂಪಾಯಿಗೆ ಇಳಿದಿದೆ.ಎಪಿಕ್ಲೋರ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎಪಿರುಬಿಸಿನ್ 10 ಮಿ.ಗ್ರಾಂ ಡೋಸ್ ಇಂಜೆಕ್ಷನ್‍ಗೆ 561 ರೂ.ಗಳಿಂದ 276.8 ರೂಪಾಯಿಗೆ ಇಳಿದಿದೆ. ಅದೇ ಇಂಜೆಕ್ಷನ್‍ನ 50 ಮಿ.ಗ್ರಾಂ ಡೋಸ್ ಬೆಲೆ 2,662 ರೂ.ಗಳಿಂದ 960 ರೂ. ಆಗಿದೆ.ಎರ್ಲೋಟಾಜ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎರ್ಲೋಟಿನಿಬ್ 100 ಮಿ.ಗ್ರಾಂ 10 ಮಾತ್ರೆಗಳುಳ್ಳ ಪ್ಯಾಕ್‍ಗೆ 6,600 ರೂ.ಗಳಿಂದ 1,840 ರೂ.ಗೆ ಬಂದಿದೆ. ಹಾಗೆಯೇ 150 ಮಿ.ಗ್ರಾಂನ 10 ಮಾತ್ರೆಗಳುಳ್ಳ ಒಂದು ಪ್ಯಾಕ್ ಬೆಲೆ 8,800 ರೂ.ಗಳಿಂದ 2,400 ರೂ.ಗೆ ಇಳಿಕೆಯಾಗಿದೆ.ಲಾನೋಲಿಮಸ್ ಹೆಸರಿನಲ್ಲಿ ಮಾರಾಟವಾಗುವ ಎವೆರೋಲಿಮಸ್‍ನ ಬೆಲೆ 0.25 ಮಿ.ಗ್ರಾಂ ಮತ್ತು 0.5 ಮಿ.ಗ್ರಾಂನ ಡೋಸ್‍ಗೆ 1,452 ರೂ., 726 ಹಾಗೂ 739 ರೂ.ಗಳಿಂದ 406 ರೂ.ಗೆ ಇಳಿಕೆಯಾಗಿದೆ.

ಈ ಬಗ್ಗೆ ಆರೋಗ್ಯ ಉದ್ಯಮದ ವಕ್ತಾರರು ಪ್ರತಿಕ್ರಿಯಿಸಿ, ಔಷಧಿಗಳ ಬೆಲೆ ಕಡಿಮೆ ಮಾಡುವ ಹಿನ್ನೆಲೆ ಔಷಧಿಯ ಗುಣಮಟ್ಟ ಹಾಗೂ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಮಾರ್ಚ್ ನಂತರ ಎರಡನೇ ಭಾರಿ ಎನ್‍ಪಿಪಿಎ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿತಗೊಳಿಸಿದೆ.ಭಾರತದಲ್ಲಿ ಪ್ರತಿ ವರ್ಷ 11.50 ಲಕ್ಷ ಮಂದಿ ಹೊಸದಾಗಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಇಂಡಿಯಾ ಅಗೆನೆಸ್ಟ್‌ ಕ್ಯಾನ್ಸರ್‌ ಎಂಬ ಸಂಸ್ಥೆಯ ವರದಿ ತಿಳಿಸಿದೆ.

Sponsored :

Related Articles