ಸೊಸೆ ಮೇಲೆ ಅತ್ಯಾಚಾರ ಎಸಗಿದ ಬಿಜೆಪಿ ನಾಯಕ! ಮಾಜಿ ಶಾಸಕನ ವಿರುದ್ಧ ದಾಖಲಾಯ್ತು ಎಫ್ಐಆರ್!!

1501
9900071610

ಮಾವ ಮತ್ತು ಸೊಸೆಯ ಸಂಬಂಧವನ್ನ ತಂದೆ ಮಗಳ ಸಂಬಂಧಕ್ಕೆ ಸಮ ಎಂದು  ಜನ ಹೇಳುತ್ತಾರೆ. ಅಂಥ ಪವಿತ್ರ ಸಂಬಂಧಕ್ಕೆ ಕಪ್ಪು ಚುಕ್ಕಿ ಇಡುವ ಹೇಯ ಕೃತ್ಯವೊಂದನ್ನು ಮಾವನೊಬ್ಬ ಎಸಗಿದ್ದಾನೆ.ಇಷ್ಟಕ್ಕು ಈ ವ್ಯಕ್ತಿ ಯಾರು ಗೊತ್ತಾ ಕೇಳಿದ್ರೆ ನಿವೇ ಶಾಕ್ ಆಗ್ತೀರಾ.! ಯಾಕಂದ್ರೆ ಸಮಾಜದಲ್ಲಿ ಉತ್ತಮ ಸ್ಥಾನವನ್ನ ಅಲಂಕರಿಸಿ ಸಾಮಾನ್ಯ ಜನರ ನೆರವಿಗೆ ನಿಲ್ಲುವ ವ್ಯಕ್ತಿ ಎನ್ನುವಂತೆ ಬಿಂಬಿತವಾಗಿದ್ದ ವ್ಯಕ್ತಿಯೇ ಮಗಳ ಸ್ವರೂಪದ ಸೊಸೆಯ ಮೇಲೆಯೆ ಅತ್ಯಾಚಾರವನ್ನು ಎಸಗಿದ್ದಾರೆ.

ad

ಇಷ್ಟಕ್ಕೂ ಈ ವ್ಯಕ್ತಿ ಬೇರ್ಯಾರು ಅಲ್ಲ, ಬಿಜೆಪಿಯ ಮಾಜಿ ಶಾಸಕ ಮನೋಜ್ ಶೊಕೀನ್..! ಹೌದು 2018 ಡಿಸೆಂಬರ್ 31 ನೇ ತಾರೀಕು ಮಧ್ಯರಾತ್ರಿ ಸುಮಾರು 1.30 ರ ವೇಳೆ ಮದ್ಯದ ಅಮಲಿನಲ್ಲಿದ್ದ ಈತ ಸೊಸೆ ಮಲಗಿದ್ದ ರೂಂ ಗೆ ಎಂಟ್ರಿ ಕೊಟ್ಟಿದ್ದಾನೆ.
ನಂತರ ಅಲ್ಲಿ ನಡೆದದ್ದೆ ಬೇರೆ ನಿನ್ನ ಬಳಿ ಮಾತನಾಡಬೇಕು ಸ್ವಲ್ಪ ಹೊರಗಡೆ ಬಾರಮ್ಮ ಎಂದ ಕರೆದು ನಂತರ ತನ್ನ ಅಸಲಿ ಆಟ ಶುರು ಮಾಡಿದ್ದಾನೆ. ಮನೋಜ್ ಶೊಕೀನ್ ಸೊಸೆಯ ಜೊತೆ ಅಸಭ್ಯವಾಗಿ ವರ್ತಿಸಿದಾಗ ಅದನ್ನು ವಿರೋಧಿಸಿದ ಆಕೆಗೆ ಗನ್ ತೋರಿಸಿ, ಕಿರುಚಿದರೆ ನಿನ್ನ ಸಹೋದರನನ್ನು ಗುಂಡಿಟ್ಟು ಹತ್ಯೆ ಮಾಡುತ್ತೇನೆ ಎಂದು ಬೆದರಿಸಿ ಅತ್ಯಾಚಾರವನ್ನ ಎಸಗಿದ್ದಾನೆ ಪಾಪಿ ಮಾವ.

ಮನನೊಂದು ಸೊಸೆ 2018 ಡಿಸೆಂಬರ್ 31ರಂದು ರಾತ್ರಿ ನಾನು, ಪತಿ, ಸಹೋದರ ಹಾಗೂ ಸಹೋದರ ಸಂಬಂಧಿ ಎಲ್ಲರೂ ಸೇರಿ ಮೀರ ಬಾಘ್ ಪ್ರದೇಶದಲ್ಲಿರುವ ಪತಿಯ ಮನೆಗೆ ಹೊರಟಿದ್ದೆವು. ಆದರೆ ನೂತನ ವರ್ಷಾಚರಣೆಗೆ ಪತಿ ನನ್ನನ್ನು ಪಾಶ್ಚಿಮ್ ವಿಹಾರ ಪ್ರದೇಶದಲ್ಲಿರುವ ಹೊಟೇಲ್‍ವೊಂದಕ್ಕೆ ಕರೆದೊಯ್ದ್ದರು. ಅಲ್ಲಿಗೆ ನಮ್ಮ ಅನೇಕ ಸಂಬಂಧಿಕರು ಬಂದಿದ್ದರು. ಸುಮಾರು ಮಧ್ಯ ರಾತ್ರಿ 12:30ಕ್ಕೆ ಪಾರ್ಟಿ ಮುಗಿಸಿ ಮನೆಗೆ ಬಂದಿದ್ದೇವು. ನಂತರ ಪತಿ ನನ್ನನ್ನು ಮನೆಯಲ್ಲಿ ಬಿಟ್ಟು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದ ವೇಳೆ ನನ್ನ ಮಾವ ಬಿಜೆಪಿ ಮಾಜಿ ಶಾಸಕ ಮನೋಜ್ ಶೊಕೀನ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ನಂಗ್ಲೋಯಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮನೋಜ್ ಅಸಲಿ ಮುಖ ಇದೀಗಾ ತಡವಾಗಿ ಬೆಳಕಿಗೆ ಬಂದಿದೆ. ಜುಲೈ 7ರಂದು ತನ್ನ ಹೆತ್ತವರಿಗೆ ಕಿರುಕುಳವಾದಾಗ ಸಾಕೇತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಅಲ್ಲಿಯ ಅಧಿಕಾರಿ ತನ್ನ ಕುಟುಂಬಕ್ಕೆ ರಕ್ಷಣೆಯೊದಗಿಸುವುದಾಗಿ ಹೇಳಿದಾಗ ಹಿಂದಿನ ಘಟನೆಯನ್ನು ವಿವರಿಸಿದ್ದಾಗಿ ಸಂತ್ರಸ್ತೆ ಹೇಳಿದ್ದಾರೆ.

ಇನ್ನು ಈ ಸಂಬಂಧ ಆರೋಪಿ ಮನೋಜ್ ಶೊಕೀನ್ ವಿರುದ್ಧ ದಿಲ್ಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 (ಬಲಾತ್ ಸಂಭೋಗಕ್ಕೆ ದಂಡನೆ) ಹಾಗೂ 506 (ಕೊಲೆ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣ ಕುರಿತು ತನಿಖೆ ಆರಂಭಿಸಲಾಗಿದ್ದು, ಆರೋಪಿಯ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಪೊಲೀಸ್ ಆಯುಕ್ತ ಸೆಜು ಪಿ ಕುರುವಿಲ್ಲಾ ಹೇಳಿದ್ದಾರೆ

Sponsored :


9900071610