ಹೈಡ್ರಾಮಾಗಳ ಬಳಿಕ ಮಾಜಿಕೇಂದ್ರ ಸಚಿವ ಪಿ.ಚಿದಂಬರಂ ಸಿಬಿಐ ತೆಕ್ಕೆಗೆ! ಐಎನ್ ಎಕ್ಸ್ ಪ್ರಕರಣದಲ್ಲಿ ಬಲೆಗೆ ಬಿದ್ದ ಕಾಂಗ್ರೆಸ್ ನಾಯಕ!!

340

ಬಹುಕೋಟಿ ಐಎನ್​ಎಕ್ಸ್​ ಮೀಡಿಯಾ ಪ್ರಕರಣ ಸಂಬಂಧ ಇ.ಡಿ.ಯಿಂದ ಲುಕ್ ಔಟ್ ಜಾರಿಯಾದ ಬಳಿಕವೂ ನಾಪತ್ತೆಯಾಗಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಸಿಬಿಐ ಇಂದು ರಾತ್ರಿ ಅವರ ನಿವಾಸದ ಬಳಿ ಬಂಧಿಸಿದೆ.

ad

ನಿನ್ನೆ ದೆಹಲಿ ಹೈಕೋರ್ಟ್​ಗೆ ಚಿದಂಬರಂ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಇ.ಡಿ.ಮತ್ತು ಸಿಬಿಐ ಅಧಿಕಾರಿಗಳು ಚಿದಂಬರಂ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ, ಚಿದಂಬರಂ ಈ ವೇಳೆ ತಲೆಮರೆಸಿಕೊಂಡಿದ್ದರು.
ಸಂಜೆ ವೇಳೆ ದಿಢೀರ್ ಎಐಸಿಸಿ ಕಚೇರಿಯಲ್ಲಿ ಪ್ರತ್ಯಕ್ಷರಾದ ಚಿದಂಬರಂ ಸುದ್ದಿಗೋಷ್ಟಿ ನಡೆಸಿದರು‌. ಈ ವೇಳೆಯೂ ಸಿಬಿಐ ಅಧಿಕಾರಿಗಳು ಚಿದಂಬರಂ‌ ವಶಕ್ಕೆ ಪಡೆಯದೆ ಕಾದಿದ್ದರು‌.


ಸುದ್ದಿಗೋಷ್ಠಿ ಬಳಿಕ ನಿವಾಸಕ್ಕೆ ತೆರಳಿದ ಚಿದಂಬರಂ ಅವರು ಮನೆಯೊಳಕ್ಕೆ ಅಧಿಕಾರಿಗಳನ್ನು ಬಿಡಲಿಲ್ಲ. ಈ ವೇಳೆ ಮನೆಯ ಕಂಪೌಂಡ್ ಜಿಗಿದು ಒಳಕ್ಕೆ ಹೋದ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ವಶಕ್ಕೆ ಪಡೆದರು. ಈ ಪ್ರಕ್ರಿಯೆ ಸರಳವಾಗಿರದೇ ಒಂದು ಗಂಟೆಗಳ ಕಾಲ ದೆಹಲಿಯ ಅವರ ನಿವಾಸ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಯಿತು.

ಬಳಿಕ ಚಿದಂಬರಂ ಅವರನ್ನು ಸಿಬಿಐ ಕಚೇರಿಗೆ ಕರೆದೊಯ್ದ ಅಧಿಕಾರಿಗಳು, ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಾಳೆ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸುವ ಅಧಿಕಾರಿಗಳು ಬಳಿಕ ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

Sponsored :

Related Articles