ಬಹುಕೋಟಿ ವಂಚನೆಯ ಐಎಂಎ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ! ರಾಜ್ಯ ಸರ್ಕಾರದ ಮಹತ್ವದ ಆದೇಶ!!

241

ರಾಜ್ಯರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಯ ಜನರನ್ನು ಕಂಗೆಡಿಸಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ಒಪ್ಪಿಸಿದೆ. ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.


ಮನ್ಸೂರ್ ಖಾನ್​ ಎಂಬಾತನಿಗೆ ಸೇರಿದ ಐಎಂಎ ಕಂಪನಿಯಿಂದ ರಾಜ್ಯದ ಲಕ್ಷಾಂತರ ಗ್ರಾಹಕರು ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದರು. ಲಕ್ಷಾಂತರ ಜನರಿಗೆ ಮೋಸ ಮಾಡಿದ್ದ ಮನ್ಸೂರ್ ಬಳಿಕ ನಾಪತ್ತೆಯಾಗಿದ್ದ. ಈ ಪ್ರಕರಣವನ್ನು ಈ ಹಿಂದಿನ ಸರ್ಕಾರ ಎಸ್​ಐಟಿ ತನಿಖೆಗೆ ಒಪ್ಪಿಸಿತ್ತು. ಬಳಿಕ ಮನ್ಸೂರ್ ಖಾನ್​ ನನ್ನು ಬಂಧಿಸಿದ ತನಿಖಾ ತಂಡ ವಿಚಾರಣೆ ಕೂಡ ನಡೆಸಿತ್ತು.

ad


ಇನ್ನು ಇಂದು ಎ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್​ ಐಎಂಎ ಆಸ್ತಿ-ಪಾಸ್ತಿ ಜಪ್ತಿ ಪ್ರಕ್ರಿಯೆಯನ್ನು ಚುರುಕುಗೊಳಿಸುವುಂತೆ ಸೂಚನೆ ನೀಡಿತ್ತು. ಈ ವೇಳೆ ಸರ್ಕಾರದ ಪರ ವಕೀಲರು ತನಿಖಾ ಪ್ರಗತಿಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.


ಇಷ್ಟೇ ಅಲ್ಲ ಸರ್ಕಾರ ನಿನ್ನೆಯಷ್ಟೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಅರ್ಜಿದಾರರು ಮಾಡಿದ ಮನವಿಗೆ ನ್ಯಾಯಾಲಯ ಸರ್ಕಾರವೇ ಪ್ರಕರಣದ ತನಿಖೆಯನ್ನು ಸಿಬಿಐ ನೀಡಿದೆ ಎಂಬ ವಿಚಾರವನ್ನು ಸ್ಪಷ್ಟ ಪಡಿಸಿದರು.


ಇದಲ್ಲದೇ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವ ತನಕ ಎಸ್​ಐಟಿ ತನಿಖಾ ತಂಡ ತನ್ನ ತನಿಖೆ ಮುಂದುವರೆಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದು, ತನಿಖೆಯ ಪ್ರಗತಿಯನ್ನು ನ್ಯಾಯಾಲಯವೇ ರಿವ್ಯೂ ಮಾಡುವುದಾಗಿ ಆದೇಶಿಸಿದೆ.

Sponsored :

Related Articles