ಕಿಮ್ ಕಾರ್ದಾಶಿಯನ್ ಕೋಟ್ಯಾಂತರ ರೂಪಾಯಿ ಪರಿಹಾರಕ್ಕೆ ಕೋರ್ಟ್ ಮೊರೆ ಹೋಗಿರೋದು ಯಾರ ಮೇಲೆ ಗೊತ್ತಾ? ಆಕೆ ಒಂದು ಪೋಸ್ಟ್ ಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

3579

ಕಿಮ್ ಕಾರ್ದಾಶಿಯನ್ ಈಕೆ ಅಮೇರಿಕದ ಖ್ಯಾತ ಸೆಲೆಬ್ರಿಟಿ, ಉದ್ಯಮಿ ಹಾಗೂ ಮಾಡೆಲ್. ಬಹಳ ಸುಂದರವಾಗಿರುವ ಈ ಚೆಲುವೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಕೋಟ್ಯಾಂತರ ಜನ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಆಕೆ ತೊಡೋ ಬಟ್ಟೆ, ಮೇಕಪ್, ಹೇರ್​​ಸ್ಟೈಲ್​​, ಬಳಸೋ ಪ್ರಾಡಕ್ಟ್ಸ್​​ ಎಲ್ಲವನ್ನೂ ಜನ ಗಮನಿಸುತ್ತಾರೆ. ಆಕೆ ಒಂದು ಪೋಸ್ಟ್ ಮಾಡಿದರೆ ಸಾಕು ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲಿ ಆಕೆಯ ಫೋಟೊಗೆ ಲಕ್ಷಾಂತರ ಮಂದಿಯಿಂದ ಲೈಕ್ ಹಾಗೂ ಕಮೆಂಟ್ ಬಂದಿರುತ್ತದೆ. ಅಲ್ಲದೆ ಆಕೆ ಒಂದು ಬ್ರ್ಯಾಂಡ್​​ ನನ್ನು ಪ್ರಮೋಟ್​ ಮಾಡಿದರೆ ಸಾಕು ಆ ಬ್ರಾಂಡ್ ಕ್ಷಣಾರ್ಧದಲ್ಲಿ ಲಕ್ಷಾಂತರ ಜನರನ್ನು ತಲುಪಿರುತ್ತದೆ. ಅಲ್ಲದೆ ಆ ಪ್ರಾಡಕ್ಟ್​​ ನನ್ನು ಜನರು ಸಹ ಹೆಚ್ಚಾಗಿ ಖರೀದಿಸಲು ಆರಂಭಿಸುತ್ತಾರೆ.

ad

ಹೀಗಾಗಿ ಹಲವು ಕಂಪನಿಗಳು ಕೋಟ್ಯಾಂತರ ರೂಪಾಯಿ ಹಣ ನೀಡಿ ಕಿಮ್ ಕಾರ್ದಾಶಿಯನ್ ತಮ್ಮ ಬ್ರ್ಯಾಂಡ್​ ಪ್ರಮೋಟ್​ ಮಾಡಬೇಕೆಂದು ಮನೆಯ ಮುಂದೆ ಕಾಯುತ್ತಿರುತ್ತಾರೆ. ಹೀಗೆ ಹೆಚ್ಚು ಬೇಡಿಕೆ ಹೊಂದಿರುವ ಈಕೆ ಒಂದು ಬ್ರ್ಯಾಂಡ್​ ಪ್ರಮೋಷನ್​ಗಳಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ. ಎನ್ನುವ ಕೂತುಹಲ ಈಗಾಗಲೇ ಎಲ್ಲರಲ್ಲಿಯೂ ಮೂಡಿರುತ್ತದೆ. ಅಲ್ಲದೆ ಇತ್ತೀಚೆಗೆ ಕಿಮ್ ಕಾರ್ದಾಶಿಯನ್ ಅಮೇರಿಕಾದ ಮಿಸ್​​ಗೈಡೆಡ್​​ ಅನ್ನೋ ಕಂಪನಿ ವಿರುದ್ಧ ಕೋರ್ಟ್​ ಮೇಟ್ಟಿಲೇರಿ ತಮಗೆ ಪರಿಹಾರವನ್ನು ಕೇಳುತ್ತಿದ್ದಾರೆ. ಕಿಮ್ ಕಾರ್ದಾಶಿಯನ್ ಏತಕ್ಕಾಗಿ ಪರಿಹಾರ ಕೇಳುತ್ತಿದ್ದಾರೆ, ಈಕೆ ಕೇಳುತ್ತಿರುವ ಹಣವಾದರೂ ಎಷ್ಟು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕೆಂದರೆ ಈ ಕೆಳಗಿನ ಸ್ಟೋರಿ ಓದಿ..

ಹೌದು ಕಿಮ್ ಕಾರ್ದಾಶಿಯನ್ ಅಮೇರಿಕಾದ ಮಿಸ್​​ಗೈಡೆಡ್​​ ಅನ್ನೋ ಕಂಪನಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ವೇಳೆ ತಾನು ಒಂದು ಬ್ರ್ಯಾಂಡ್ ಪ್ರಮೋಷನ್​ ಗೆ ಎಷ್ಟು ಹಣ ಪಡೆಯುತ್ತಾರೆ ಎನ್ನುವುದನ್ನು ಕುರಿತು ಕೋರ್ಟ್​ಗೆ ತಿಳಿಸುವ ಮೂಲಕ ಬಹಿರಂಗ ಪಡೆಸಿದ್ದಾರೆ.

ಇತ್ತೀಚೆಗೆ ಮಿಸ್​ಗೈಡೆಡ್ ಕಂಪನಿ​ ಕಾರ್ದಾಶಿಯನ್ ತೊಟ್ಟಿದ್ದ ಗೋಲ್ಡನ್ ಕಲರ್​ ಡ್ರೆಸ್​​ವೊಂದರ ರೆಪ್ಲಿಕಾ ತಯಾರಿಸಿ ಸೇಲ್​​ಗೆ ಬಿಟ್ಟಿತ್ತು. ಈ ಉಡುಗೆಯನ್ನ ಮಾಡೆಲ್​​ವೊಬ್ಬರು ತೊಟ್ಟಿರುವ ಫೋಟೋ ಹಾಕಿ ಅದರ ಜೊತೆಗೆ ಕಿಮ್ ಕಾರ್ದಾಶಿಯನ್ ತೊಟ್ಟಿರೋ ಬಟ್ಟೆಯ ಫೋಟೊವನ್ನು ಸಹ ಹಾಕಿದ್ದರು, ಹೀಗಾಗಿ ನನ್ನ ಪರ್ಮಿಷನ್ ಇಲ್ಲದೆಯೇ ನನ್ನ ಹೆಸರು, ಫೋಟೋ ಹಾಗೂ ನನ್ನ ಹೋಲಿಕೆಯನ್ನ ಬಳಸಿಕೊಂಡಿದ್ದಾರೆ ಎಂದು ಕಿಮ್ ಕೋರ್ಟ್​ ಮೆಟ್ಟಿಲೇರಿದ್ದಾರೆ

ಸಾಮಾನ್ಯವಾಗಿ ನಾನು ಇಷ್ಟಪಡುವ ಕಂಪನಿಯೊಂದರ ಬ್ರ್ಯಾಂಡ್​ ಪ್ರಮೋಟ್​ ಮಾಡಲು ಒಂದು ಇನ್​​​ಸ್ಟಾಗ್ರಾಂ ಪೋಸ್ಟ್​​ಗೆ ಸುಮಾರು 3,00,000 ಡಾಲರ್​ನಿಂದ 5,00,000(ಅಂದಾಜು ₹2 ರಿಂದ ₹3.5 ಕೋಟಿ) ಡಾಲರ್​ವೆರೆಗೆ ಹಣ ಪಡೆಯುತ್ತೇನೆ. ದೀರ್ಘಾವಧಿಗೆಂದರೆ ಕೋಟ್ಯಾಂತರ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆ ಎಂದು ಕಿಮ್ ಕೋರ್ಟ್​ಗೆ ಹೇಳಿದ್ದಾರೆ.

ಅಲ್ಲದೆ ಇತ್ತೀಚೆಗೆ ಕಂಪನಿಯೊಂದರ ಜೊತೆ ಕಿಮ್ ಒಪ್ಪಂದ ಮಾಡಿಕೊಂಡಿದ್ದು, ಕೇವಲ ಆಕೆಯ ಹೆಸರು ಹಾಗೂ ಆಕೆಯ ಹೋಲಿಕೆಯನ್ನು ಬಳಸಿಕೊಳ್ಳಲು ವರ್ಷಕ್ಕೆ ಸುಮಾರು 6 ಮಿಲಿಯನ್ ಡಾಲರ್ ಅಂದರೆ ​( ಅಂದಾಜು ₹41 ಕೋಟಿ) ಹಾಗೂ ಕಂಪನಿಯ ಈಕ್ವಿಟಿಯನ್ನ ಕೊಟ್ಟಿದ್ದಾರೆ. ಹೀಗಿರುವಾಗ ಮಿಸ್​​ಗೈಡೆಡ್​​ ಕಂಪನಿಗೆ ಕನಿಷ್ಠ ಅಂದರೂ ಕಿಮ್ 5 ಮಿಲಿಯನ್ ಡಾಲರ್​( ಅಂದಾಜು 34 ಕೋಟಿ)ಗೆ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಎಂದು ಕಿಮ್ ಪರ ವಕೀಲ ವಿಲ್ಸನ್ ವಾದ ಮಂಡಿಸಿದ್ದಾರೆ.

ಆದರೆ ಕಂಪನಿ ಅನುಮತಿ ಇಲ್ಲದೇ ನನ್ನ ಹೆಸರನ್ನ ಬಳಸಿಕೊಂಡಿದ್ದಲ್ಲದೆ. ನನ್ನ ಫೋಟೋ ಕೂಡ ಬಳಸಿಕೊಂಡು ನಾನೇ ಅವರ ಬ್ರ್ಯಾಂಡ್​ ನನ್ನು ಪ್ರಮೋಟ್​​ ಮಾಡುತ್ತಿದ್ದೇನೆ ಎನ್ನುವಂತೆ ತೋರುತ್ತಿದೆ. ಇದರಿಂದ ನನ್ನ ಫ್ಯಾನ್​ ಕನ್​ಫ್ಯೂಸ್​ ಆಗೋದಲ್ಲದೆ, ಬೇರೆ ಕಂಪನಿಗಳು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಹಿಂದೇಟು ಹಾಕಬಹುದು ಎಂದು ಕಿಮ್ ದೂರಿದ್ದಾರೆ. ಸದ್ಯ ಕಿಮ್ ಮಿಸ್​​ಗೈಡೆಡ್​​ ಕಂಪನಿಯಿಂದ 10 ಮಿಲಿಯನ್ ಡಾಲರ್​( ಅಂದಾಜು ₹69 ಕೋಟಿ) ಹಣವನ್ನು ಪರಿಹಾರವಾಗಿ ನೀಡಬೇಕೆಂದು ಕೇಳಿದ್ದಾರೆ.

Sponsored :

Related Articles