7 ದಿನಗಳಲ್ಲಿ ಸರ್ಕಾರಿ ನಿವಾಸ ಖಾಲಿ ಮಾಡಿ! ಇಲ್ಲದಿದ್ದರೇ ಪವರ್,ವಾಟರ್ ಕಟ್​​! ಕೇಂದ್ರದ ಖಡಕ್​ ಆದೇಶ!!

977

ಅಧಿಕಾರದಿಂದ ಇಳಿದರೂ ಸರ್ಕಾರಿ ಬಂಗಲೆಗಳನ್ನು ಬಿಡದೇ ವರ್ಷಗಟ್ಟಲೇ ಅದರಲ್ಲೇ ವಾಸಿಸೋದು ರಾಜಕಾರಣಿಗಳ ಖಯಾಲಿ. ಆದರೇ ಇಂಥಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಲು ಕಠಿಣ ತೀರ್ಮಾನ ಕೈಗೊಂಡಿರುವ  ಕೇಂದ್ರ ಸರ್ಕಾರ, ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿರುವ ಜನಪ್ರತಿನಿಧಿಗಳಿಗೆ ಸಖತ್ ಶಾಕ್​ ನೀಡಿದ್ದು,  ಇನ್ನು 7 ದಿನಗಳಲ್ಲಿ ಬಂಗಲೆಗಳಿಂದ ಹೊರ ನಡೆಯಬೇಕೆಂದು ಸ್ಪಷ್ಟ ಸಂದೇಶ ರವಾನಿಸಿದೆ.

ad

ಮೇ 25ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 16ನೇ ಲೋಕಸಭೆಯನ್ನು ವಿಸರ್ಜನೆ ಮಾಡಿದ್ದರು. ಬಳಿಕ ಎರಡನೇ ಬಾರಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ನಿಯಮದ ಪ್ರಕಾರ, ಲೋಕಸಭೆ ವಿಸರ್ಜನೆಗೊಂಡ 1 ತಿಂಗಳ ಒಳಗೆ ಮಾಜಿ ಸಂಸದರು ಸರ್ಕಾರಿ ನಿವಾಸಗಳನ್ನು ಖಾಲಿ ಮಾಡಬೇಕು.

ಆದರೆ ಅವಧಿ ಮೀರಿ 2 ತಿಂಗಳು ಕಳೆಯುತ್ತಾ ಬಂದಿದ್ದರೂ ಮಾಜಿ ಸಂಸದರು ಮಾತ್ರ ನಿವಾಸ ಖಾಲಿ ಮಾಡಿಲ್ಲ. ಇದರಿಂದ ಹಾಲಿ ಸಂಸದರಿಗೆ, ಕೇಂದ್ರ ಸಚಿವರಿಗೆ ವಾಸ್ತವ್ಯ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರಿ ನಿವಾಸದಲ್ಲೇ ಅಕ್ರಮ ವಾಸ್ತವ್ಯ ಮುಂದುವರಿಸಿರುವ ಮಾಜಿ ಸಂಸದರಿಗೆ ಕೇಂದ್ರ ಸರ್ಕಾರ ಚಾಟಿ ಬೀಸಿದ್ದು, 7 ದಿನಗಳಲ್ಲಿ ಬಂಗಲೆಗಳಿಂದ ಹೊರ ನಡೆಯಲು 200 ಮಾಜಿ ಸಂಸದರಿಗೆ ಗಡುವು ನೀಡಿದೆ.

ಅಲ್ಲದೇ ಮಾಜಿ ಸಂಸದರು ವಾಸಿಸುತ್ತಿರುವ ಸರ್ಕಾರಿ ಬಂಗಲೆಗಳಲ್ಲಿ ಮೂರು ದಿನದೊಳಗೆ ನೀರು ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಸೂಚನೆ ನೀಡಿದೆ ಎಂದು ಲೋಕಸಭೆಯ ಹೌಸಿಂಗ್ ಸಮಿತಿಯ ಅಧ್ಯಕ್ಷ ಸಿಆರ್ ಪಾಟೀಲ್ ತಿಳಿಸಿದ್ದಾರೆ.

Sponsored :

Related Articles