ಹಣ ದ್ವಿಗುಣ ಹೆಸರಿನಲ್ಲಿ ಜಿ.ಪಂ ಅದ್ಯಕ್ಷೆ  ಹಾಗೂ ಆಕೆಯ ಪತಿಒಡೆತನದ ಸೊಸೈಟಿಯಿಂದ ಸಾರ್ವಜಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ!!

196

ಬೆಳಗಾವಿ ಜಿಲ್ಲೆಯ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೋಳೆ ಹಾಗೂ ಆಕೆಯ ಪತಿ ಪ್ರಶಾಂತ್ ರಾವ್ ಐಹೊಳೆ ಹಣ ದ್ವಿಗುಣ ಹೆಸರಿನಲ್ಲಿ ಸಾರ್ವಜನಿಕರಿಗೆ ಕೊಟ್ಯಾಂತರ ರೂಪಾಯಿ ಪಂಗನಾಮ ಹಾಕಿರುವ ಬಗ್ಗೆ ಗಂಬೀರ ಆರೋಪಗಳು ಕೇಳಿಬಂದಿದ್ದು ಸಾರ್ವಜನಿಕ ವಲಯದಲ್ಲಿ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ…

ad

ಹೌದು ಬೆಳಗಾವಿ ಜಿಲ್ಲೆಯ ಜಿಲ್ಲಾ ಪಂಚಾಯತಿ ಅದ್ಯಕ್ಷೆ ಆಶಾ ಐಹೋಳೆ ಮಹಾಲಕ್ಷ್ಮಿ ಮಲ್ಟಿ ಪರ್ಪಜ್ ಹೆಸರಿನಲ್ಲಿ ಸಾವಿರಾರು ಜನರಿಗೆ ಹಣ ದ್ವಿಗುಣಗೊಳಿಸುವ ಮತ್ತು ಕಂತಿನಲ್ಲಿ ಹಣ ತುಂಬಿಸಿಕೊಂಡು ನಿವೇಶನ ನೀಡುವ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದು ಅವಧಿ ಮುಗಿದರೂ ಕೂಡ ಹಣ ಮರಳಿಸದೇ ಇತ್ತ ನಿವೇಶನಗಳನ್ನು ನೀಡದೇ ಸಾರ್ವಜನಿಕರನ್ನು ಮೋಸಮಾಡುತ್ತಿದ್ದಾರೆ ಎಂದು ಸದ್ಯ ಆರೋಪಗಳು ಕೇಳಿ ಬಂದಿವೆ…

ಮೋಸ ಹೋದವರು

ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದರ ಬಗ್ಗೆ ಬೆಳಗಾವಿಯಲ್ಲಿ ನಡೆದ ಅದಿವೇಶನದ ಸಂದರ್ಭದಲ್ಲಿ ನೂರಾರು ಜನ ಮೋಸ ಹೋದ ಸಾರ್ವಜನಿಕರು ಸುವರ್ಣ ಗಾರ್ಡನ್ದಲ್ಲಿ ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಆಕೆಯ ಪತಿ ಪ್ರಶಾಂತರಾವ್ ವಿರುದ್ದ ಪ್ರತಿಭಟನೆ ನಡೆಸಿ ತಮ್ಮ ಹಣ ಮರಳಿ ವಾಪಸ ಕೊಡಿಸುಂವತೆ ಮನವಿಕೂಡ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಷ್ಟೇ ಅಲ್ಲದೆ ಸದ್ಯ ಜಾರಕಿಹೋಳಿ ಅವರ ಒಡನಾಟ ಹೊಂದಿರುವ ಹಾಗೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆಶಾ ಐಹೋಳೆ ತಮ್ಮ ಅಧಿಕಾರ ಚಲಾಯಿಸಿ ತಮ್ಮ ವಿರುದ್ದ ದೂರು ದಾಖಲಿಸದಂತೆ ಪೋಲಿಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೋಸ ಹೋದ ಜನರು ಆರೋಪಿಸುತ್ತಿದ್ದಾರೆ…

ಇನ್ನೂ ಈ ಬಗ್ಗೆ ಪ್ರಶ್ನೆ ಮಾಡಿದರೆ ತಮ್ಮ ಪತಿ ಪ್ರಶಾಂತ್ ರಾವ್ ವಂಚನೆ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೋಳೆ ತಮಗೂ ಈ ಪ್ರಕರಣಕ್ಕೂ ಸಂಭಂದವಿಲ್ಲ ಎಲ್ಲೂ ತಮ್ಮ ಮೇಲೆ ದೂರು ದಾಖಲಿಸುವ ಪ್ರಶ್ನೆಯೇ ಬರುವುದಿಲ್ಲ.. ನನ್ನ ರಾಜಕೀಯ ಬೆಳವಣಿಗೆ ಸಹಿಸದೆ ಇಂತಹ ಆರೋಪಗಳನ್ನು ಮಾಡುತ್ತಿದ್ದು ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವದಿಲ್ಲ ಎನ್ನುವ ಮೂಲಕ ಜನರ ಆರೋಪಗಳನ್ನು ತಳ್ಳಿಹಾಕುತಿದ್ದಾರೆ.

ಒಟ್ಟಾರೆ ಆಗಿ ಹಣ ದ್ವಿಗುಣದ ಆಸೆಗೆ ಒಳಗಾಗಿ ಹಣ ಕಳೆದುಕೊಂಡ ಸಾರ್ವಜನಿಕರು ಸದ್ಯ ಕಂಗಾಲಾಗಿದ್ದು ಕೊಟ್ಟವ ಕೋಡಂಗಿ ಇಸಿದುಕೊಂಡವ ಈರಭದ್ರ ಎನ್ನುವಂತಾಗಿದ್ದು ಮುಂದೇನಾಗಲಿದೆ ಎಂದು ಕಾಯ್ದು ನೋಡಬೇಕಾಗಿದೆ…

 

Sponsored :

Related Articles