ಸಾಲ ಮಾಡಿದ ತಪ್ಪಿಗೆ ಕೋಲ್ಕತ್ತಾ ನ್ಯಾಯಾಲಯಕ್ಕೆ ಅಲೆಯಬೇಕು ಚಿಕ್ಕೋಡಿ ರೈತರು- ಇದು ಖಾಸಗಿ ಬ್ಯಾಂಕ್​ ಎಡವಟ್ಟು- ಸಹಾಯಕ್ಕೆ ಕುಮಾರಣ್ಣನ ಮೊರೆ ಹೋದ ರೈತರು

697

ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ 49 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ ಎಂದು ಹೇಳುತ್ತಿದ್ದರೂ ಇಲ್ಲಿನ ರೈತರಿಗೆ ಮಾತ್ರ ಬ್ಯಾಂಕ್​ ಅಧಿಕಾರಿಗಳ ಕಾಟ ತಪ್ಪಿಲ್ಲ. ಹೌದು ಚಿಕ್ಕೋಡಿಯಲ್ಲಿ ಖಾಸಗಿ ಬ್ಯಾಂಕಿನ ಎಡವಟ್ಟಿನಿಂದ ಸಾಲ ಮಾಡಿದ ರೈತರು ಪಡಬಾರದ ಕಷ್ಟ ಪಡುವಂತಾಗಿದ್ದು, ಪ್ರತಿ ಭಾರಿ ಸಾಲ ಪ್ರಕರಣದ ವಿಚಾರಣೆಗೆ ದೂರದ ಕೋಲ್ಕತ್ತಾಗೆ ಎಡತಾಕುವಂತ ಸ್ಥಿತಿ ಎದುರಾಗಿದೆ.

ad

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ 12 ಜನ ರೈತರು 2008 ರಲ್ಲಿ ಸಾಮೂಹಿಕವಾಗಿ ತಮ್ಮ ಜಮೀನುಗಳಿಗೆ ನೀರಿನ ಪೈಪ್ ಲೈನ್ ಮಾಡಿಕೊಳ್ಳಲು ಎಕ್ಸಿಸ್ ಬ್ಯಾಂಕಿನಿಂದ 86 ಜನ ಪ್ರತಿ ಎಕರೆಗೆ 3 ಲಕ್ಷ ಸಾಲ ಪಡೆದುಕೊಂಡಿದ್ದರು. ಅದ್ರಲ್ಲಿ 63 ಜನ ಸಾಲ ಮರು ಪಾವತಿ ಮಾಡಿದ್ದಾರೆ.
ಆದ್ರೆ 12 ಜನ ರೈತರು ಆರ್ಥಿಕ ಸಂಕಷ್ಟದಿಂದ 2014 ರ ವರೆಗೆ ಬ್ಯಾಂಕಿನ ಕಂತು ಹಣವನ್ನ ಕಟ್ಟಿ ಬಿಟ್ಟು ಬಿಟ್ಟಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಡ್ಡಿಗೆ ಹೆದರಿ ರೈತರು ಸಾಲವನ್ನ ತುಂಬಿಲ್ಲ ಆದ್ರೆ ಈಗ ಎಕ್ಸಿಸ್ ಬ್ಯಾಂಕ ಈ ರೈತರ ವಿರುದ್ಧ ಕೋಲ್ಕತ್ತಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟೀಸ್ ಕಳಿಸಿದೆ.

ಇದರಿಂದ ಕಂಗೆಟ್ಟಿರುವ 12 ಜನ ರೈತರು ನಮಗೆ ಸರಿಯಾಗಿ ಬೆಳಗಾವಿ ನಗರದ ಬಗ್ಗೆನೇ ಗೊತ್ತಿಲ್ಲ ಇನ್ನೂ ಕೋಲ್ಕತ್ತಾ ಮಹಾ ನಗರಕ್ಕೆ ಹೇಗೆ ಹೋಗುವದು? ಅಲ್ಲಿ ಹೇಗೆ ನಮ್ಮ ವಕೀಲರನ್ನ ನೇಮಿಸುವದು ಎಂದು ಕಂಗಾಲಾಗಿದ್ದಾರೆ. ಮೊದಲೇ ನಮ್ಮ ಬಳಿ ಹಣ ಇಲ್ಲಾ ಸಂಪೂರ್ಣ ಸಾಲ ಮನ್ನಾ ಆಗುತ್ತೆ ಎಂದುಕೊಂಡಿದ್ದೇವೆ ಆದ್ರೆ ಈಗ ನಮ್ಮ ಪರಿಸ್ಥಿತಿ ದುಸ್ತರವಾಗಿದೆ. ಸಾಲದ ನೋಟೀಸ್ ನೀಡಬೇಡಿ ಎಂದ್ರೂ ಖಾಸಗಿ ಬ್ಯಾಂಕಿನವರು ನೋಟೀಸ್ ನೀಡುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ನಮಗೆ ರಕ್ಷಣೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Sponsored :

Related Articles