ಬ್ಲಡೀ ಮಂಜ!! ಪರೀಕ್ಷೆಯನ್ನೇ ಮಾಡದೆ ರಕ್ತ ಮಾದರಿ ಹೇಳುವ ಭೂಪ !!

1020
Chitradurga : Fake Blood Test running in open area near RTO Office
Chitradurga : Fake Blood Test running in open area near RTO Office

ಖಾಸಗಿ ವೈದ್ಯ ವೃತ್ತಿ ಹಾಗೂ ಅದಕ್ಕೆ ಅವಲಂಬಿಸಿರುವ ಪ್ರಯೋಗಾಲಯಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ ಕೆಲವರು ಈ ಕೆಲಸವನ್ನು ಅಕ್ಷರಶಃ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ.

ad

ಎಲ್ಲೆಲ್ಲೂ ನಕಲಿಗಳ ಹಾವಳಿ ಒಂದೆಡೆಯಾದರೆ ಎಲ್ಲ ಸರಿಯಿದ್ದರೂ ಹಾದಿ ಬೀದಿಯಲ್ಲಿ ಕೆಲವು ಜನರು ಹಣದಾಸೆಗೆ ಮಾಡಬಾರದ್ದನ್ನ ಮಾಡುತ್ತಿರುತ್ತಾರೆ. ಎಲ್ಲದಕ್ಕೂ
ರಕ್ತದ ಮಾದರಿ ಕೇಳುವ ಚಿತ್ರದುರ್ಗ ಆರ್.ಟಿ.ಓ ಕಚೇರಿ ಬಳಿ ನಡೆಯುವ ಈ ರಕ್ತ ಪರೀಕ್ಷೆ ನೋಡಿದರೆ ಒಮ್ಮೆ ಗಾಬರಿಯಾಗುತ್ತದೆ.ಆರ್ ಟಿ ಒ ಕಚೇರಿಗೆ ಬಂದವರ ರಕ್ತ ಹೀರಿ ಕ್ಷಣಮಾತ್ರದಲ್ಲಿ ಅವರ ರಕ್ತ ಯಾವ ಗುಂಪಿಗೆ ಸೇರಿದ್ದು ಎಂದು ಹೇಳುತ್ತಾನೆ.

ಈ ಮಂಜ ತನ್ನ ಬಳಿ ಎಲ್ಲಾ ಸರ್ಟಿಫಿಕೇಟ್ ಇದೆ ಸಾರ್ ಎನ್ನುತ್ತಲೇ 50 ರೂ ಪಡೆದು ಮೂರು ಹನಿ ರಕ್ತ ತೆಗೆದು ಅಲ್ಲಿಯೇ ನಿಮ್ಮದು ಆ. ಪಾಸಿಟಿವ್ ಈ ನಿಗಟೀವ್ ಎಂದು ಹೇಳಿಬಿಡುತ್ತಾನೆ.

 

 

ಅದು ಸರಿ ಯಾಕೆ ಹೀಗೆ ರಸ್ತೆಯಲ್ಲಿ ನಿಂತು ಈ ಕೆಲಸ ಮಾಡುತ್ತಿದ್ದೀರಿ ಎಂದರೆ ಏನ್ ಮಾಡೋದು ಸರ್ ನಮಗೆ ನೆಲೆ ಇಲ್ಲ. ಈ ಆರ್.ಟಿ.ಓ ಕಚೇರಿಗೆ ಬರೋರಿಗೆ ಅರ್ಜೆಂಟ್ ಬ್ಲಡ್ ಗ್ರೂಪ್ ಬೇಕು. ಅದಕ್ಕೆ ಇವೆಲ್ಲಾ ಎನ್ನುತ್ತಾನೆ.

ಇನ್ನು ಸಾರಿಗೆ ಇಲಾಖೆ ಡಿ.ಎಲ್, ಬ್ಯಾಡ್ಜು, ಟ್ರಾನ್ಸ್ ಫರ್ ಗಳಿಗೆಲ್ಲಾ ರಕ್ತದ ಮಾದರಿ ಖಡ್ಡಾಯವಾಗಿ ಬೇಕು ಎನ್ನುತ್ತಾರೆ. ಇದರಿಂದಾಗಿ ಈ ಓಪನ್ ದಂಧೆ ತಲೆ ಎತ್ತಿದೆ.

ಏರ್ ಕಂಡೀಷನ್ ಕೊಠಡಿಯಲ್ಲಿ ತಂತ್ರಜ್ಞಾನ ಬಳಸಿ ನಡೆಸಬೇಕಾದ ಈ ರಕ್ತದ ಪ್ರಯೋಗ ನಡುರಸ್ತೆಯಲ್ಲೇ ಆಗುತ್ತಿದ್ದರೂ ಕೇಳುವವರೇ ಇಲ್ಲ ಎಂಬಂತಾಗಿದೆ.

Sponsored :

Related Articles