ಸಿನಿಮಾ ನಟರು ಜನರ ಸಮಸ್ಯೆ ಕೇಳ್ತಾರಾ?! ಜೋಡೆತ್ತುಗಳ ವಿರುದ್ಧ ಎಮ್​ಎಲ್​ಎ ನಾರಾಯಣ ಗೌಡ ಟೀಕೆ!!

185

ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವ ಹಾಗೆ ಮಂಡ್ಯ ಲೋಕಸಭಾ ಚುನಾವಣೆ ಮುಗಿದಿದ್ದರೂ ಇನ್ನೂ ಟೀಕೆ-ಆರೋಪ-ಪ್ರತ್ಯಾರೋಪಗಳು ಮಾತ್ರ ನಿಂತಿಲ್ಲ. ಹೌದು ಮಂಡ್ಯದ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ನಿಂತಿದ್ದ ಜೋಡೆತ್ತುಗಳ​ ಮೇಲೆ ಜೆಡಿಎಸ್​ ಶಾಸಕ ನಾರಾಯಣ ಗೌಡ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.


ನಟ ಯಶ್ ಮತ್ತು ದರ್ಶನ್ ಹೆಸರು ಉಲ್ಲೇಖಿಸದೇ ಕುಟುಕಿದ ಶಾಸಕ ನಾರಾಯಣಗೌಡರು, ಜೋಡೆತ್ತುಗಳು ಎಲೆಕ್ಷನ್ ಮುಗಿಸಿ ಹೋದವರು ಮತ್ತೆ ಮಂಡ್ಯಕ್ಕೆ ಬರಲಿಲ್ಲ ಯಾಕೆ? ಜನರು ತಮ್ಮ ಸಮಸ್ಯೆ ಹೊತ್ತು ಅವರ ಮನೆಗೆ ಹೋಗೋಕೆ ಸಾಧ್ಯವೇ? ಅವರ ಮನೆಯ ಸೆಕ್ಯೂರಿಟಿಗಳು ಯಾರನ್ನು ಒಳಗೆ ಬಿಡೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ad

ಸಿನಿಮಾ ನಟರು ಬಂದು ಹೋಗಬಹುದು. ಆದರೆ ಕ್ಷೇತ್ರದಲ್ಲಿ ಕುಡಿಯುವ ನೀರು ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ನಾವೇ ಜನಪ್ರತಿನಿಧಿಗಳೇ ಬಗೆಹರಿಸಬೇಕು. ನಮ್ಮ ಮನೆಗೆ, ಕುಮಾರಸ್ವಾಮಿ, ದೇವೆಗೌಡರ ಮನೆಗೆ ಯಾರು ಬೇಕಾದರೂ ಬರಬಹುದು ಆದರೆ ಸಿನಿಮಾ ನಟರ ಮನೆಗೆ ಜನರು ಸಮಸ್ಯೆ ಹೇಳಿಕೊಂಡು ಹೋಗೋದಿಕ್ಕೆ ಆಗುತ್ತಾ ಅಂತ ನಾರಾಯಣ ಗೌಡರು ಪ್ರಶ್ನಿಸಿದ್ದಾರೆ.
ಇದಲ್ಲದೇ ಮೈತ್ರಿ ಸರ್ಕಾರದ ಬಗ್ಗೆಯೂ ಮಾತನಾಡಿದ ಶಾಸಕರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಂದ ನಮಗೆ ಅನುಕೂಲವಾಗಿಲ್ಲ.ಕೆ.ಆರ್. ಪೇಟೆ ತಾಲೂಕಿನಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂದಿದ್ದಾರೆ.

Sponsored :

Related Articles