ಮಹಿಳಾಸಂಘಕ್ಕೆ ರಾಜ್ಯಾಧ್ಯಕ್ಷೆ ಮಾಡುವುದಾಗಿ ಸಿನಿಮಾ ನಟಿಗೆ ವಂಚನೆ- ಮೋಸಹೋದ ನಟಿ ಯಾರು ಗೊತ್ತಾ?!

2101
9900071610

 

ad

ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆಯಾಗಿ ಮಾಡುವುದಾಗಿ ನಟಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ‌ ನಡೆದಿದೆ. ಕಿರುತೆರೆ ನಟಿ ಹಾಗೂ ಡಬ್ ಸ್ಮಾಶ್ ತಾರೆ ಸುಶ್ಮಿತಾ ವಂಚನೆಗೊಳಗಾದ ನಟಿ. ಕೆಲ ತಿಂಗಳುಗಳ ಹಿಂದೆ ಸುಶ್ಮಿತಾ ಸ್ನೇಹಿತೆ ಸರೋಜ ಎಂಬುವರಿಗೆ ರಘು ಚಂದ್ರಪ್ಪ ಹಾಗೂ ಸಂಗೀತಾ ಎಂಬುವರು ಪರಿಚಯವಾಗಿದ್ದರು. ಇವ್ರಿಬ್ಬರು ಸರೋಜ ರವರ ಮೂಲಕ ನಟಿ ಸುಶ್ಮಿತಾಗೂ ಪರಿಚಯವಾಗಿದ್ರು. ಹೀಗೆ ಪರಿಚಯವಾಗಿದ್ದ ರಘು ಚಂದ್ರಪ್ಪ ಹಾಗೂ ಸಂಗೀತಾ ನಟಿ ಸುಶ್ಮೀತಾಗೆ ಆದಿ ಶಕ್ತಿ ಮಹಿಳಾ ಸಂಘಟನೆ ಮಾಡಿ ಅದಕ್ಕೆ ನಿಮ್ಮನ್ನು ರಾಜ್ಯಾಧ್ಯಕ್ಷೆಯಾಗಿ ಮಾಡುತ್ತೆನೆ ಎಂದು ಹೇಳಿದ್ದರು. ಅಲ್ಲದೆ ಹೀಗೆ ಅಧ್ಯಕ್ಷೆಯಾಗ ಬೇಕಾದ್ರೆ ಹಣ ಖರ್ಚಾಗುತ್ತೆ ಎಂದು ನಟಿಯಿಂದ ಸುಮಾರು ನಾಲ್ಕು ಲಕ್ಷ ಪೀಕಿದ್ದರು..

ಹಣ ಕೇಳಿದ್ದಕ್ಕೆ ಜೀವ ಬೆದರಿಕೆ
ಆದ್ರೆ ಹೀಗೆ ಹಣ ಪಡೆದುಕೊಂಡ ರಘು ಚಂದ್ರಪ್ಪ ಹಾಗೂ ಸಂಗೀತಾ ಯಾವುದೇ ಸಂಘಟನೆಯನ್ನು ಮಾಡುವುದಿಲ್ಲ ನಟಿ ಸುಶ್ಮೀತಾ ರನ್ನು ರಾಜ್ಯಾಧ್ಯಕ್ಷೆಯಾಗಿ‌ ಸಹ ಮಾಡುವುದಿಲ್ಲ. ಇದ್ರಿಂದಾಗಿ ಅನುಮಾನಗೊಂಡು ಸರೋಜ ಹಾಗೂ ಸುಶ್ಮೀತಾ ಹಣ ವಾಪಸ್ಸು ಕೇಳಿದ್ದಾರೆ. ಆದರೆ ಹಣ ವಾಪಸ್ಸು ಕೊಡದ ರಘು ಚಂದ್ರಪ್ಪ ಇಬ್ಬರಿಗೂ ಹಣ ಕೊಡುವುದಿಲ್ಲ ಏನು ಬೇಕಾದ್ರು ಮಾಡಿಕೊಳ್ಳಿ ಅಲ್ಲದೆ ಇದು ಬೇರೆಯವರಿಗೆ ಗೋತ್ತಾದರೆ ನಿಮ್ಮನ್ನ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ನಟಿ ಹಾಗೂ ಸರೋಜ ಇಬ್ಬರು ಅನ್ನಪೂರ್ಣೇಶ್ವರಿ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಸೆಕ್ಷನ್ ೪೨೦,೪೧೮ ಹಾಗೂ ೫೦೬ ಆಡಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮಾಡ್ತಾ ಇದ್ದಾರೆ

Sponsored :


9900071610