ಸಚಿವರ ಖಾತೆಗಳಿಗೆ ಅನರ್ಹ ಶಾಸಕರ ಕೊಕ್ಕೆ ? ಬಿಜೆಪಿಯ ಅತೃಪ್ತ ಶಾಸಕರಿಗೆ ಈಗ ಕುಮಾರಸ್ವಾಮಿಯೇ ಬ್ರದರ್ !!

1231

ಕಳೆದ ಮೂರು ವಾರಗಳಿಂದ ಕಗ್ಗಂಟಾಗಿ ಉಳಿದಿದ್ದ ರಾಜ್ಯ ಸಚಿವ ಸಂಪುಟ ರಚನೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪ ಸಂಪುಟಕ್ಕೆ 17 ಶಾಸಕರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಷ್ಟಾದ್ರೂ ಸಿಎಂ ಯಡಿಯೂಪ್ಪಗೆ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗಿದೆ. ಸಚಿವ ಸಂಪುಟ ಸೇರಿರೋ 17 ಶಾಸಕರು ಇಲಾಖೆಗಳ ಜವಾಬ್ದಾರಿ ವಹಿಸಿಕೊಳ್ಳಬೇಕಾದ್ರೆ ಕಾಯ್ಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಸದ್ಯ ದೋಸ್ತಿ ಸರ್ಕಾರದಿಂದ ಅನರ್ಹಗೊಂಡಿರೋ ಶಾಸಕರ ಕಂಡೀಷನ್​ನಿಂದ ಸಚಿವರ ಖಾತೆಗಳಿಗೆ ಕೊಕ್ಕೆ ಬಿದ್ದಿದೆ. ನಮಗೆ ನೀಡಬೇಕಾದ ಖಾತೆಗಳನ್ನ ಪೆಂಡಿಂಗ್ ಇಟ್ಟುಕೊಂಡು ಉಳಿದವನ್ನ ಹಂಚಿ ಎಂದು ಅನರ್ಹ ಶಾಸಕರು ತಾಕೀತು ಮಾಡಿದ್ದಾರೆ. ಹೀಗಾಗಿ ಖಾತೆ ಹಂಚಬಾರದು ಅಂತಾ ಪಟ್ಟ ಹಿಡಿದಿರೋ ಅನರ್ಹ ಶಾಸಕರನ್ನ ಮುಖ್ಯಮಂತ್ರಿ ಬಿಎಸ್​ವೈ ಹಾಗೂ ಸಚಿವ ಆರ್​.ಅಶೋಕ್ ಮನವೊಲಿಸಿದ್ದಾರೆ. ನಿನ್ನೆ ರಾತ್ರಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಅನರ್ಹ ಶಾಸಕರು ಭೇಟಿ ನೀಡಿದ್ರು. ಈ ವೇಳೆ ಅನರ್ಹ ಶಾಸಕರನ್ನ ಬಿಎಸ್​ವೈ ಹಾಗೂ ಆರ್ ಅಶೋಕ್ ಖಾತೆ ಹಂಚಿಕೆ ಸಂಬಂಧ ಮನವೊಲಿಸಿದ್ದಾರೆ.

ad

ಇದರ ನಡುವೆ ಮುಖ್ಯಮಂತ್ರಿ ಬಿಎಸ್​ವೈಗೆ ಮತ್ತೊಂದು ತಲೆ ನೋವು ಶುರುವಾಗಿದೆ. 10ಕ್ಕೂ ಹೆಚ್ಚು ಮಂದಿ ಅತೃಪ್ತ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿಗೆ ಫೋನ್ ಕಾಲ್ ಮಾಡಿದ್ದಾರೆ. ಕುಮಾರಸ್ವಾಮಿಯವರನ್ನ ಸಂಪರ್ಕಿಸಿರೋ ಅತೃಪ್ತರು, ಅಣ್ಣಾ ನಾವು ನಿಮ್ಮ ಮಾತು ಕೇಳದೇ ತಪ್ಪು ಮಾಡಿದೆವೆ ಅಂತಾ ಗೋಗರೆಯುತ್ತಿದ್ದಾರೆ. ಒಂದೆಡೆ ಅನರ್ಹ ಶಾಸಕರು, ಮತ್ತೊಂದೆಡೆ ಅತೃಪ್ತ ಶಾಸಕರಿಂದ ಬಿಎಸ್​ವೈಗೆ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗಿದೆ.

Sponsored :

Related Articles