ಮಾಜಿ ಪ್ರಧಾನಿಗಳ ಜೊತೆ ರೆಸಾರ್ಟ್​ನತ್ತ ಮುಖಮಾಡಿದ ಸಿಎಂ! ಪಂಚಕರ್ಮ ಚಿಕಿತ್ಸೆ ಜೊತೆ ವಿಶ್ರಾಂತಿ ಪಡೆಯಲಿರುವ ಕುಮಾರಸ್ವಾಮಿ!!

358

ಹಿಂದೆಂದಿಗಿಂತ ಹೆಚ್ಚಿನ ಟೆನ್ಸನ್​​ನಲ್ಲಿ ಸಿಎಂ ಕುಮಾರಸ್ವಾಮಿ ಈ ಬಾರಿ ಲೋಕಸಭಾ ಚುನಾವಣೆ ಎದುರಿಸಿದ್ರು. ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ಒಂದೂವರೆ ತಿಂಗಳುಗಳ ಕಾಲ ಹಗಲು ರಾತ್ರಿ ರಣತಂತ್ರ ರೂಪಿಸಿದ ಸಿಎಂ ಈಗ ರಿಲ್ಯಾಕ್ಸ್ ಗಾಗಿ ರೆಸಾರ್ಟ್​​ನತ್ತ ಮುಖಮಾಡಿದ್ದಾರೆ.

ad

ಉಡುಪಿಯ ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧಾ ರೆಸಾರ್ಟ್​ ತೆರಳಿರುವ ಸಿಎಂ ಒಂದು ವಾರಗಳ ಕಾಲ ಅಲ್ಲಿ ವಿಶ್ರಾಂತಿ ಪಡೆಯಲಿದ್ದು, ಪಂಚಕರ್ಮ ಚಿಕಿತ್ಸೆ ಕೂಡ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಬಾರಿ ಸಿಎಂ ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೆಗೌಡರನ್ನು ಕರೆದುಕೊಂಡು ಹೋಗಿದ್ದು, ದೇವೆಗೌಡರು ಕೂಡ ಪ್ರಕೃತಿ ಚಿಕಿತ್ಸೆ ಪಡೆದು ರೆಸ್ಟ್​ ಮಾಡಲಿದ್ದಾರೆ.

ಕಳೆದವಾರ ಎರಡನೇ ಹಂತದ ಮತದಾನದ ವೇಳೆಯೇ ಸಿಎಂ ಕುಮಾರಸ್ವಾಮಿ ರೆಸಾರ್ಟ್​ ಗೆ ತೆರಳಿದ್ದರು. ಆದರೆ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್​ಬ್ಲ್ಯಾಸ್ಟ್​​​ನಲ್ಲಿ ಜೆಡಿಎಸ್​ನ ಮುಖಂಡರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಮ್ಮ ವಿಶ್ರಾಂತಿ ಮೊಟಕುಗೊಳಿಸಿ ನಗರಕ್ಕೆ ವಾಪಸ್ಸಾಗಿದ್ದರು. ಇದೀಗ ಮತ್ತೆ ವಿಶ್ರಾಂತಿಗಾಗಿ ತೆರಳಿದ್ದಾರೆ.

ಇನ್ನು ಈ ತಮ್ಮ ಚಿಕಿತ್ಸೆ ಹಾಗೂ ರಿಲ್ಯಾಕ್ಸ್​​ ಮೂಡನ್ನು ಸಂಪೂರ್ಣವಾಗಿ ಖಾಸಗಿಯಾಗಿ ಕಳೆಯಲು ಇಚ್ಛಿಸಿರುವ ಸಿಎಂ ಮಾಧ್ಯಮಗಳನ್ನು ರೆಸಾರ್ಟ್​ನಿಂದ ದೂರವಿಟ್ಟಿದ್ದಾರೆ. ಹೀಗಾಗಿ ಸಿಎಂ ರೆಸಾರ್ಟ್​ ಭೇಟಿಯ ವೇಳೆ ವರದಿಗೆ ತೆರಳಿದ್ದ ಮಾಧ್ಯಮದವರು ಮತ್ತು ಪೊಲೀಸರನವರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಯಾರಿಗೂ ಪ್ರವೇಶವಿಲ್ಲ ಎಂದಿರುವ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದಾರೆ.

Sponsored :

Related Articles