ರಾಜ್ಯದ ಖಾಕಿ ಪಡೆಗೆ 600 ಕೋಟಿ ಗಿಫ್ಟ್​​ ಕೊಟ್ಟ ಸಿಎಂ ಎಚ್​​ಡಿಕೆ! 10 ದಿನಗಳಲ್ಲಿ ಪೊಲೀಸರಿಗೆ ಕಾದಿದೆ ಸಿಹಿಸುದ್ದಿಯ ಅಧಿಕೃತ ಆದೇಶ!!

9105

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲು ಇರುಳು ಶ್ರಮಿಸುವ ಪೊಲೀಸ್ ಇಲಾಖೆಗೆ ಸಿಎಂ ಕುಮಾರಸ್ವಾಮಿ 600 ಕೋಟಿ ರೂಪಾಯಿಗಳ ಭರ್ಜರಿ ಗಿಫ್ಟ್​ ನೀಡಿದ್ದಾರೆ. ಔರಾದ್ಕರ್ ವರದಿ ಕುರಿತು ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಖಾಕಿಪಡೆಗೆ ಸಿಹಿಸುದ್ದಿ ನೀಡಿದ್ದಾರೆ.

ad

ವಿಧಾನಸೌಧದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಎಂ ಬಿ ಪಾಟೀಲ್​ ಸಿಎಂ ಕುಮಾರಸ್ವಾಮಿ ಔರಾದ್ಕರ್​ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಔರಾದ್ಕರ್​ ವರದಿ ಜಾರಿಯಿಂದ ರಾಜ್ಯ ಸರ್ಕಾರಕ್ಕೆ 600 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. ಹೀಗಿದ್ದರೂ ಸಿಎಂ ಪೊಲೀಸರಿಗಾಗಿ ಈ ಹೆಚ್ಚುವರಿ ವೆಚ್ಚಕ್ಕೂ ಒಪ್ಪಿಗೆ ನೀಡಿದ್ದಾರೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.

ಪೊಲೀಸ್ ಇಲಾಖೆ ಇತರ ಇಲಾಖೆಗಳಿಗಿಂತ ಹಿಂದುಳಿದಿದೆ. ಹೀಗಾಗಿ ಪೊಲೀಸ್ ಇಲಾಖೆಯನ್ನು ಎಲ್ಲ ಸರ್ಕಾರಿ ಇಲಾಖೆಗಳಿಗೆ ಸರಿಸಮಾನವಾಗಿ ತರುವ ನಿಟ್ಟಿನಲ್ಲಿ ಔರಾಧ್ಕರ್ ವರದಿ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಮುಂದಿನ 10 ದಿನಗಳಲ್ಲಿ ಸರ್ಕಾರಿ ನಿಯಮಗಳ ಪ್ರಕಾರ ಈ ಆದೇಶ ಹೊರಬೀಳಲಿದ್ದು, ಪೊಲೀಸ ಇಲಾಖೆಗೆ ಬಂಪರ್​ ಲಾಟರಿ ಹೊಡೆಯಲಿದೆ. ಇನ್ನು ಈ ಸಭೆ ಬಳಿಕ ಪ್ರಸ್ತಾವನೆ ಕ್ಯಾಬಿನೆಟ್​​ ಮುಂದೇ ಹೋಗಲಿದ್ದು, ಅಲ್ಲಿನ ಒಪ್ಪಿಗೆಯ ಬಳಿಕ ಆದೇಶ ಜಾರಿಗೆ ಬರಲಿದೆ ಎಂಬ ಸಿಹಿ ಸುದ್ದಿಯನ್ನು ಎಂ.ಬಿ.ಪಾಟೀಲ್ ಖಚಿತ ಪಡಿಸಿದ್ದಾರೆ.

ಇದಲ್ಲದೇ ಪ್ರಮೋಶನ್​​ ವಿಚಾರದಲ್ಲೂ ಕೂಡ ಔರಾಧ್ಕರ್ ವರದಿಯ ಅಂಶಗಳನ್ನು ಪರಿಗಣಿಸಲು ಸರ್ಕಾರವನ್ನು ಕೋರಲಾಗಿದ್ದು, ಇದಕ್ಕೂ ಸಿಎಂ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಒಟ್ಟಿನಲ್ಲಿ ರೈತರ ಬಳಿಕ ಇದೀಗ ಪೊಲೀಸರ ಮುಖದಲ್ಲೂ ನಗು ಅರಳಿಸುವಲ್ಲಿ ಸಿಎಂ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

Sponsored :

Related Articles