ನವ ಕರ್ನಾಟಕ ಮಂಥನ ಸಭೆಗೆ ಸಿಎಂ ಚಾಲನೆ!

182
CM Held Navakarnataka Manthan Meeting At Bengaluru.
CM Held Navakarnataka Manthan Meeting At Bengaluru.

ಚುನಾವಣೆ ವೇಳೆಯಲ್ಲಿ ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಎಂ ಸಿದ್ದರಾಮಯ್ಯ,

ad

ತಮ್ಮ ನೇತೃತ್ವದ ಸರ್ಕಾರ ನಡೆಸಿದ ಅಭಿವೃದ್ಧಿ ಕಾರ್ಯವನ್ನು ಪ್ರಚಾರಗೊಳಿಸಲು ಮಂಥನ ಸಭೆ ನಡೆಸಿದ್ದಾರೆ. ನಗರದ ಖಾಸಗಿ ಹೊಟೇಲ್​ನಲ್ಲಿ ನಡೆದ ಸಮಾರಂಭದಲ್ಲಿ ಕಳೆದ ಐದು ವರ್ಷಗಳಿಂದ ಸಾಧಿಸಿದ ಪ್ರಗತಿಯನ್ನು ಕಿರುಚಿತ್ರದ ಮೂಲಕ ಜನರ ಮುಂದಿಡಲಾಯಿತು.
ಇದಲ್ಲದೇ ಮುಂದಿನ ಏಳು ವರ್ಷಗಳ ವಿಷನ್ 2025ರ ಮುನ್ನೋಟವನ್ನು ಇಲ್ಲಿ ಬಿಡುಗಡೆ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ತುತ್ತು ಅನ್ನಕ್ಕಾಗಿ ಪರದಾಡ್ತಾ ಇರೋದನ್ನು ನಾನು ನನ್ನ ಕಣ್ಣಾರೆ ನೋಡಿದ್ದೇನೆ.

 

 

ಅದಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದೆನೆ. 1ಕೋಟಿ ಹತ್ತು ಲಕ್ಷ ಬಿಪಿಎಲ್ ಕಾರ್ಡ್ ದಾರರು ಈ ಯೋಜನೆ ಫಲ ಪಡೆಯುತ್ತಿದ್ದಾರೆ. ಇಡಿ ದೇಶದಲ್ಲಿ ಏಳು ಕೆಜಿ ಅಕ್ಕಿ ಉಚಿತವಾಗಿ ಬೇರೆ ರಾಜ್ಯವೂ ಕೊಡುತ್ತಿಲ್ಲ. ಹಾಗಾಗಿ ಸುಮಾರು ನಾಲ್ಕು ಕೋಟಿ ಜನ ಇದರ ಫಲ ಪಡೆಯುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಕೂಡ ಮಾಡಿದ್ದೇವೆ. ಕೆಲವರು ಇದನ್ನು ಟೀಕಿಸಿದರು. ಜನರನ್ನು ಸೋಮಾರಿ ಮಾಡ್ತಿರಾ ಎಂದರು. ಆದರೆ ಅವರೆಲ್ಲ ಹೊಟ್ಟೆ ತುಂಬಿದವರು ಆರೋಪ ಮಾಡ್ತಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ. ಕ್ರೈಂ ರೆಕಾರ್ಡ್ ಬ್ಯೂರೋ ಪ್ರಕಾರ ನಾವು ಹತ್ತನೆಯ ಸ್ಥಾನದಲ್ಲಿದ್ದೇವೆ. ಆರೋಪ ಮಾಡುವವರ ರಾಜ್ಯಗಳು ಮೊದಲ ಒಂಬತ್ತು ಸ್ಥಾನದಲ್ಲಿದೆ ಎಂದರು.  ಇನ್ನು ವೇದಿಕೆಯಲ್ಲಿ ಸಚಿವರಾದ ಬಸವರಾಜ ರಾಯರೆಡ್ಡಿ, ಕೆ ಜೆ ಜಾರ್ಜ್,ತನ್ವೀರ್ ಸೇಠ್, ಆಂಜನೇಯ,ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್, ರಾಜ್ಯಸಭಾ ಸದಸ್ಯ ರಾಜೀವ್ ಗೌಡ ,ಮುಖ್ಯ ಕಾರ್ಯದರ್ಶಿ ರತ್ನಪ್ರಭ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Sponsored :

Related Articles