ಖೇಣಿ ನೇಣಿನಲ್ಲಿ ಕಾಂಗ್ರೆಸ್ ! ಹಲವು ಕೈ ಶಾಸಕರ ರಾಜೀನಾಮೆಗೆ ನಿರ್ಧಾರ !! ಕ್ಯಾರೇ ಅಂತಿಲ್ಲ ಸಿಎಂ ಸಿದ್ದರಾಮಯ್ಯ!!

1016

ನೈಸ್ ಹಗರಣದ ರುವಾರಿ ಅಶೋಕ್ ಖೇಣಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿರೋ ಬಗ್ಗೆ ಕಾಂಗ್ರೆಸ್ ನ ಒಳಗಡೆ ಭಾರೀ ಅಸಮಾದಾನ ಭುಗಿಲೆದ್ದಿದೆ.‌ ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಯಾವ ಆಕ್ರೋಶವನ್ನೂ ಕ್ಯಾರೇ ಅನ್ನದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಪಕ್ಷದೊಳಗೆ ಅಸಮಾದಾನಕ್ಕೆ ಕಾರಣವಾಗಿದೆ. ರೈತರ ಜಮೀನನ್ನು ನೈಸ್ ರಸ್ತೆಗೆ ಬಳಕೆ ಮಾಡಿಕೊಂಡಿದ್ದ ಅಶೋಕ್ ಖೇಣಿ ಬಹುಕೋಟಿ ಹಗರಣ ನಡೆಸಿದ್ದರು ಎಂದು ದೊಡ್ಡ ಚಳುವಳಿಯೇ ನಡೆದಿತ್ತು. ಅಂತಹ ಖೇಣಿ ಯನ್ನು ಖುದ್ದು ಮುಖ್ಯಮಂತ್ರಿಯೇ ಭೇಟಿಯಾಗಿ ಪಕ್ಷಕ್ಕೆ ಕರೆತರುವ ಅಗತ್ಯವೇನಿದೆ ಎಂದು ಕಾಂಗ್ರೆಸ್ಸಿನೊಳಗೆ ಪ್ರಶ್ನೆಗಳು ಎದ್ದಿವೆ. ಈಗಾಗಲೇ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಪುತ್ರ ಅಜಯ್ ಸಿಂಗ್ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಬೀದರ್ ಕಾಂಗ್ರೆಸ್ ಘಟಕ ಈಗಾಗಲೇ ಪ್ರತಿಭಟನೆ ನಡೆಸಿದ್ದು ಅಶೋಕ್ ಖೇಣಿಯನ್ನು ಉಚ್ಚಾಟಿಸುವಂತೆ ಆಗ್ರಹಿಸಿದೆ.

ad

ಈಗಾಗಲೇ ಐವತ್ತು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಗೆ ನೀಡಿದ್ದ ಬೆಂಬಲವನ್ನು ಹಿಂಪಡೆಯಲು ಜೆಡಿಎಸ್ ನಿರ್ಧರಿಸಿದೆ. ಆದರೆ ಇವೆಲ್ಲದರ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತ್ರ ಉಡಾಫೆಯಾಗಿ ಪ್ರತಿಕ್ರಿಯಿಸಿದ್ದಾರೆ. ಅಶೋಕ್ ಖೇಣಿ ಇಲ್ಲಿಯವರೆಗೆ ಜೈಲಿಗೂ ಹೋಗಿಲ್ಲ, ಅವರು ಸಿಎಂ ಅಭ್ಯರ್ಥಿಯೂ ಅಲ್ಲ. ಕೇವಲ ಅವರನ್ನು ಷರತ್ತುರಹಿತವಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದು, ಯಾವುದೇ ಭರವಸೆ ನೀಡಲಾಗಿಲ್ಲ. ಖೇಣಿಗೆ ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

Sponsored :

Related Articles