ಕಮಿಷನರ್​ ಭಾಸ್ಕರ್ ರಾವ್ ಪೋನ್ ಕದ್ದಾಲಿಕೆ ಪ್ರಕರಣ! ಡಿಜಿಐಜಿಪಿಗೆ ವರದಿ ಸಲ್ಲಿಸಿದ ಸಿಸಿಬಿ!!

561

ಬಿಟಿವಿ ಬಯಲಿಗೆಳದಿದ್ದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರವರ ಪೋನ್ ಕದ್ದಾಲಿಕೆ ಪ್ರಕರಣದ ವರದಿಯನ್ನ ಸಿಸಿಬಿ ರೆಡಿ ಮಾಡಿದ್ದು, ಭಾಸ್ಕರ್ ರಾವ್ ಅದನ್ನ ಈಗ ಡಿಜಿ ಐಜಿಪಿ ನೀಲಮಣಿ ಎನ್ ರಾಜುಗೆ ನೀಡಿದ್ದಾರೆ.


ಪರ್ಹಾಜ್ ಎಂಬಾತನೊಂದಿಗೆ ಭಾಸ್ಕರ್ ರಾವ್ ನಡೆಸಿದ್ದಾರೆ ಎನ್ನಲಾದ ಅಡೀಯೋ ವೈರಲ್ ಆಗಿತ್ತು. ಹೀಗಾಗಿ ಭಾಸ್ಕರ್ ರಾವ್ ನನ್ನ ಪೋನ್ ಕದ್ದಾಲಿಸಲಾಗಿದೆ ಎಂದು ಡಿಜಿ ಐಜಿಪಿಗೆ ದೂರು ನೀಡಿದ್ರು. ಹೀಗಾಗಿ ಡಿಜಿ ಐ ಜಿ ಪಿ ಈ ಪ್ರಕರಣವನ್ನ ಸಿಸಿಬಿ ಮುಖಾಂತರ ತನಿಖೆ ಮಾಡಿಸಲು‌ಸೂಚಿಸಿದ್ದರು.. ಅದರಂತೆ ಸಿಸಿಬಿ ಈಗ ವರದಿ ನೀಡಿದೆ.

ad


ಅಸಲಿಗೆ ಈ ಸಂಭಾಷಣೆ ಟ್ಯಾಪ್ ಆಗಿರೋದು ಮೇ ತಿಂಗಳಲ್ಲಿ.. ಸಿಸಿಬಿ ಅಧಿಕಾರಿಗಳು ಅದೊಂದು ವಂಚನೆ ಪ್ರಕರಣದ ಹಿಂದೆ ಬಿದಿದ್ರು.. ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದಾಖಲಾಗಿದ್ದ, ಇನ್ಜಾಜ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಸಿಸಿಬಿಗೆ ವರ್ಗಾವಾಗಿತ್ತು.. ಈ ಪ್ರಕರಣದ ಪ್ರಮುಖ ಆರೋಪಿಯಾದ ಮಿಸ್ಬಾ ಮುಖ್ಹಾರಾಮ್ ಎಂಬಾತನ ಹುಡುಕಾಟದಲ್ಲಿ ಸಿಸಿಬಿ ತೊಡಗಿಕೊಂಡಿದ್ರು..


ಈ ವೇಳೆ ಆತನಿಗೆ ನಿಕಟ ವ್ಯಕ್ತಿಯಾಗಿ ಹಾಗೂ ಆತ್ಮೀಯ ಗೆಳೆಯನಾಗಿದ್ದವನೇ ಈ ಫರ್ಹಾಜ್.. ಹೀಗಾಗಿ ಮುಖ್ಹಾರಾಮ್ ಬಂಧನಕ್ಕೆ ಫರ್ಹಾಜ್ ಎಂಬಾತನ ಮೊಬೈಲ್ ಟ್ಯಾಪಿಂಗ್ ಮಾಡಲಾಗಿತ್ತು.. ಅದು ಕೂಡ ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಇಂಟರ್ ಸೆಪ್ಟರ್ ಮುಖಾಂತರ ಕಾನೂನು ಅನುಮತಿ ಮೇರೆಗೆ ಕಾಲ್ ಟ್ಯಾಪಿಂಗ್ ಮಾಡಲಾಗಿತ್ತು.. ಇನ್ನು ಈ ಸಂದರ್ಭದಲ್ಲಿ ಮುಖ್ಹಾರಾಮ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ರು..


ಆದ್ರೆ ಈ ವೇಳೆ ಫರ್ಹಾಜ್ ನಂಬರ್ ಟ್ಯಾಪಿಂಗ್ ಸಮಯದಲ್ಲಿ ಭಾಸ್ಕರ್ ರಾವ್ ಆತನೊಂದಿಗೆ ಈ ಸಂಭಾಷಣೆ ನಡೆಸಿರೋದು ತನಿಖೆ ವೇಳೆ ತಿಳಿದು ಬಂದಿದೆ.. ಅದ್ರೆ ಗುಪ್ತ ದಾಖಲೆಯಾಗಬೇಕಿದ್ದ ಪೋನ್ ಕಾಲ್ ರೆಕಾರ್ಡ್ ಹೊರ ಬಂದಿದ್ದು ಹೇಗೆ ಅನ್ನೊದು ಸದ್ಯ ತನಿಖೆ ಮಾಡಬೇಕಿರುವ ವಿಚಾರ

Sponsored :

Related Articles