MLA ಗಳ ರಾಜೀನಾಮೆಗೆ ಬೆಚ್ಚಿದ ಕಾಂಗ್ರೆಸ್​! ಕಣಕ್ಕಿಳಿದ ಟ್ರಬಲ್ ಶೂಟರ್ ಡಿಕೆಶಿ! ರಿವರ್ಸ್ ಆಫರೇಶನ್​ ಎಚ್ಚರಿಕೆ ನೀಡಿದ ಗುಂಡೂರಾವ್​ !!

3913
9900071610

ಸಾಲು-ಸಾಲು ಶಾಸಕರು ರಾಜೀನಾಮೆ ಸಲ್ಲಿಸಿ ಹೊರಬರುತ್ತಿದ್ದಂತೆ ಶಾಸಕರ ರಾಜೀನಾಮೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ನಾವು ರಿವರ್ಸ್​ ಆಫರೇಶನ್​ಗೆ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗುಡುಗಿದ್ದು, ಬಿಜೆಪಿಯನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.

ad


ಕಾಂಗ್ರೆಸ್​ನ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಳ್ಳಾರಿಯ ವಿಜಯನಗರ ಶಾಸಕ ಆನಂದ ಸಿಂಗ್ ಇಂದು ದಿಢೀರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಸೃಷ್ಟಿಯಾಗಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಕೆಶಿ ನಿವಾಸದಲ್ಲಿ ಕಾಂಗ್ರೆಸ್​ ನಾಯಕರು ಪ್ರತ್ಯೇಕ ಸಭೆ ನಡೆಸಿ ಅತೃಪ್ತರ ಮನವೊಲಿಸುವ ತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.


ಇನ್ನೊಂದೆಡೆ ಸರ್ಕಾರ ಉರುಳಿಸುವ ಬಿಜೆಪಿ ಪ್ರಯತ್ನಗಳ ಬಗ್ಗೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಾವೇನು ರಾಜಕೀಯ ಸನ್ಯಾಸಿಗಳಲ್ಲ. ಅಗತ್ಯ ಬಿದ್ದರೇ ನಾವು ರಿವರ್ಸ್ ಆಫರೇಶನ್ ಮಾಡುತ್ತೇವೆ ಎಂದಿದ್ದಾರೆ.

 

ಇನ್ನೊಂದೆಡೆ ಡಿಕೆಶಿ ಕೂಡ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಿದ್ದು, ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆನ್ನಲ್ಲೇ ಡಿಕೆಶಿ ನಾಲ್ವರು ಬಿಜೆಪಿ ಶಾಸಕರಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಎಮ್​ಎಲ್​ಎಗಳಿಗೆ ಬಿಜೆಪಿ ಹಾಗೂ ಬಿಜೆಪಿ ಅತೃಪ್ತರ ಮೇಲೆ ಕಾಂಗ್ರೆಸ್​​ ಕಣ್ಣಿಟ್ಟಿದ್ದು, ಪ್ರತಿಕ್ಷಣ ಹೊಸ ಹೊಸ ಬೆಳವಣಿಗೆಗಳಿಗೆ ರಾಜ್ಯ ಸಾಕ್ಷಿಯಾಗುತ್ತಿದೆ.

Sponsored :


9900071610