ಶಿವಮೊಗ್ಗದಲ್ಲಿ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರ ಯತ್ನ..

381

ಆಪರೇಷನ್ ಕಮಲ, ಬಿಜೆಪಿಯ ಕುದುರೆ ವ್ಯಾಪಾರ ವಿರೋಧಿಸಿ ಶಿವಮೊಗ್ಗದ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯುವ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು. ಯಡಿಯೂರಪ್ಪ ಮತ್ತು ಈಶ್ವರಪ್ಪಗೆ ಬುದ್ಧಿ ಭ್ರಮಣೆಯಾಗಿದ್ದು ಕೂಡಲೇ ಹುಚ್ಚಾಸ್ಪತ್ರೆಗೆ ದಾಖಲಿಸಬೇಕು.. ಅದಕ್ಕಾಗಿ ಮೆಗ್ಗಾನ್ ಒಪಿಡಿ ಚೀಟಿ ತಂದಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಒಪಿಡಿ ಚೀಟಿ ಹಿಡಿದುಕೊಂಡೇ ಆಕ್ರೋಶ ವ್ಯಕ್ತಪಡಿಸಿದ್ರು.


ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ.. ಮಂಗನಕಾಯಿಲೆಗೆ ಹಲವಾರು ಜನರು ಬಲಿಯಾಗಿದ್ದಾರೆ. ಇಷ್ಟಾದ್ರೂ ಅಪ್ಪ ಮತ್ತು ಮಕ್ಕಳು ಕುದುರೆ ವ್ಯಾಪಾರ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಯಡಿಯೂರಪ್ಪನವರು ಎಲ್ಲೇ ಇದ್ರೂ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಡೋದಿಲ್ಲ..

ad

 

 

ಅವರನ್ನು ಆಸ್ಪತ್ರೆಗೆ ಸೇರಿಸೇ ಸೇರಿಸ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿ ಯಡಿಯೂರಪ್ಪ ಮತ್ತು ಈಶ್ವರಪ್ಪ ವಿರುದ್ಧ ಘೋಷಣೆ ಹಾಕಿದ್ರು. ಯಡಿಯೂರಪ್ಪ ಮನೆಯ ಬಳಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

Sponsored :

Related Articles