ಸಿಎಂ ರಿಲೀಫ್ ಫಂಡ್​ಗೆ ಹೆಚ್​ ಡಿ ದೇವೇಗೌಡರ ಕೊಡುಗೆ! ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದ ಮಾಜಿಪ್ರಧಾನಿಗಳು ಏನಂದ್ರು ಗೊತ್ತಾ?!

3340
9900071610

ರಾಜ್ಯದಲ್ಲಿ ರಣಭೀಕರ ಪ್ರವಾಹದಿಂದಾಗಿ ಜನರು ಮನೆ ಮಠ ಕಳೆದುಕೊಂಡು ಅಕ್ಷರಶಃ ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರ ಸಹಾಯಕ್ಕೆ ರಾಜ್ಯದ ಜನರು ಕೈ ಲಾದಷ್ಟು ಸಹಾಯಸ್ತ ಚಾಚಿದ್ದಾರೆ. ಇನ್ನು ದೊಡ್ಡ ಗೌಡರ ಕುಟುಂಬವು ಸಹಾ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.

ad

 

 

ಒಂದೆಡೆ ಸಚಿವ ಪ್ರಜ್ವಲ್ ರೇವಣ್ಣ ತಮ್ಮ ಒಂದು ತಿಂಗಳ ಸಂಬಳ ನೆರೆ ಸಂತ್ರಸ್ತರಿಗೆ ನೀಡಿದ್ದಾರೆ. ಜೊತೆಗೆ ಅವರೇ ಪ್ರವಾಹ ಪೀಡಿತ ಸ್ಥಳಗಳಿಗೆ ಹೋಗಿ ಸಂತ್ರಸ್ತರ ಸಹಾಯದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಮ್ಮ ಅನಾರೋಗ್ಯದ ನಡುವೆಯು ಪ್ರವಾಹದ ಪರಿಸ್ಥಿತಿ ಪರಿಶೀಲನೆ ಮಾಡುತ್ತಿದ್ದಾರೆ.

 

ಅಲ್ಲದೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡಾ ಪ್ರವಾಹ ಸಂತ್ರಸ್ತರಿಗೆ ಬೇಕಾಗಿರುವ ಮೂಲಭೂತ ವಸ್ತುಗಳನ್ನು ನೀಡಿ, ಪ್ರವಾಹ ಪೀಡಿತ ಸ್ಥಳಗಳಿಗೆ ಹೋಗಿ ಸಂತ್ರಸ್ತರ ಸಹಾಯದಲ್ಲೂ ತೊಡಗಿದ್ದಾರೆ. ಅಲ್ಲದೇ ತಮ್ಮ ಕುರುಕ್ಷೇತ್ರ ಚಿತ್ರದ ಸಂಭಾವನೆಯನ್ನು ನೆರೆ ಸಂತ್ರಸ್ಥರಿಗೆ ದಾನವಾಗಿ ನೀಡಿದ್ದಾರೆ.

ಇದರ ಬೆನ್ನಲ್ಲೇ ಇದೀಗಾ ಮಾಜಿ ಪ್ರಧಾನಿ ದೇವೇಗೌಡ ಪ್ರವಾಹ ಸಂತ್ರಸ್ತರ ನೆರವಿಗೆಂದು ಸ್ವಂತ ಖಾತೆಯಿಂದ ಎರಡು ಲಕ್ಷ ರೂಪಾಯಿ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿರುವುದಾಗಿ ತಿಳಿಸಿ ಮಾನವೀಯತೆಯನ್ನ ಮೆರೆದಿದ್ದಾರೆ.ನಿನ್ನೆ ಜೆಪಿ ನಗರದ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೊಡ್ಡ ಗೌಡರು ಈಗ ನನಗೆ ಯಾವುದೇ ಸಂಬಳ ಬರುತ್ತಿಲ್ಲ, ಯಾವ ಪಿಂಚಣಿಯೂ ಬರುತ್ತಿಲ್ಲ, ನನ್ನ ಖಾತೆಯಲ್ಲಿ ಸುಮಾರು 24 ಲಕ್ಷ ಹಣ ಇರಬಹುದು ಅದರಲ್ಲಿ ಎರಡು ಲಕ್ಷ ರೂಪಾಯಿಯನ್ನು ಪ್ರವಾಹ ಸಂತ್ರಸ್ತರ ನೆರವಿಗೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದೇನೆ ಎಂದು ದೇವೇಗೌಡ ಹೇಳಿದ್ದಾರೆ

 

ರಣಭೀಕರ ಮಳೆಯಿಂದಾಗಿ ಕರ್ನಾಟಕದ 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಾವೇರಿ ಭಾಗದಲ್ಲೂ ಪ್ರವಾಹ ಆಗಿದೆ. ಹೀಗಾಗಿ ತುರ್ತಾಗಿ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡುವಂತೆ ಮೋದಿಗೆ ಪತ್ರ ಬರೆದಿದ್ದೇನೆ . ಯಡಿಯೂರಪ್ಪ ಮೂರು ಸಾವಿರ ಕೋಟಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದಾರೆ. ನನ್ನ ಅನುಭವದ ಮೇಲೆ ನಾನು ಮಧ್ಯಂತರವಾಗಿ 5 ಸಾವಿರ ಕೋಟಿ ಕೊಡಲಿ ಎಂದು ಕೇಳಿದ್ದೇನೆ’ ಎಂದರು ಅಲ್ಲದೆ ‘ಪ್ರವಾಹ ಪರಿಸ್ಥಿತಿಯಲ್ಲಿ ನಾವುಗಳ್ಯಾರು ರಾಜಕೀಯ ಮಾಡುವುದು ಬೇಡ ಎಂದಿದ್ದಾರೆ.ಮಳೆ ನಿಂತಿದ್ದ ತಕ್ಷಣವೆ ನೆರೆ ಪೀಡಿತ ಪ್ರದೇಶಗಳಿಗೆ ಭೇಡಿ ನೀಡಿ ಜನರ ಸಮಸ್ಯೆಗಳನ್ನ ಆಲಿಸುತ್ತೇನೆಂದು ಹೆಚ್​ ಡಿ ದೇವೇಗೌಡರು ತಿಳಿಸಿದ್ದಾರೆ.

Sponsored :


9900071610