ಜಯನಗರ RTO ಕಚೇರಿ ಮೇಲೆ ಎಸಿಬಿ ರೇಡ್..! ಕಚೇರಿಯಲ್ಲಿ ಪತ್ತೆಯಾಯ್ತು ಕಂತೆ ಕಂತೆ ಹಣ!!

2131

ಜಯನಗರದ ಆರ್​ಟಿಒ ಕಚೇರಿ ಮೇಲೆ ACB ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ RTO ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಹಾಗದರೇ ಈ ದಾಳಿಯ ವೇಳೆ ಅಧಿಕಾರಿಗಳಿಗೆ ಏನೇನ್ ಸಿಕ್ಕಿದೆ ಗೊತ್ತಾ?

ad

ಹೌದು ಇಂದು ಬೆಂಗಳೂರಿನ ಜಯನಗರ RTO ಕಚೇರಿ ಮೇಲೆ ACB ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ 10ಕ್ಕೂ ಹೆಚ್ಚು RTO ಬ್ರೋಕರ್​ಗಳನ್ನು ವಶಪಡಿಸಿಕೊಂಡಿದ್ದು, ಅಲ್ಲದೆ ದಾಳಿ ಮಾಡುತ್ತಿದ್ದಂತೆ ಬ್ರೋಕರ್ ಮುನಿಯಪ್ಪ ಎಂಬುವವರು ಪರಾರಿಯಾಗಲು ಯತ್ನಿಸಿದ್ದು, ACB ಅಧಿಕಾರಿಗಳು ಚೇಸ್ ಮಾಡಿ ಬ್ರೋಕರ್ ಮುನಿಯಪ್ಪನನ್ನು ಹಿಡಿದಿದ್ದಾರೆ.

ಸದ್ಯ 20 RTO ಸಿಬ್ಬಂದಿಯ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನೂ ಕಛೇರಿಯಲ್ಲಿ 2.70ಲಕ್ಷ ಹಣವಿದ್ದ ಬ್ಯಾಗ್ ಪತ್ತೆಯಾಗಿದೆ, ಈ ಕುರಿತಂತೆ ACB ಅಧಿಕಾರಿಗಳ ಪ್ರಶ್ನೆಗೆ ಯಾರು ಕೂಡ ಉತ್ತರಿಸುತ್ತಿಲ್ಲ. ಜೊತೆಗೆ ಬ್ರೋಕರ್​ಗಳ ಕೈಯಲ್ಲಿದ್ದ ಭಾರೀ ಪ್ರಮಾಣದ ಹಣವನ್ನು ಕೂಡಾ ಜಪ್ತಿ ಮಾಡಲಾಗಿದೆ.

ಈವರೆಗೂ ಬ್ರೋಕರ್ ಗಳ ಬಳಿ ಇದ್ದ 1.40 ಲಕ್ಷ ರೂಪಾಯಿ ಹಣವನ್ನು ಲೆಕ್ಕ ಹಾಕಲಾಗಿದೆ ಆದರೆ ಲೆಕ್ಕ ಹಾಕುತ್ತಿದ್ದರೂ ಇನ್ನೂ ಹಣ ಉಳಿದಿದೆ. ಅಲ್ಲದೆ RTO ಗಾಯತ್ರಿ ದೇವಿ ಸಹಿತ RTO ಸಿಬ್ಬಂದಿಯ ವಿಚಾರಣೆ ನಡೆಸಲಾಗುತ್ತಿದ್ದು, ಬ್ರೋಕರ್​ಗಳ ಬಳಿ ಇದ್ದ ಹಣದ ಬ್ಯಾಗ್​ನಲ್ಲಿ ಸರ್ಕಾರಿ ಸೀಲ್​ಗಳು, RC, DL ಪರ್ಮಿಟ್​ಗೆ ಸಂಬಂಧಿಸಿದ ದಾಖಲೆಗಳೂ ಸಹ ಪತ್ತೆಯಾಗಿದೆ.

ಇನ್ನೂ ಪ್ರತಿದಿನ RTO ಕಚೇರಿಯಲ್ಲಿ 5 ಕೋಟಿ ಕಲೆಕ್ಷನ್ ಆಗುತ್ತದೆ ಎಂದು ಹೇಳಲಾಗುತ್ತಿದ್ದು. ಬೆಂಗಳೂರಿನಲ್ಲಿ ಒಟ್ಟು 10 RTO ಕಚೇರಿಗಳಿದ್ದು, ಹಾಗದರೇ ತಿಂಗಳಿಗೆ ಏನಿಲ್ಲವೆಂದರೂ 10 RTOಗಳಿಂದ 150 ಕೋಟಿ ಕಲೆಕ್ಷನ್ ಆಗುತ್ತದೆಯೋ ಏನೋ ..

Sponsored :

Related Articles